HEALTH TIPS

No title

                     `ಮನೆ ಅಂಗಳ ಮಲ್ಲಿಗೆ' ಸಾಲ ಯೋಜನೆ ಜಾರಿಗೆ 
     ಕಾಸರಗೋಡು: ಅಪಾರ ಬಡ್ಡಿದರದೊಂದಿಗೆ ಸಾಲ ವಿತರಿಸಿ ಜನರನ್ನು  ಸಾಲದ ಕೂಪಕ್ಕೇರಿಸಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸುವ ಅನಧಿಕೃತ ಹಣಕಾಸು ಸಂಸ್ಥೆಗಳ ಮತ್ತು  ವ್ಯಕ್ತಿಗಳ ಹಿಡಿತದಿಂದ ಜನರನ್ನು  ಸಂರಕ್ಷಿಸುವ ಸದುದ್ದೇಶದಿಂದ ಕೇರಳ ರಾಜ್ಯ ಸಹಕಾರಿ ಇಲಾಖೆಯು      `ಮುಟ್ಟತ್ತಮುಲ್ಲ' (ಮನೆ ಅಂಗಳ ಮಲ್ಲಿಗೆ) ಎಂಬ ನೂತನ ಸಾಲ ಯೋಜನೆಯನ್ನು  ಜಾರಿಗೆ ತರಲಿದೆ.
    ರಾಜ್ಯ ಸಹಕಾರಿ ಇಲಾಖೆ ಮತ್ತು  ಕುಟುಂಬಶ್ರೀ ಮಿಷನ್ ಜಂಟಿಯಾಗಿ ಈ ಯೋಜನೆಗೆ ರೂಪು ನೀಡಿದ್ದು, ಇದು ರಾಜ್ಯದಾದ್ಯಂತ ಜೂನ್ 26ರಿಂದ ವಿದ್ಯುಕ್ತವಾಗಿ ಕಾರ್ಯಗತಗೊಳ್ಳಲಿದೆ. ಈ ಯೋಜನೆಯಂತೆ ಓರ್ವ ವ್ಯಕ್ತಿಗೆ 1000ರೂ. ನಿಂದ 25,000ರೂ. ತನಕ ಸಾಲ ದೊರಕಲಿದೆ. ಇದಕ್ಕೆ ಶೇಕಡಾ 12ರಷ್ಟು  ಬಡ್ಡಿದರ ನಿಗದಿಪಡಿಸಲಾಗಿದೆ. ಇದರಲ್ಲಿ  ಶೇಕಡಾ 9ರಷ್ಟು  ಬಡ್ಡಿ  ಮೊತ್ತವನ್ನು  ಸಹಕಾರಿ ಬ್ಯಾಂಕ್ಗಳಿಗೆ ಪಾವತಿಸಬೇಕೆಂದು ನಿಬಂಧನೆಯಲ್ಲಿ  ತಿಳಿಸಲಾಗಿದೆ.
   ಸಾಲ ಪಡೆಯುವವರ ಸಂಖ್ಯೆಗೆ ಅನುಗುಣವಾಗಿ ಪ್ರತೀ ವಾಡರ್್ಗಳಲ್ಲಿ  ಕುಟುಂಬಶ್ರೀ ಘಟಕಗಳಿಗೆ ರೂಪು ನೀಡಲು ತೀಮರ್ಾನಿಸಲಾಗಿದೆ. ಅವುಗಳ ಮೂಲಕ ಸಾಲ ಯೋಜನೆಯನ್ನು  ಅನುಷ್ಠಾನಕ್ಕೆ ತರಲಾಗುವುದು. ಅದಕ್ಕೆ ಹೊಂದಿಕೊಂಡು ಕುಟುಂಬಶ್ರೀ ಸದಸ್ಯೆಯರು ಸಾಲ ಅಗತ್ಯವುಳ್ಳ ಮನೆಗಳಿಗೆ ಬಂದು ಸಾಲ ನೀಡುವರು. ಆದರೆ ಈ ಸಂದರ್ಭ ಕೆಲವು ಮಾನದಂಡಗಳನ್ನು  ಪಾಲಿಸಲಾಗುವುದು.
   ಹೀಗೆ ಪಡೆಯುವ ಸಾಲ ಮೊತ್ತವನ್ನು  ಒಂದು ವರ್ಷದೊಳಗಾಗಿ ಮರು ಪಾವತಿಸಬೇಕು. ನಿಗದಿತ ಸಮಯದೊಳಗೆ ಸಾಲ ಮರು ಪಾವತಿಸದಿದ್ದಲ್ಲಿ  ಆ ಸಾಲ ವಸೂಲಾತಿ ಹೊಣೆಗಾರಿಕೆಯನ್ನು  ಕುಟುಂಬಶ್ರೀ ಘಟಕಗಳು ಸಹಕಾರಿ ಬ್ಯಾಕ್ಗಳಿಗೆ ಬಿಟ್ಟುಕೊಡಲಿವೆ. ಸಾಲ ಮರು ವಸೂಲಿಯ ಸಂಪೂರ್ಣ ಜವಾಬ್ದಾರಿಯನ್ನು  ಕುಟುಂಬಶ್ರೀ ಘಟಕಗಳಿಗೆ ವಹಿಸಿಕೊಡಲಾಗುವುದು. 1000ರೂ. ಸಾಲ ಪಡೆದಲ್ಲಿ  ಒಂದೂವರೆ ವರ್ಷದೊಳಗಾಗಿ ಬಡ್ಡಿ  ಸಮೇತ 1120ರೂ. ವನ್ನು  ಸಮಾನ ಕಂತುಗಳಾಗಿ ಮರು ಪಾವತಿಸಬೇಕು ಎಂಬುದನ್ನು  ಸ್ಪಷ್ಟಪಡಿಸಲಾಗಿದೆ.
   ಕುಟುಂಬಶ್ರೀ ಕಾರ್ಯಕತರ್ೆಯರು ಪ್ರತೀ ವಾರ ಮನೆಗೆ ಆಗಮಿಸಿ ಮರು ಪಾವತಿ ಹಣವನ್ನು  ಸ್ವೀಕರಿಸುವರು. ಸಾಲ ವಿತರಣೆಗಾಗಿ ಪ್ರತೀ ಕುಟುಂಬಶ್ರೀ ಘಟಕಗಳಿಗೆ ಶೇಕಡಾ 9ರ ಬಡ್ಡಿದರದಲ್ಲಿ  10 ಲಕ್ಷ  ರೂಪಾಯಿ ಕ್ಯಾಶ್ ಕ್ರೆಡಿಟ್ ಸಾಲ ವಿತರಣೆಯಾಗಲಿದೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ಕುಟುಂಬಶ್ರೀ ಘಟಕಗಳೇ ಸಾಲ ಮರು ವಸೂಲಾತಿಯ ಪ್ರಥಮ ಜವಾಬ್ದಾರಿ ವಹಿಸಬೇಕು. ಇನ್ನಷ್ಟು  ಸಾಲ ಅಗತ್ಯವಿರುವ ಕುಟುಂಬಶ್ರೀ ಘಟಕಗಳಿಗೆ ಶೇಕಡಾ 8ರ ಬಡ್ಡಿದರದಲ್ಲಿ  ಜಿಲ್ಲಾ  ಸಹಕಾರಿ ಬ್ಯಾಂಕ್ ಸಾಲ ಒದಗಿಸಲಿದೆ. ಈ ಸಾಲ ಯೋಜನೆಯ ಸ್ಥಿತಿಗತಿ ಅವಲೋಕನ ನಡೆಸಲು ಪ್ರತೀ ಜಿಲ್ಲಾ  ಮಟ್ಟದಲ್ಲಿ  ವಿಶೇಷ ಸಮಿತಿಗಳನ್ನೂ  ರೂಪಿಸಿ ಕಾಯರ್ಾಚರಿಸುವಂತೆ ಮಾಡಲಾಗಿದೆ.
   ಎಲ್ಲಾ  ಜಿಲ್ಲೆಗಳಲ್ಲಿ  ಯೋಜನೆ ಜಾರಿ : ಮನೆ ಅಂಗಳ ಮಲ್ಲಿಗೆ ಎಂಬ ವಿನೂತನ ಸಾಲ ಯೋಜನೆಯನ್ನು  ರಾಜ್ಯದ ಎಲ್ಲಾ  ಜಿಲ್ಲೆಗಳಲ್ಲೂ  ಒಂದೇ ಹಂತದಲ್ಲಿ  ಜಾರಿಗೆ ತರಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ  ಈ ನಿಟ್ಟಿನಲ್ಲಿ  ಸಕಲ ಸಿದ್ಧತೆಗಳನ್ನು  ಮಾಡಲಾಗಿದೆ. ಜೊತೆಗೆ ಜಿಲ್ಲಾ  ಸಹಕಾರಿ ಇಲಾಖೆ ಮತ್ತು  ಕುಟುಂಬಶ್ರೀ ಜಿಲ್ಲಾ  ಮಿಷನ್ ಈ ವಿಚಾರವಾಗಿ ಪ್ರಥಮ ಸುತ್ತಿನ ಮಾತುಕತೆ ನಡೆಸಿವೆ. ಅಲ್ಲದೆ ಸಾಲ ವಿತರಣೆ ಬಗ್ಗೆ  ಕೈಗೊಳ್ಳಬೇಕಾದ ಮಾರ್ಗನಿದರ್ೇಶನಗಳನ್ನು  ಕೂಡ ರೂಪಿಸಲಾಗಿದೆ. ಸಾಲ ವಿತರಣೆ ಮತ್ತು  ಸಾಲ ಮರು ಪಾವತಿ ವಿಷಯದಲ್ಲಿ  ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು  ಕಾರ್ಯರೂಪಕ್ಕೆ ತರಲು ಯೋಜನೆ ರಚಿಸಲಾಗಿದೆ. ಮಾನದಂಡಗಳನ್ನು  ಅನುಸರಿಸಿ ಅತ್ಯಂತ ಸುಲಭದ ವಿಧಾನದಲ್ಲಿ  ಸಾಲ ವಿತರಿಸಲು ಇಲಾಖೆಯು ನಿದರ್ೇಶಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries