ಕಜಂಪಾಡಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಪೆರ್ಲ: ಕಜಂಪಾಡಿ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಇದರಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಬಳಿಕ ಶಾಲಾ ಅಭಿವೃದ್ದಿ ಸಮಿತಿ ಸದಸ್ಯ ಸಾಧು ಕಜಂಪಾಡಿ ಆವರು ಸಸ್ಯಸಂಪತ್ತಿನ ಮಹತ್ವದ ಬಗ್ಗೆ ಮಾತನಾಡುತ್ತಾ, ಗಿಡಮರಗಳನ್ನು ಬೆಳೆಸುವುದರಿಂದ ನಮಗೆ ಶುದ್ಧವಾಯು ಪಡೆಯಲು ಸಾಧ್ಯ. ಭೂಮಿ ಸಂಪತ್ಭರಿತವಾಗುವುದರ ಜೊತೆಗೆ ಶುದ್ಧನೀರಿನ ಸಂಗ್ರಹಾಗಾರವಾಗಿ ಬದಲಾಗುವುದು. ಪರಿಸರವನ್ನು ಸಂರಕ್ಷಿಸಿದರೆ ಮಾತ್ರ ಇಡೀ ಜೀವಸಂಕುಲ ಉಳಿಯಬಹುದೆಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಾಣಿ ಕಜಂಪಾಡಿ ವಿದ್ಯಾಥರ್ಿಗಳಿಗೆ ವಿವಿಧ ರೀತಿಯ ಉಪಯುಕ್ತ ಗಿಡಗಳನ್ನು ವಿತರಿಸಿದರು. ಬಿ.ಆರ್.ಸಿ ತರಬೇತುದಾರ ಶಿವರಾಮ ಎ ಶಾಲಾ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಮಾತೃಸಂಘದ ಅಧ್ಯಕ್ಷೆ ಭುವನೇಶ್ವರಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಉದಯಕೃಷ್ಣ ಭಟ್ ಪಂಜಿಕುಂಜೆ, ಮುಖ್ಯೋಪಾಧ್ಯಾಯ ಗಂಗಾಧರ ಶೆಟ್ಟಿ ಆದೂರು, ರಕ್ಷಕ ಶಿಕ್ಷಕ ಸಂಘದ ಸದಸ್ಯರ ಹಾಗೂ ಶಾಲಾ ಅಧ್ಯಾಪಕರ ನೇತೃತ್ವದಲ್ಲಿ ಶಾಲಾ ಪರಿಸರದಲ್ಲಿ ವಿವಿಧ ರೀತಿಯ ಹಣ್ಣುಗಳ, ಔಷಧೀಯ ಸಸ್ಯಗಳ ಗಿಡಗಳನ್ನು ನೆಡಲಾಯಿತು.