ಉಪ್ಪಳ ರೈಲು ನಿಲ್ದಾಣಕ್ಕೆ ಬಸ್ ಸಂಚಾರ ಆರಂಭ-ದಶಕಗಳ ಕನಸು ಈಡೇರಿಕೆ
ಉಪ್ಪಳ: ಉಪ್ಪಳ ರೈಲು ನಿಲ್ದಾಣಕ್ಕೆ ಬಸ್ ಸಂಚಾರ ಆರಂಭಿಸಬೇಕೆಂಬ ದಶಕಗಳ ಜನರ ಬೇಡಿಕೆ ಸೋಮವಾರ ಕೊನೆಗೂ ಸಾಕಾರವಾಗಿದೆ. ಪೈವಳಿಕೆ ಕುರುಡಪದವು ಹಾಗೂ ಕನಿಯಾಲದಿಂದ ಉಪ್ಪಳಕ್ಕೆ ಸಂಚಾರ ನಡೆಸುವ ಎರಡು ಖಾಸಗೀ ಬಸ್ ಗಳು ಸೋಮವಾರದಿಂದ ಉಪ್ಪಳ ರೈಲು ನಿಲ್ದಾಣಕ್ಕೆ ಸಂಚಾರ ಆರಂಭಿಸಿದವು.
ಕುರುಡಪದವಿನಿಂದ ಉಪ್ಪಳ ಬಸ್ ನಿಲ್ದಾಣದ ವರೆಗೆ ಸಂಚಾರ ನಡೆಸುತ್ತಿದ್ದ ಜನಪ್ರೀಯ ಹಾಗೂ ಕನಿಯಾಲದಿಂದ ಉಪ್ಪಳಕ್ಕೆ ಸಂಚರಿಸುತ್ತಿದ್ದ ಪಂಜಾಂಬಿಕಾ ಬಸ್ ಗಳು ಸೋಮವಾರ ಬೆಳಿಗ್ಗೆ ತಮ್ಮ ಮೊದಲ ರೈಲು ನಿಲ್ದಾಣದ ವರೆಗಿನ ಸಂಚಾರಕ್ಕೆ ಚಾಲನೆ ನೀಡಿತು. ಬೆಳಿಗ್ಗೆ 6.40 ಕ್ಕೆ ಕುರುಡಪದವಿನಿಂದ ಹೊರಡುವ ಜನಪ್ರೀಯ ಬಸ್ 7.30ಕ್ಕೆ ಹಾಗೂ ಕನಿಯಾಲದಿಂದ ಬೆಳಿಗ್ಗೆ 6.50ಕ್ಕೆ ಹೊರಡುವ ಪಂಜಾಂಬಿಕಾ ಬಸ್ 7.40ಕ್ಕೆ ರೈಲ್ವೇ ನಿಲ್ದಾಣ ತಲಪಿದವು.
ಕುರುಡಪದವು, ಚಿಪ್ಪಾರು, ಕನಿಯಾಲ, ಬಾಯಾರು, ಸಜಂಕಿಲ, ಪೈವಳಿಕೆ, ಜೋಡುಕಲ್ಲು, ಬೇಕೂರು ಪರಿಸರದ ನೂರಾರು ರೈಲು ಪ್ರಯಾಣಿಕರಿಗೆ ಈ ಬಸ್ ಸೇವೆ ಸರಿಯಾದ ಸಮಯಕ್ಕೆ ನಿಲ್ದಾಣ ತಲಪುವಲ್ಲಿ ನೆರವಾಗಲಿದೆ. ರೈಲು ನಿಲ್ದಾಣದ ವರೆಗೆ ಸಂಚಾರ ನಡೆಸುವ ಪರವಾನಿಗೆಗಾಗಿ ಅವಿರತ ಶ್ರಮಿಸಿದ ಜನಪ್ರೀಯ ಬಸ್ ಮಾಲಕ ಧನ್ರಾಜ್ ಸುಭಾಶ್ ನಗರ, ಬಸ್ ಸಿಬ್ಬಂದಿಗಳಾದ ಸಂತೋಷ್, ಗಣೇಶ್, ಜಯಪ್ರಕಾಶ್, ಪಂಜಾಂಬಿಕಾ ಬಸ್ ಮಾಲಕ ನಾಗೇಶ್, ಬಸ್ ಸಿಬ್ಬಂದಿಗಳಾದ ಗಣೇಶ್, ಸೂರ್ಯ, ಧೀರಜ್ ರನ್ನು ಉಪ್ಪಳ ರೈಲು ನಿಲ್ದಾಣ ಪರಿಸರದಲ್ಲಿ ಸೇವ್ ಉಪ್ಪಳ ರೈಲ್ವೇಸ್ಟೇಶನ್ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಸಮಿತಿ ಕಾರ್ಯದಶರ್ಿ ಅಝೀಂ ಮಣಿಮುಂಡ, ಜೊತೆ ಕಾರ್ಯದಶರ್ಿ ಮುಹಮ್ಮದ್ ನಾಫಿ, ಇಬ್ರಾಹಿಂ ಡ್ರೀಬೋಯ್ಸ್, ಯು.ಎಂ.ಭಾಸ್ಕರ ಮೊದಲಾದವರು ಅಭಿನಂದಿಸಿ ಗೌರವಿಸಿದರು.
ಉಪ್ಪಳ ರೈಲು ನಿಲ್ದಾಣ ಉಳಿಸಬೇಕೆಂಬ ಬೇಡಿಕೆಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸೇವ್ ಉಪ್ಪಳ ರೈಲ್ವೇ ಸ್ಟೇಶನ್ ಕ್ರಿಯಾ ಸಮಿತಿ ಈ ಹಿಂದೆ ಆರ್ಟಿಓ ಅಧಿಕೃತರನ್ನು ಭೇಟಿಯಾಗಿ ನಿಲ್ದಾಣದ ವರೆಗೆ ಬಸ್ ಸೇವೆಗೆ ಆಗ್ರಹಿಸಿದ್ದರು.