ಸ್ವರ್ಗದಲ್ಲಿ ಗಮನ ಸೆಳೆದ ಹಲಸಿನ ಮೇಳ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಸ್ವರ್ಗದ ಕುಟುಂಬಶ್ರೀ ಪ್ರಾದೇಶಿಕ ಅಭಿವೃದ್ಧಿ ಸಮಿತಿ (ಎಡಿಎಸ್) ಭಾನುವಾರ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲಸಿನ ಮೇಳ ಆಯೋಜಿಸಿತು.
ಕುಟುಂಬಶ್ರೀ ಎಡಿಎಸ್ ಅಧ್ಯಕ್ಷೆ ವಲ್ಸಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತು ಸದಸ್ಯೆ ಚಂದ್ರಾವತಿ ಎಂ ಉದ್ಘಾಟಿಸಿ ಮಾತನಾಡಿ, ಯಥೇಚ್ಛವಾಗಿ ಸಿಗುವ ಹಲಸಿನಲ್ಲಿ ಬಹುಪಾಲು ನಶಿಸಿ ಮಣ್ಣು ಪಾಲಾಗುತ್ತಿದೆ. ಗ್ರಾಮೀಣ ಮಹಿಳೆಯರು ನಾಲ್ಕು ಗೋಡೆಯ ನಡುವಿನಿಂದ ಹೊರಬಂದು ಎಲ್ಲಾ ಕಾಲಗಳಲ್ಲೂ ಯಥೇಚ್ಛವಾಗಿ ಲಭಿಸುತ್ತಿರುವ ಹಲಸು ಹಾಗೂ ಹಲಸಿನ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಆಥರ್ಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಹೊಂದ ಬಹುದಾಗಿದೆ. ಹಲಸಿನ ಬಗೆಗಿನ ಅನುಭವದ ಕೊರತೆ ನೀಗಿಸಲು ಹಲಸಿನ ಆಂದೋಲನ, ಉತ್ಸವ, ಮೇಳಗಳು ಅಲ್ಲಲ್ಲಿ ನಡೆಯುತ್ತಿದ್ದು ಅದನ್ನು ಸದುಪಯೋಗಪಡಿಸಬೇಕು ಎಂದು ಕರೆ ನೀಡಿದರು.
ಕುಟುಂಬ ಶ್ರೀ ಜಿಲ್ಲಾ ಮಿಶನ್ ತರಬೇತುದಾರ ಸುಕುಮಾರನ್ ಬೆಳ್ಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಒಂದು ಕಾಲದಲ್ಲಿ ಬಡವನ ಹಸಿವು ನೀಗಿಸುತ್ತಿದ್ದುದು ಹಲಸು ಆಗಿತ್ತು.ಇಂದು ನಾವು ಹಲಸಿನ ಉತ್ಸವ ಮೇಳಗಳನ್ನು ಏರ್ಪಡಿಸಿ ಅಘೋಷಿಸುತ್ತಿದ್ದೇವೆ. ಆದರೆ ಈ ಅಘೋಷ ಕೇವಲ ಒಂದು ದಿನಕ್ಕೆ ಸೀಮಿತವಾಗಿ ಇರದೆ, ಹಲಸು,ಹಲಸಿನ ವಿವಿಧ ರೀತಿಯ ಖಾದ್ಯ ಉತ್ಪನ್ನಗಳನ್ನು ಬಹಳಷ್ಟು ಸಮಯದ ವರೆಗೆ ಕೆಡದಂತೆ ಸಂರಕ್ಷಿಸಿ ಹಾಗೂ ಮಾರಾಟ ಮಾಡುವುದರ ಮೂಲಕ ಸ್ವ ಉದ್ಯೋಗವನ್ನಾಗಿ ಆರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ ಶ್ರೀಪಡ್ರೆ ಹಲಸಿನ ವಿವಿಧ ತಳಿಗಳು, ಕೃಷಿ ವಿಧಾನ,ಹಲಸು ಹಣ್ಣಿನ ವೈವಿದ್ಯತೆ,ಬೆಳೆ ವಿಧಾನ, ಖಾದ್ಯ, ಪಾನೀಯ, ಉತ್ಪನ್ನಗಳು-ಉತ್ಪಾದನಾ ಆವಿಷ್ಕಾರಗಳು, ಹಲಸಿನ ಕ್ರಾಂತಿಗಳ ಬಗ್ಗೆ ಮಾಹಿತಿ ನೀಡಿ, ಪ್ರೊಜೆಕ್ಟರ್ ಬಳಸಿ ಚಿತ್ರ ಪ್ರದರ್ಶನದ ಮೂಲಕ ಮಾಹಿತಿ ಒದಗಿಸಿದರಲ್ಲದೆ ಹಲಸನ್ನು ಕೊಯ್ಯುವುದು, ಸಾಗಾಟ ಸ್ವಲ್ಪ ಕ್ಲಿಷ್ಟಕರವಾದರೂ ಹೆಚ್ಚಿನ ಉತ್ಸಾಹ ಶ್ರಮ ಹಾಗೂ ಗಂಭೀರ ಚಿಂತನೆ ಯೊಂದಿಗೆ ಆಧುನಿಕ ವಿಧಾನಗಳನ್ನು ಅನುಸರಿಸಿ ಹಲಸನ್ನು ಮೌಲ್ಯ ವಧರ್ಿತ ಉತ್ಪನ್ನಗಳ ಸಾಲಿಗೆ ತರಬಹುದಾಗಿದೆ ಎಂದು ಪ್ರತಿ ಪಾದಿಸಿದರು.
ಎಡಿಎಸ್ ಕಾರ್ಯದಶರ್ಿ ಪ್ರೇಮ ಸ್ವಾಗತಿಸಿ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಕೆದಂಬಾಯಿಮೂಲೆ ವಂದಿಸಿದರು. ಶ್ರೀನಿವಾಸ ಪೆರಿಕ್ಕಾನ ಕಾರ್ಯಕ್ರಮ ನಿರೂಪಿಸಿದರು
ಹಲಸು ಹಾಗೂ ಖಾದ್ಯಗಳ ಪ್ರದರ್ಶನ:
ಬಿಳಿ,ಕೆಂಪು,ಹಳದಿ ಮೊದಲಾಗಿ ವಿವಿಧ ವರ್ಣಗಳ, ಒನಕೆ, ಉಂಡೆ ಇತ್ಯಾದಿ ವಿವಿಧ ಆಕಾರ, ಗಾತ್ರಗಳ ಹಲಸು ಹಣ್ಣುಗಳ, ವಿಶಿಷ್ಟ ರುಚಿಗಳ ಹಲಸು ಹಣ್ಣುಗಳ, ಹಪ್ಪಳ, ದೋಸೆ,ಚಿಪ್ಸ್ ಮೊದಲಾಗಿ ವಿವಿಧ ಸಿಹಿ, ಖಾರ ಖಾದ್ಯವಸ್ತುಗಳ ಪ್ರದರ್ಶನ ನಡೆಯಿತು.
ಹಲಸಿನ ಮೇಳಕ್ಕೆ ಆಗಮಿಸಿದ ಬಹುತೇಕರ ದೃಷ್ಟಿಯಲ್ಲಿ ಕೇಂದ್ರೀಕೃತ ವಾಗಿದ್ದ ಸುಮಾರು ಒಂದು ಮೀಟರ್ ಉದ್ದ ಹಾಗೂ ಸುಮಾರು ಮೂವತ್ತೈದು ಕಿ.ಗ್ರಾಂ. ತೂಕದ ಸ್ವರ್ಗ ಬಳಿಯ ಮೊಳಕ್ಕಾಲು ವೀರಪ್ಪ ಗೌಡ ಅವರ ಹಿತ್ತಿಲಲ್ಲಿ ಬೆಳೆದಿದ್ದ ಒನಕೆ ಹಲಸಿಗೆ ಪ್ರಥಮ ಹಾಗೂ ಚಾಕಟಕುಮೇರಿ ಸುಬ್ಬಣ್ಣ ಅವರ ಕೆಂಬಣ್ಣದ ಹಲಸಿಗೆ ದ್ವಿತೀಯ ಬಹುಮಾನ ಪಡೆಯಿತು.