HEALTH TIPS

No title

                    ರೋಗ ಬಾಧಿಸದಂತೆ ಜಾಗ್ರತೆ ಅಗತ್ಯ-ಡಾ.ಅಶ್ವಿನ್ ಪರಕ್ಕಜೆ
                       ಶ್ರೀಭಾರತೀ ವಿದ್ಯಾಪೀಠದಲ್ಲಿ ಆರೋಗ್ಯ ಕಾಯರ್ಾಗಾರ
    ಬದಿಯಡ್ಕ : ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ರೋಗ ಮಹಾಮಾರಿಯಾಗಿ ಪರಿಣಮಿಸುತ್ತಿದ್ದು, ಜನತೆಗೆ ತಲೆನೋವಾಗಿ ಕಾಡುತ್ತಿದೆ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಸಮಾಜದ ಹಿತದೃಷ್ಟಿಯಿಂದ ಉತ್ತಮ ಎಂದು ಬಿ.ಡಿ.ಎಸ್. ಪದವೀಧರ ಡಾ. ಅಶ್ವಿನ್ ಪರಕ್ಕಜೆ ಹೇಳಿದರು.
ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ನಡೆದ ಆರೋಗ್ಯಮಾಹಿತಿ ಕಾಯರ್ಾಗಾರದಲ್ಲಿ ಮಕ್ಕಳಿಗೆ ವಿಶೇಷ ಆರೋಗ್ಯ ಮಾಹಿತಿ ಮಾರ್ಗದರ್ಶನ ನೀಡಿ ಮಾತನಾಡಿದರು.
   ಮಳೆಗಾಲದಲ್ಲಿ ಹರಡುವ ರೋಗಗಳಾದ ಡೆಂಗ್ಯೂ, ಚಿಕುನ್ಗುನ್ಯಾ, ಮಲೇರಿಯಾ ಮೊದಲಾದವುಗಳ ಉತ್ಪತ್ತಿ, ಹರಡುವ ವಿಧಾನ, ರೋಗಲಕ್ಷಣಗಳು ಮತ್ತು ಅವುಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಚಿತ್ರ ಹಾಗೂ ವೀಡಿಯೋ ಪ್ರದರ್ಶನದ ಮೂಲಕ ತಿಳಿಸಿದರು. ಸೊಳ್ಳೆ ಕಡಿತ ನಿವಾರಣೆಗೆ ಸೊಳ್ಳೆ ಪರದೆಗಳ ಬಳಕೆಯು ಉತ್ತಮ, ರೋಗಲಕ್ಷಣ ಕಂಡಕೂಡಲೇ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಹತೋಟಿಯಲ್ಲಿಡಬಹುದು. ವಿಶೇಷವಾಗಿ ಮಳೆಗಾಲದಲ್ಲಿ ಸಿಕ್ಕ ಸಿಕ್ಕ ಗಲ್ಲಿಗಳಲ್ಲಿ ತಯಾರಾಗುವಂತಹ ಆಹಾರಗಳನ್ನು ಸೇವಿಸಬಾರದು. ಕುಡಿಯಲು ಬಿಸಿನೀರಿನ ಬಳಕೆಯು ಹೆಚ್ಚು ಸೂಕ್ತವಾಗಿದ್ದು, ನಿಯಮಿತವಾದ ಆಹಾರ ಸೇವನೆಯಿಂದ ರೋಗ ಬಾರದಂತೆ ತಡೆಗಟ್ಟಬಹುದು. ಸೊಳ್ಳೆ ಕಡಿತಕ್ಕೆ ಹಿರಿಯರಿಂದಲೂ ನಡೆದುಕೊಂಡು ಬಂದ ತೆಂಗಿನ ಎಣ್ಣೆಯನ್ನು ಚರ್ಮಗಳಿಗೆ ಲೇಪಿಸುವುದೂ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಿಂದಿನಿಂದಲೂ ಉತ್ತಮ ಜೀವನಕ್ಕಾಗಿ ಪಾಲಿಸಿಕೊಂಡು ಬಂದಿರುವ ಹಿರಿಯ ಜೀವನಕ್ರಮಗಳು ಬದುಕನ್ನು ಉಲ್ಲಸಿತಗೊಳಿಸುತ್ತದೆ. `ಆರೋಗ್ಯವೇ ಭಾಗ್ಯ'ವೆಂಬ ನುಡಿಗಟ್ಟನ್ನು ಉಚ್ಚರಿಸುತ್ತಾ ಹಿರಿಯರ ಅನುಭವ ನುಡಿಗಳನ್ನು ಅನಾದರಿಸದೆ ಪಾಲಿಸಿಕೊಂಡು ಬರಬೇಕು ಎಂದರು.
   ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸ್ಮರಣಿಕೆಯನ್ನು ನೀಡಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸಂಯೋಜಿಸಿದರು. 10ನೇ ತರಗತಿಯ ಗಾಮಿನಿ ಸ್ವಾಗತಿಸಿ, ಅಭಿರಾಮ ಕಾಶ್ಯಪ್ ವಂದಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries