HEALTH TIPS

No title

                ಸತತ ನಾಲ್ಕನೇ ವರ್ಷದ ಶ್ರೀಪದ್ದತಿ ನಾಟಿಗೆ ಚಾಲನೆ
     ಉಪ್ಪಳ: ಕಡಿಮೆ ಕೃಷಿ ಭೂಮಿಯಲ್ಲಿ ಉತ್ತಮ ತಳಿಯ ಅತಿ ಹೆಚ್ಚು ಬೆಳೆ ನೀಡುವ ಶ್ರೀಪದ್ದತಿ ಭತ್ತದ ಬೇಸಾಯದ ಮೂಲಕ ಗಮನ ಸೆಳೆದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸತತ ನಾಲ್ಕನೇ ವರ್ಷದ  ಬೆಳೆಗೆ ಪೈವಳಿಕೆ ಸಮೀಪದ ಕಯ್ಯಾರಿನಲ್ಲಿ ಮಂಗಳವಾರ ನೇಜಿ ನೆಡುವ ಚಟುವಟಿಕೆಗೆ ಚಾಲನೆ ನಡೆಸಲಾಯಿತು.
  ಜೋಡುಕಲ್ಲು ಕಯ್ಯಾರಿನ ಡಾ. ಕೆ.ಪಿ. ಹೊಳ್ಳರ ಅರ್ಧ ಎಕ್ರೆ ಗದ್ದೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜೊಡುಕಲ್ಲು ಮತ್ತು ಪೈವಳಿಕೆ ಒಕ್ಕೂಟಗಳ ನೇತೃತ್ವದಲ್ಲಿ "ಬಾಸುಮತಿ" ತಳಿಯ ಭತ್ತದ ನೇಜಿಯನ್ನು ಶ್ರೀಪದ್ದತಿ ರೀತಿಯಲ್ಲಿ ನೆಡಲಾಯಿತು.
   ಯಾರೀ ವೈದ್ಯರು:
   ಉಪ್ಪಳದಲ್ಲಿ ಕೆಎನ್ಎಚ್ ನಸರ್ಿಂಗ್ ಹೋಂನ ಸಂಸ್ಥಾಪಕರಾಗಿ ಒಂದು ಕಾಲದಲ್ಲಿ ವೈದ್ಯಕೀಯ ಸೇವೆಯಲ್ಲಿ ಗಣನೀಯ ಸೇವೆಸಲ್ಲಿಸಿದ್ದ ಡಾ.ಕೆ.ಪಿ. ಹೊಳ್ಳರು ಇದೀಗ ವಿಶ್ರಾಂತ ಜೀವನನವನ್ನು ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಕಯ್ಯಾರಿನ ಸ್ವ ಗೃಹದಲ್ಲಿ ಕಳೆಯುತ್ತಿದ್ದು, ಜೊತೆಗೆ ಅಡಿಕೆ, ತೆಂಗು, ಬಾಳೆ ಹಾಗೂ ಭತ್ತದ ವ್ಯವಸಾಯದಲ್ಲಿ ಇಳಿವಯಸ್ಸಿನಲ್ಲೂ ಆಸಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರದ ಯೋಜನೆಯೊಂದಿಗೆ ಕೈಜೋಡಿಸಿರುವ ಡಾ. ಹೊಳ್ಳರು ಕಳೆದ ನಾಲ್ಕು ವರ್ಷಗಳಿಂದ ತಮ್ಮ ಗದ್ದೆಯಲ್ಲಿ ಶ್ರೀಕ್ಷೇತ್ರದ ಭತ್ತ ನಾಟಿಗೆ ಪ್ರೋತ್ಸಾಹ ನೀಡುತ್ತಾ ಬೆನ್ನೆಲುಬಾಗಿದ್ದಾರೆ.
   ಗ್ರಾಮಾಭಿವೃದ್ದಿ ಯೋಜನೆಯ ಸಾಹಸ:
   ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿ ಮತ್ತು ಕೃಷಿ ವಿಭಾಗದ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ಜಿಲ್ಲೆಯಾದ್ಯಂತ ಸಮಗ್ರ ಸಾಮಾಜಿಕ ಬದಲಾವಣೆಗೆ ವಿವಿಧ ಯೋಜನೆಗಳು ಜಾರಿಗೊಳ್ಳುತ್ತಿದ್ದು, ಈ ಪೈಕಿ ಕೃಷಿ ಕ್ಷೇತ್ರದ ಪ್ರೋತ್ಸಾಹಕ್ಕೆ ಅನ್ನ ನೀಡುವ ಭತ್ತ ಕೃಷಿಯ ಶ್ರೀಪದ್ದತಿಯ ಕ್ರಮಕ್ಕೆ ಅಡಿಪಾಯವಿರಿಸಿದೆ. ಯೋಜನೆಯ ಜೋಡುಕಲ್ಲು ಮತ್ತು ಪೈವಳಿಕೆ ಒಕ್ಕೂಟದ ನೇತೃತ್ವದ ವಿವಿಧ ಸ್ವಸಹಾಯ ಸಂಘಗಳು ಮತ್ತು ಪ್ರಗತಿಬಂಧು ತಂಡಗಳ ಸಹಕಾರದೊಂದಿಗೆ ಕಯ್ಯಾರು ಡಾ.ಕೆ.ಪಿ.ಹೊಳ್ಳರ ಅರ್ಧ ಎಕ್ರೆ ಗದ್ದೆಯಲ್ಲಿ ಕಳೆದ ಮೂರು ವರ್ಷಗಳಿಂದ ಭತ್ತದ ಬೇಸಾಯ ಮಾಡಿ ಅತ್ಯಧಿಕ ಇಳುವರಿ ಪಡೆಯಲು ಸಾಧ್ಯವಾಗಿದ್ದು, ಪ್ರಸ್ತುತ ನಾಲ್ಕನೇ ವರ್ಷದ ಭತ್ತದ ನಾಟಿಗೆ  ಮಂಗಳವಾರ ಚಾಲನೆ ನೀಡಲಾಯಿತು.
   ಪೈವಳಿಕೆ ವಲಯ ಮೇಲ್ವಿಚಾರಕ ಮೋಹನ್, ಸೇವಾ ಪ್ರತಿನಿಧಿಗಳಾದ ಲೀಲಾವತಿ, ಶಿವರಾಮ ಶೆಟ್ಟಿ ಬಾಯಾರು, ಒಕ್ಕೂಟದ ಪ್ರತಿನಿಧಿಗಳಾದ ಉಷಾ, ವಿನೋದ್ ಕುಮಾರ್, ಸುನೀತಾ, ಸುಶೀಲಾ ಮೊದಲಾದವರು ನೇತೃತ್ವ ವಹಿಸಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries