HEALTH TIPS

No title

                   ಬಜಕೂಡ್ಲು ದೇವಳದಲ್ಲಿ ಸಭೆ=ಆಮಂತ್ರಣ ಪತ್ರಿಕೆ ಬಿಡುಗಡೆ
    ಪೆರ್ಲ: ಪ್ರಕೃತಿ ಮತ್ತು ಜೀವಸಂಕುಲಗಳ ಸಂಬಂಧಗಳು ಪರಸ್ಪರ ಪೂರಕವಾಗಿರುವುದನ್ನು ನಮ್ಮ ಹಿರಿಯರು ಪ್ರಾಚೀನ ಕಾಲದಿಂದಲೇ ಗುರುತಿಸಿರುವುದು ಜ್ಞಾನ ಶ್ರೀಮಂತಿಕೆಯ ಸಂಕೇತವಾಗಿದೆ. ಸಸ್ಯಗಳ ಮಹತ್ವವನ್ನು ಅರಿತು ಅವುಗಳಲ್ಲಿ ಪೂಜನೀಯತೆಯನ್ನು ಕಂಡು ಕೃತಾರ್ಥರಾಗಿರುವುದರ ಮರ್ಮ ನಮಗೆ ಈಗಷ್ಟೆ ಅರಿವಾಗುತ್ತಿದ್ದು, ಪ್ರಕೃತಿಯೊಂದಿಗಿನ ಒಡನಾಟ ಶ್ರೇಯಸ್ಕರ. ಆದ್ದರಿಂದಲೆ ರುದ್ರನ ಪ್ರೀತ್ಯರ್ಥವಾಗಿ ಹಲವು ಗುಣಗಳ ಬಿಲ್ವವನ್ನು ಅಪರ್ಿಸುತ್ತೇವೆ ಎಂದು ಮಾಣಿಲ ಶ್ರೀ ಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ  ಆಶೀರ್ವಚನವಿತ್ತರು.
   ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ವೇ.ಮೂ. ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ಜುಲೈ 12 ರಂದು ನಡೆಯಲಿರುವ ಲಕ್ಷಾರ್ಚನೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಶ್ರೀಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಬಿಡುಗಡೆಗೊಳಿಸಿ ಆಶೀರ್ವಚನಗೈದು ಶ್ರೀಗಳು ಮಾತನಾಡಿದರು.
    ಬಿಲ್ವ ಶಿವನಿಗೆ ಪ್ರಿಯವಾದುದು.ಅದರ ಸಮರ್ಪಣೆ ಮಾಡಿದರೆ ಜಪ ಮಾಡಿದ ಫಲ ಸಿಗುವುದು. ಯಾರೇ ಶಿವನಿಗೆ ಶುದ್ಧ ಮನಸ್ಸಿನಿಂದ ಪ್ರಾಥರ್ಿಸಿ ಬಿಲ್ವ ಪತ್ರೆ ಅಪರ್ಿಸಿದರೂ ಆ ವ್ಯಕ್ತಿಯ ಬೇಡಿಕೆ ಈಡೇರುವುದು. ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು ಶಿವನಿಗೆ ಸಮರ್ಪಣೆ ಮಾಡುವುದರಿಂದ ಸಮಸ್ತ ಲೋಕ ಕಲ್ಯಾಣವಾಗುವುದು ಎಂದ ಶ್ರೀಗಳು ಪ್ರಾರ್ಥನೆ, ಪೂಜಾದಿಗಳ ಆಂತರಂಗಿಕ ಮೌಲ್ಯಗಳಿಗೆ ಮನ್ನಣೆ ನೀಡುವ ಮನಸ್ಸು ಎಲ್ಲರಿಗೂ ಬರಲಿ ಎಂದು ಹರಸಿದರು.
   ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೃಷ್ಣ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು.ಲಕ್ಷಾರ್ಚನೆ ಪೂರ್ವಭಾವೀ ಸಿದ್ಧತೆ, ಉಳ್ಳಾಕ್ಲು(ರಾಜನ್ ದೈವ) ಮತ್ತು ಮೂಲ ತರವಾಡು ಕೆಲಸ ಕಾರ್ಯಗಳ ಪ್ರಗತಿ ಬಗ್ಗೆ ಚಚರ್ಿಸಲಾಯಿತು.ಉದಯ ಚೆಟ್ಟಿಯಾರ್ ಬಜಕೂಡ್ಲು, ಕಾನ ವೆಂಕಟ್ರಮಣ ಭಟ್, ಗೋಪಾಲಕೃಷ್ಣ ಭಟ್, ರಾಮಕೃಷ್ಣ ಭಟ್ ಸರ್ಪಂಗಳ ಉಪಸ್ಥಿತರಿದ್ದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries