ಮಂಗಲ್ಪಾಡಿ ಪ್ರೈಮರಿ ಶಾಲೆಯಲ್ಲಿ ಪರಿಸರ ದಿನಾಚರಣೆ
ಉಪ್ಪಳ: ನೈಸಗರ್ಿಕ ಸಂಪತ್ತನ್ನು ಮಿತವಾಗಿ ಬಳಸಿ ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಶಾಲಾ ಹಂತದಿಂದಲೇ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಲ್ಪಾಡಿ ಪ್ರೈಮರಿ ಶಾಲೆಯಲ್ಲಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ರೇವತಿ ಕೆ. ಸಸಿಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಪ್ರತಿ ಮಗು ಗಿಡಗಳನ್ನು ನೆಟ್ಟು ತಾನು ಬೆಳೆಯುವುದರ ಜೊತೆಗೆ ಮರವನ್ನು ಬೆಳೆಸುವುದರ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿ ಉತ್ತಮ ನಾಗರಿಕರಾಗಬೇಕೆಂದು ಕರೆ ನೀಡಿದರು. ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸ್ಲೈಡ್ ಶೋ ಕಾರ್ಯಕ್ರಮ ಜರಗಿತು. ಎಲ್ಲ ಜೀವರಾಶಿಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಪರಿಸರವು ಸಂರಕ್ಷಣೆ ನೀಡುತ್ತದೆ. ಹಾಗೆಯೇ ಪರಿಸರ ರಕ್ಷಿಸುವ ಮೂಲಕ ನಾವು ಅದರ ಋಣ ತೀರಿಸುವ ಕಾರ್ಯ ಮಾಡ ಬೇಕಾಗಿದೆಯೆಂದು ಶಿಕ್ಷಕ ಪ್ರವೀಣ್ ಅಭಿಪ್ರಾಯಪಟ್ಟರು.
ಬಳಿಕ ನಡೆದ ಜಾಗೃತಿ ಮೆರವಣಿಗೆಯಲ್ಲಿ ಶಿಕ್ಷಕರಾದ ಚಂದ್ರಕಾಂತ್, ಜೋಕಿ, ರೇಖಾ, ಮಾತೃಸಂಘದ ಸದಸ್ಯೆಯರು ಪಾಲ್ಗೊಂಡರು. ಶಾಲೆಯ ಎಲ್ಲ ಪುಟಾಣಿಗಳು ಉತ್ಸಾಹದಿಂದ ಭಾಗವಹಿಸಿದ್ದ ಈ ಕಾರ್ಯಕ್ರಮದ ಕೊನೆಗೆ ಮಕ್ಕಳು ತಮ್ಮ ಸ್ವಂತ ಆರೈಕೆಯಲ್ಲಿ ಬೆಳೆಸಲು ಸಸಿಗಳನ್ನು ವಿತರಿಸಲಾಯಿತು.