ಆಸನಗಳ ಜೊತೆಗೆ ಯಮ-ನಿಯಮಗಳ ಬಳಕೆ ಅಗತ್ಯ-ಯೋಗಾಚಾರ್ಯ ಪುoಡರೀಕಾಕ್ಷ ಬೆಳ್ಳೂರು
ಬದಿಯಡ್ಕ: ಇಂದು ಯೋಗ ದಿನಾಚರಣೆಯಲ್ಲಿ ಆಸನಗಳ ಬಳಕೆಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ. ಆದರೆ ಅವುಗಳೊಂದಿಗೆ ಯಮ-ನಿಯಮಗಳೂ ಮಹತ್ವಪೂರ್ಣವಾಗಿರುವುದನ್ನು ಮನಗಾಣಬೇಕು ಎಂದು ಹಿರಿಯ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಯೋಗದಿನಾಚರಣೆಯ ಅಂಗವಾಗಿ ಗುರುವಾರ ಸಂಜೆ ಬದಿಯಡ್ಕ ಗಣೇಶ ಕಲಾ ಮಂದಿರದಲ್ಲಿ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲದ "ಯೋಗ-ಯೋಗ್ಯ, ಆರೋಗ್ಯ ಭಾಗ್ಯ" ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಯಮಿತ ಆಹಾರ, ಮುದ್ರೆಗಳ ಬಳಕೆ ದೇಹಾರೋಗ್ಯದೊಂದಿಗೆ ಬುದ್ದಿಗೆ ಕ್ರಿಯಾತ್ಮಕತೆಯೊದಗಿಸುತ್ತದೆ. ಯಮ-ನಿಯಮಗಳ ಪರಿಪಾಲನೆಯು ಸಕ್ರಿಯವಾಗಿದ್ದಲ್ಲಿ ಭ್ರಷ್ಟಾಚಾರ, ಅಪರಾಧಿ ಕೃತ್ಯಗಳ ಮನೋಭಾವವನ್ನು ನಿಯಂತ್ರಿಸಿ ಸೌಖ್ಯ ನೀಡುವುದು ಎಮದು ಅವರು ತಿಳಿಸಿದರು.
ಸಾಮಾಜಿಕ ಮುಖಂಡ ತಿರುಪತಿಕುಮಾರ್ ಭಟ್ ಅಧ್ಯಕ್ಷತೆ ವಹಿಸಿದ್ದ ಸಮರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಮುಖಂಡ ಎಸ್.ಎನ್.ಮಯ್ಯ, ರಾಷ್ಟ್ರಸೇವಿಕಾ ಸಮಿತಿಯ ಹಿರಿಯ ಕಾರ್ಯಕತರ್ೆ ಗೀತಾ ಕಾಮತ್ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯೊಗ ಶಿಕ್ಷಣವನ್ನು ನೀಡುವಲ್ಲಿ ಕಾರ್ಯವೆಸಗುತ್ತಿರುವ ಡಾ.ಸಫ್ನಾ ಜೆ.ಉಕ್ಕಿನಡ್ಕ, ಸೂರ್ಯನಾರಾಯಣ ಒಳಮಲೆ, ಶಾರದಾ ಎಸ್.ಭಟ್ ಕಾಡಮನೆ, ಮಮತಾ ಸಾವಿತ್ರಿ ಚಾಳೆತ್ತಡ್ಕ, ದಿವ್ಯಾ ಪಿ.ಪಳ್ಳತ್ತಡ್ಕ, ಭಾರತೀ ಕನ್ಯಪ್ಪಾಡಿಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲು ಬದಿಯಡ್ಕ ಮೇಲಿನ ಪೆಟೆಯಿಂದ ಬಸ್ ನಿಲ್ದಾಣ, ಬಳಿಕ ಗಣೇಶ ಮಂದಿರಕ್ಕೆ ಯೋಗ ನಡಿಗೆ "ಶೋಭಾಯಾತ್ರೆ" ನಡೆಯಿತು. ಬದಿಯಡ್ಕದ ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಶೋಭಾಯಾತ್ರೆ ಉದ್ಘಾಟಿಸಿ ಚಾಲನೆ ನೀಡಿದರು. ಶ್ರೀಮಾತಾ ಯೋಗಕೇಂದ್ರ ಪಳ್ಳತ್ತಡ್ಕ, ಯೋಗ ಬಳಗ ಬದಿಯಡ್ಕ, ಚಿನ್ಮಯ ವಿದ್ಯಾಲಯ ಬದಿಯಡ್ಕ, ಶ್ರೀಭಾರತೀ ವಿದ್ಯಾಪೀಠ ಬದಿಯಡ್ಕ, ಪೆರಡಾಲ ನವಜೀವನ ಹ್ಯಯರ್ ಸೆಕೆಮಡರಿ ಶಾಲೆ, ಅಗಲ್ಪಾಡಿ ಅನ್ನಪೂಣರ್ೇಶ್ವರಿ ಫ್ರೌಢಶಾಲೆಯ ತಂಡ ಪಾಲ್ಗೊಂಡರು.
ಗಣೇಶ ಮಂದಿರದಲ್ಲಿ ನಡೆದ ಯೋಗ ಹಾಗೂ ಆಸನ ಪ್ರದರ್ಶನಗಲಲ್ಲಿ ಶ್ರೀಭಾರತೀ ವಿದ್ಯಾಪೀಠ, ಪೆರಡಾಲ ನವಜೀವನ ಶಾಲೆ ಹಾಗೂ ಚಿನ್ಮಯ ವಿದ್ಯಾಲಯ ಬದಿಯಡ್ಕದ ವಿದ್ಯಾಥರ್ಿಗಳು ಮ್ನವಿರೇಳಿಸುವ ಅಕರ್ಷಕ ಪ್ರದರ್ಶನ ನೀಡಿದರು. ಜೊತೆಗೆ ಸಾರ್ವಜನಿಕ ವಿಭಾಗದಲ್ಲಿ ಹಿರಿಯರಾದ ಶ್ಯಾಮ ಭಟ್ ನೀಚರ್ಾಲು, ಕೃಷ್ಣ ಹೆಬ್ಬಾರ್, ಸುಧಾವಾಣಿ, ಸಹನಾ ಕೋರಿಕ್ಕಾರ್ ವಿವಿಧ ಯೋಗ ಪ್ರದರ್ಶನ ನೀಡಿದರು.