HEALTH TIPS

No title

             ಮಧೂರು ದೇಗುಲಕ್ಕೆ ಎಡನೀರು ಶ್ರೀಗಳ ಭೇಟಿ
              ನವೀಕರಣ ಕಾಮಗಾರಿಯ ವೀಕ್ಷಣೆ
    ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ನವೀಕರಣ ಸಮಿತಿಯ ಗೌರವಾಧ್ಯಕ್ಷರಾದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಗುರುವಾರ ಭೇಟಿ ಎರಡನೇ ಹಂತದ ಕರಸೇವೆಗೆ(ಪ್ರಧಾನ ಗರ್ಭಗುಡಿಯ ಮಾಡಿನ ಕೆಲಸ) ಚಾಲನೆ  ನೀಡಿದರು.
    ಸ್ವಾಮೀಜಿಯವರಿಗೆ ದೇವಸ್ಥಾನದ ಪರವಾಗಿಯೂ, ನವೀಕರಣ ಸಮಿತಿಯ ಪರವಾಗಿಯೂ ಸ್ವಾಗತ ಕೋರಲಾಯಿತು. ದೇವರ ದರ್ಶನದ ಬಳಿಕ ನಡೆಯಲ್ಲಿ ಸ್ವಾಮೀಜಿಯವರ ಸಮಕ್ಷಮದಲ್ಲಿ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನವೀಕರಣದ ಕೆಲಸಗಳು ಅಡೆತಡೆ ಇಲ್ಲದೆ ನಿರಂತರವಾಗಿ ಸಾಗಲು ದೇವರು ಅನುಗ್ರಹಿಸಬೇಕೆಂದು ಪ್ರಾಥರ್ಿಸಲಾಯಿತು.
    ಪ್ರಾರ್ಥನೆಯ ಬಳಿಕ ಸ್ವಾಮೀಜಿಯವರು ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಸ್ವಾಮೀಜಿಯವರನ್ನು ಕ್ಷೇತ್ರಕ್ಕೆ ಸ್ವಾಗತಿಸುವ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಬಾಬು, ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾಧ್ಯಾಯ, ಪ್ರಬಂಧಕ ಎಚ್.ಗೋಪಾಲಕೃಷ್ಣ ಭಟ್, ನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಸದಸ್ಯರಾದ ಮಂಜುನಾಥ ಕಾಮತ್, ಮುರಳಿ ಗಟ್ಟಿ, ನಾರಾಯಣಯ್ಯ, ಭಕ್ತ ಜನ ಸಮಿತಿಯ ಸಂತೋಷ್ ಕುಮಾರ್ ನಾಕ್, ವಿನೋದ್ ಸಿ.ಎಚ್, ನವೀನ್ ಮೊದಲಾದವರು ಉಪಸ್ಥಿತರಿದ್ದರು.
    ಕೆಲಸದ ಪ್ರಗತಿಯನ್ನು ವೀಕ್ಷಿಸಿದ ಶ್ರೀಗಳು ಸೂಕ್ತ ಮಾರ್ಗದರ್ಶನ ನೀಡಿ ಕೆಲಸವು ಶೀಘ್ರವಾಗಿ ನೆರವೇರಲಿ ಎಂದು ಹರಸಿದರು. ಸ್ವಾಮೀಜಿಯವರ ನಿರ್ಗಮನದ ಬಳಿಕ ತಾಮ್ರದ ಕೆಲಸಗಾರರು, ಕರಸೇವಕರು, ಬಡಗಿಗಳು ಪ್ರಧಾನ ಗರ್ಭಗುಡಿಯ ಮೇಲಿನ ಛಾವಣಿಯನ್ನು ಬಿಚ್ಚುವ ಕೆಲಸವನ್ನು ಆರಂಭಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries