HEALTH TIPS

No title

               ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶ್ರೀನಿವಾಸ್ ಎ.ರಿಂದ ಅದಾಲತ-ಪರಿಶಿಷ್ಟ ಜಾತಿ, ವರ್ಗ ಕಾಲನಿವಾಸಿಗಳಿಂದ ದೂರು ಸ್ವೀಕಾರ: ತುತರ್ು ಪರಿಹಾರಕ್ಕೆ ಸೂಚನೆ
     ಮಂಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಕಾಲನಿವಾಸಿಗಳ ಸಮಸ್ಯೆಗಳ ದೂರುಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರವನ್ನು ಕಂಡು ಕೊಳ್ಳುವ ಅದಾಲತ್ ಕಾರ್ಯಕ್ರಮ ಮಂಜೇಶ್ವರ ಮಸರ್ಿ ಹಾಲ್ ನಲ್ಲಿ ಗುರುವಾರ ನಡೆಯಿತು.
    ಅಂಬೇಡ್ಕರ್ ಕಾಲನಿ, ಹಾಗೂ ಇತರ ಕಾಲನಿಯಲ್ಲಿರುವ ಜನರು ಅದಾಲತ್ನಲ್ಲಿ ಭಾಗವಹಿಸಿದರು.
   ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಶ್ರೀನಿವಾಸ್ ಎ. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟವರ್ಗ ಕಾಲನಿವಾಸಿಗಳ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಅದಾಲತನ್ನು ಏರ್ಪಡಿಸಿದ್ದೇವೆ. ಈ ಅದಾಲತ್ಗೆ ಎಲ್ಲಾ ಇಲಾಖೆಗಳು ಸಹಕರಿಸಿವೆ. ಯಾವ ಇಲಾಖೆ ಸಂಬಂಧಪಟ್ಟ ದೂರಗಳನ್ನು ಆಯಾ ಇಲಾಖೆಗೆ ಕಳುಹಿಸಿ ಪರಿಹಾರವನ್ನು ಕಲ್ಪಿಸಲು ಪ್ರಯತ್ನಪಡುತ್ತೇವೆ ಎಂದು ಅವರು ಹೇಳಿದರು.
   ಕಾಸರಗೋಡು ಎಸ್ ಎಂ ಎಸ್ ಡಿ ವೈ ಎಸ್ಪಿ ಹರೀಶ್ಚಂದ್ರ ನಾಯ್ಕ್ ವಿಷಯ ಮಂಡನೆ ನಡೆಸಿದರು. ವೇದಿಕೆಯಲ್ಲಿ ಹಸೀನಾ ಹಮೀದ್, ಬೇಬಿಲತ ಯಾದವ, ಸವಿತಾ ಮೊದಲಾದವರು ಉಪಸ್ಥಿರಿದ್ದರು.
   ಲಭಿಸಿದ ನೂರಕ್ಕೂ ಮಿಕ್ಕ ದೂರುಗಳಲ್ಲಿ ಭೂಮಿಯ ಪಟ್ಟೆಗೆ ಸಂಬಂಧಿಸಿದ ದೂರುಗಳೇ ಅಧಿಕವಾಗಿತ್ತು. ವಿದ್ಯುತ್ ಇಲಾಖೆ ಅಧಿಕಾರಿಗಳ ಅನಾಸ್ಥೆಯಿಂದ ವಿದ್ಯುತ್ ಲಭಿಸುತ್ತಿಲ್ಲವೆಂಬ ದೂರುಗಳು ಕೇಲಿಬಂತು. ಭವನ ನಿಮರ್ಾಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಸವಲತ್ತುಗಳು ಸಿಗುತ್ತಿಲ್ಲ, ಪರಿಶಿಷ್ಟ ಜಾತಿ ಕಾಲನಿಯಲ್ಲಿರುವ ಸ್ಮಶಾನ ಅಭಿವೃದ್ದಿ ಕಾಣುತ್ತಿಲ್ಲ ಮೊದಲಾದ ರೀತಿಯ ದೂರುಗಳು ಲಭಿಸಿದವು. ಇದನ್ನು ಪೊಲೀಸ್ ವರಿಷ್ಟಾಧಿಕಾರಿಯವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನೀಡಿ ತುತರ್ು ಪರಿಹಾರ ನೀಡುವಂತೆ ಸೂಚನೆ ನೀಡಿದರು. ಮಂಜೇಶ್ವರ ಠಾಣಾಧಿಕಾರಿ ಶಾಜಿ ಎಂ ಪಿ ಸ್ವಾಗತಿಸಿ, ಗುರುವಪ್ಪ ವಂದಿಸಿದರು.

 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries