HEALTH TIPS

No title

                     ಪೊಕ್ಕಿಮಲೆ ಪ್ರತಿಷ್ಠಾ ಬ್ರಹ್ಮಕಲಾಶಾಭೀಷೆಕ ಜೂ.18 ರಿಂದ 
    ಮಂಜೇಶ್ವರ: ಹೊಸಬೆಟ್ಟು ಪೊಕ್ಕಿಮಲೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೂತನ ಗರ್ಭಗುಡಿಯಲ್ಲಿ ಶ್ರೀ ಮಾತೆಯ ಪ್ರತಿಷ್ಠಾ ಬ್ರಹ್ಮಕಲಾಶಾಭೀಷೆಕ ಮಹೋತ್ಸವವು ವೇದಮೂತರ್ಿ ಬ್ರಹ್ಮ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜೂ. 18 ರಂದು ಸೋಮವಾರದಿಂದ  20 ರವರೆಗೆ ವಿವಿಧ ವೈಧಿಕ, ಧಾಮರ್ಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಕಾರ್ಯಕ್ರಮದ ಅಂಗವಾಗಿ 18ರಂದು ಸೋಮವಾರ ಸಂಜೆ 3.ಕ್ಕೆ ಮಂಜೇಶ್ವರ ಹೊಸಬೆಟ್ಟು ಕುಲಾಲ ಮಂದಿರದ  ಪರಿಸರದಿಂದ ಹೊರಟು ರಾಜ್ಯರಸ್ತೆ ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯಾಗಿ ಪೊಕ್ಕಿಮಲೆಗೆ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ತಲುಪಲಿದೆ. ಸಂಜೆ 5 ಕ್ಕೆ ವೇದಮೂತರ್ಿ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 5.30ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು, ರಾತ್ರಿ 8ಕ್ಕೆ ನೃತ್ಯ ವೈವಿಧ್ಯ ನಡೆಯಲಿದೆ. 19ರಂದು ಮಂಗಳವಾರ ಬೆಳಿಗ್ಗೆ 8ಕ್ಕೆ ಶ್ರೀ ಮಹಾಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಮಧ್ಯಾಹ್ನ 1ಕ್ಕೆ ಪ್ರಸಾದ ಭೋಜನ, ಅಪರಾಹ್ನ 3 ರಿಂದ ನೃತ್ಯ ವೈವಿದ್ಯ ಸಂಜೆ 5 ಕ್ಕೆ "ಧರ್ಮಸಂಸತ್" ಸಭಾ ಕಾರ್ಯಕ್ರಮ ನಡೆಯಲಿದೆ. ಕಟೀಲು ಶ್ರೀ  ದುಗರ್ಾಪರಮೇಶ್ವರಿ ಕ್ಷೇತ್ರದ ಅನುವಂಶಿಕ ಅರ್ಚಕ ವೇದಮೂತರ್ಿ ಬ್ರಹ್ಮ ಶ್ರೀ ಕಮಲಾ ದೇವಿಪ್ರಸಾದ್ ಅಸ್ರಣ್ಣ ದೀಪ ಪ್ರಜ್ವಲನೆಗೈಯಲಿರುವರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಪರಮಪೂಜ್ಯ  ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು ಶ್ರೀ ಚಾಮುಂಡೆಶ್ವರೀ ಕ್ಷೇತ್ರದ ಪರಮಪೂಜ್ಯ ಶ್ರೀ ಮಹಾಬಲ ಸ್ವಾಮೀಜಿ  ಆಶೀರ್ವಚನ  ನೀಡಲಿರುವರು. ಉದ್ಯಮಿ, ಧಾಮರ್ಿಕ ಮುಂದಾಳು ಬಿ. ವಸಂತ ಪೈ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶ್ರೀ ಶನೀಶ್ವರ ಮಂದಿರ ಮಂಜೇಶ್ವರದ ಧರ್ಮದಶರ್ಿ ಬ್ರಹ್ಮಶ್ರೀ ಕೃಷ್ಣ ಭಟ್, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವ ಕ್ಷೇತ್ರದ ತಮ್ಮ ದೈವದ ಪಾತ್ರಿ ರಾಜ ಬೆಳ್ಚಾಪಾಡ, ಬಲಂ್ಲಗುಡೇಲು  ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ  ನಾರಾಯಣ ಕಾಂಞರ್, ಕನಿಲ ಶ್ರೀ ಭಗವತಿ ಕ್ಷೇತ್ರದ ಸಂತೋಷ್ ದಂಡಾತಾರರು, ಪೂಮಾಣಿ ಕಿನ್ನಿಮಾಣಿಯ ಅನಿಲ್ ಕಲೇಕಾರ್ ಉಪಸ್ಥಿತರಿರುವರು. ಈ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕ್ರತ  ಪರಿಸರ ಪ್ರೇಮಿ  ಮಾಧವ ಉಳ್ಳಾಲ್ ಇವರಿಂದ ವನ ಸಿರಿಗಳ ಸಸ್ಯ ವಿತರಣೆ ನಡೆಯಲಿದೆ. ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ಮಸ್ಕಿರಿ- ಕುಡ್ಲ  ತಂಡದವರಿಂದ 'ತೆಲಿಕೆ ಬಂಜಿ ನಿಲಿಕೆ' ಕಾರ್ಯಕ್ರಮ  ರಾತ್ರಿ 8ಕ್ಕೆ ಪ್ರಾಸಾದ  ಭೋಜನ ನಡೆಯಲಿದೆ.  20 ರಂದು ಬುಧವಾರ ಬೆಳಿಗ್ಗೆ 7.ಕ್ಕೆ ಶ್ರೀ ಮಹಾಗಣಪತಿ ಹೋಮ, ಪೂವರ್ಾಹ್ನ 8.02ರ ಕಕರ್ಾಟಕ ಲಗ್ನದ ಶುಭಮೂಹೂರ್ತದಲ್ಲಿ ನೂತನ ಗರ್ಭಗುಡಿಯಲ್ಲಿ ಪೊಕ್ಕಿಮಲೆ ಶ್ರೀ ಚಾಮುಂಡೇಶ್ವರೀ ಮಾತೆಯ ನೂತನ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭೀಷೇಕ, ಪೂವರ್ಾಹ್ನ 10.30 ಕ್ಕೆ ಧಾಮರ್ಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರದ ತಂತ್ರಿವರ್ಯ ಬ್ರಹ್ಮ ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಯವರು ಅನುಗ್ರಹ ಸಂದೇಶ ನೀಡಲಿರುವರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಲಿರುವರು. ವೇದಿಕೆಯಲ್ಲಿ ಬಿ.ಜೆ.ಪಿ ರಾಜ್ಯಧ್ಯಕ್ಷ ಕೆ. ಸುರೇಂದ್ರನ್, ಬಾಲು ಆಂಜನೇಯ ಫೈನಾನ್ಸ್ ಮಂಜೇಶ್ವರ, ಧಾಮರ್ಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಮಂಜೇಶ್ವರ ಮದನಂತೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಛತ್ರಪತಿ, ಉದ್ಯಮಿಗಳಾದ ವಿಧ್ಯಾದರ ಪ್ರಭು, ಗಣೇಶ್ ಬಜಾಲು, ಮಾಡೂರು ಶ್ರೀ ಶಿರಡಿ ಸಾುಬಾಬ ಮಂದಿರದ ಧರ್ಮದಶರ್ಿ ಕೆ. ಪಿ ಸುರೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ. ಎಮ್, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ನ್ಯಾಯವಾದಿ ನವೀನ್ ರಾಜ್ ಕೆ.ಜೆ ಹೊಸಂಗಡಿ, ಹೊಸಬೆಟ್ಟು ಶ್ರೀ ರಾಧಾಕೃಷ್ಟ ಭಜನಾ ಮಂದಿರದ ಅಧ್ಯಕ್ಷ ಸುರೇಶ್, ಬಿ. ಜೆ. ಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ, ಉದ್ಯಮಿ ಕೃಷ್ಣ  ಉಚ್ಚಿಲ್, ಕೇರಳ ರಾಜ್ಯ ಪಾತರ್ಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಕಾರ್ಯದಶರ್ಿ ಸಂಕಬೈಲ್ ಸತೀಶ್ ಆಡಪ, ಉದ್ಯಮಿ ಸಂಜೀವ ಮರೋಳಿ, ರಾಮಚಂದ್ರ. ಬಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ತುಳಸಿ. ಎಮ್. ವಿ, ಅರುಣ್ ಕುಮಾರ್ ಆಚಾರ್ಯ ಹೊಸಂಗಡಿ, ಉಪಸ್ಥಿತರುವರು.  ಈ ವೇಳೆ ಕ್ಷೇತ್ರದ ತಂತ್ರಿವರ್ಯರಾದ ಬಡಾಜೆ ಗೋಪಾಲಕೃಷ್ಣ ತಂತ್ರಿಯವರಿಗೆ ಹಾಗೂ ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ, ಕಾಷ್ಟ ಶಿಲ್ಪಿ ದಾಮೋದರ ಆಚಾರ್ಯ, ಶಿಲಾ ಶಿಲ್ಪಿ  ಕುಮಾರನ್ ಮೇಸ್ತ್ರೀ  ಇವರಿಗೆ ಗೌರವ  ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, 1.ಕ್ಕೆ ಅನ್ನಸಂತರ್ಪಣೆ, ಅಪರಾಹ್ನ 2.ರಿಂದ ಶ್ರೀ ರಾಧಾಕೃಷ್ಣ ಭಜಾನಾ ಮಂಡಳಿ ಹೊಸಬೆಟ್ಟು, ಶ್ರೀ ಶಾಸ್ತಾವೇಶ್ವರ  ಭಜನಾ  ಮಂಡಳಿ ಮಂಜೇಶ್ವರ, ಶ್ರೀ ಶನೀಶ್ವರ ಭಜನಾ ಮಂಡಳಿ ಮಂಜೇಶ್ವರ, ಶ್ರೀ ಅರಸು ಕೃಪಾ  ಜೈ ವೀರಮಾರುತಿ ಭಜನಾ ಮಂಡಳಿ ಉದ್ಯಾವರ ಮಾಡ, ಶ್ರೀ ನಿತ್ಯಾನಂದ ಭಜನಾ ಮಂಡಳಿ ಅಂಗಡಿಪದವು, ಶ್ರೀ ಉಮಾಭಗವತೀ  ಭಜನಾ ಮಂಡಳಿ ಪಚ್ಲಂಪಾರೆ ಉಪ್ಪಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ಸಂಜೆ 6.ಕ್ಕೆ  ರೇಷ್ಮ ಸಂತೋಷ್ ಬಳಗದವರ ಪ್ರಯೋಜಕತ್ವದಲ್ಲಿ ವಿವಿಧ ನೃತ್ಯ ಕಾರ್ಯಕ್ರಮ, ರವೀಂದ್ರ ಪ್ರಭು ಬಳಗ ಮಂಗಳೂರು ಇವರಿಂದ ಭಕ್ತಿ ರಸಮಂಜರಿ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries