HEALTH TIPS

No title

                 ಭಗವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ
     ಮಂಜೇಶ್ವರ :  ಜೂನ್ ತಿಂಗಳು  ಹವಾಮಾನ ಬದಲಾಗುವ  ಕಾಲವಾಗಿದ್ದು,  ಈ ಸಮಯದಲ್ಲಿ ವಾತಾವರಣ  ಮಾನವನ ದೇಹದಲ್ಲಿ  ಜಡತ್ವವನ್ನುಂಟು ಮಾಡುವ ಸಾಧ್ಯತೆ ಹೆಚ್ಚು.  ಆದುದರಿಂದ  ಯೋಗಾಭ್ಯಾಸ  ಮಾನವನ  ಈ ಜಡತ್ವ ನಿವಾರಣೆಗೆ  ಸೂಕ್ತ ಮಾರ್ಗವಾಗಿದೆ.  ಅದಕ್ಕಾಗಿ ಅತಿ ದೀರ್ಘ  ಹಗಲನ್ನು ಹೊಂದಿರುವ ಜೂನ್.21ರಂದೇ ವಿಶ್ವ ಯೋಗ  ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು  ಕನಿಲ ಶ್ರೀ ಭಗವತೀ  ಆಂಗ್ಲ ಮಾಧ್ಯಮ ಶಾಲಾ ಆಡಳಿತ ಸಮಿತಿ ಅಧ್ಯಕ್ಷ  ಟಿ.ಲಕ್ಷ್ಮಣ ಸಾಲಿಯಾನ್ ಅಭಿಪ್ರಾಯಪಟ್ಟರು.
    ಕನಿಲ ಶ್ರೀ ಭಗವತಿ ಶಾಲೆಯಲ್ಲಿ ಗುರುವಾರ ನಡೆದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಇವರು ಮಾತನಾಡಿದರು.
   ಯೋಗ ಶಾಸ್ತ್ರ ಮನುಷ್ಯನ ಉತ್ತಮ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾಥರ್ಿಗಳು ಯೋಗಾಭ್ಯಾಸವನ್ನು ಮೈಗೂಡಿಸುವುದರೊಂದಿಗೆ ಉತ್ತಮ ಭವಿಷ್ಯವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
   ವೇದಿಕೆಯಲ್ಲಿ  ಪ್ರಧಾನ ಕಾರ್ಯದಶರ್ಿ  ಪದ್ಮನಾಭ ಕಡಪ್ಪುರ, ಕೋಶಾಧಿಕಾರಿ  ಯಾದವ ಬಿ.ಎಂ,  ಶಾಲಾ ಮುಖ್ಯ ಶಿಕ್ಷಕಿ  ಮಂಜುಳಾ.ಟಿ.ವಿ, ದಯಾನಂದ.ಎಂ,  ಮಾಲತಿ.ಎ,  ಮನೋಜ್, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದದವರು ಭಾಗವಹಿಸಿದರು. ಬಳಿಕ ವಿದ್ಯಾಥರ್ಿಗಳಿಂದ ವಿವಿಧ ಆಸನಗಳ ಯೋಗಾಭ್ಯಾಸ ಪ್ರದರ್ಶನ ನಡೆಯಿತು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries