HEALTH TIPS

No title

                  ಕಾಸರಗೋಡು ಜಿಲ್ಲೆಯಲ್ಲಿ  ವ್ಯಾಪಿಸುತ್ತಿರುವ ಮಾರಕ ಸಾಂಕ್ರಾಮಿಕ ಜ್ವರ
      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ  ಡೆಂಗ್ಯೂ ವೈರಸ್ ಹಾಗೂ ಜ್ವರ ಮತ್ತೆ ಆತಂಕ ಹುಟ್ಟಿಸಿದ್ದು ವಿವಿಧೆಡೆಗಳಿಗೆ ವ್ಯಾಪಿಸುತ್ತಿರುವ ಬಗ್ಗೆ  ವರದಿಗಳು ತಿಳಿಸುತ್ತಿವೆ. ಆದರೆ ಈ ಕುರಿತು ಜಿಲ್ಲಾ  ಆರೋಗ್ಯ ಇಲಾಖೆ ಮಾತ್ರ ಸಮರ್ಪಕ ಕ್ರಮಗಳನ್ನು  ಕೈಗೊಳ್ಳುತ್ತಿಲ್ಲ  ಎಂಬ ಆರೋಪ ಕೇಳಿಬರುತ್ತಿದೆ.
    ಬೇಸಿಗೆ ಮಳೆಯ ಆರಂಭದಲ್ಲೇ ವ್ಯಾಪಕವಾಗಿ ಹರಡಿದ ಡೆಂಗ್ಯೂ ಜ್ವರ ಬಾಸಿ ಕಳೆದ ಮೂರು ತಿಂಗಳ ಅವಯಲ್ಲಿ  ಜಿಲ್ಲೆಯಲ್ಲಿ  ಆರು ಮಂದಿ ಸಾವಿಗೀಡಾಗಿದ್ದಾರೆ. ಆರೋಗ್ಯ ಇಲಾಖೆಯು ಜ್ವರ ಹರಡದಂತೆ ಸಾಕಷ್ಟು  ಮುಂಜಾಗ್ರತೆ ಕ್ರಮಗಳನ್ನು  ವಹಿಸಿದ್ದರೂ, ಅದ್ಯಾವುದೂ ಸಮರ್ಥ ಕ್ರಮಗಳಲ್ಲ. ಆದ್ದರಿಂದ ಇನ್ನೂ  ಸಂಪೂರ್ಣವಾಗಿ ಜ್ವರ ನಿಯಂತ್ರಣಕ್ಕೆ ಬರಲು ಸಾಧ್ಯವಾಗಿಲ್ಲ.
    ಡೆಂಗ್ಯೂ ಜ್ವರ ಬಾಸಿ ಹಲವು ಮಂದಿ ವಿವಿಧ ಆಸ್ಪತ್ರೆಗಳಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾರೆ. ಕಾಸರಗೋಡು ನಗರ ಹಾಗೂ ಜಿಲ್ಲೆಯ ಅನೇಕ ಸರಕಾರಿ ಮತ್ತು  ಖಾಸಗಿ ವಲಯದ ಆಸ್ಪತ್ರೆಗಳಲ್ಲಿ  ಜ್ವರ ಬಾತ ರೋಗಿಗಳು ತಪಾಸಣೆ ನಡೆಸುತ್ತಿರುವ ಬಗ್ಗೆ  ವರದಿಯಾಗುತ್ತಿವೆ. ಜ್ವರ ಹರಡುವಿಕೆಯನ್ನು  ನಿಯಂತ್ರಿಸಲು ಆರೋಗ್ಯ ಇಲಾಖೆಯು ಪ್ರಯತ್ನಿಸುತ್ತಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ.
    ಡೆಂಗ್ಯೂ ಜ್ವರ ಹರಡುತ್ತಿದೆ ಎಂಬುದನ್ನು  ಅರಿಯಲು ಈ ರೋಗಕ್ಕೆ ತುತ್ತಾದವರ ಸಂಖ್ಯೆಯೇ ನಿದರ್ಶನವಾಗಿದೆ. ಸೊಳ್ಳೆಗಳಿಂದ ಮಾತ್ರ ಹರಡುವ ಡೆಂಗ್ಯೂ ಜ್ವರವನ್ನು  ಸೊಳ್ಳೆ ನಾಶ ಮಾಡುವ ಮೂಲಕ ಕಡಿಮೆಗೊಳಿಸಬಹುದಾಗಿದ್ದರೂ, ಅದು ಇದುವರೆಗೆ ಸಾಧ್ಯವಾಗದಿರುವುದು ಆತಂಕದ ವಿಷಯವಾಗಿದೆ.
   ವಲಿಯಪರಂಬ ಹಾಗೂ ಪಡನ್ನ  ಗ್ರಾಮ ಪಂಚಾಯತ್ಗಳನ್ನು  ಹೊರತುಪಡಿಸಿ ಜಿಲ್ಲೆಯ ಇತರ ಎಲ್ಲಾ  ಗ್ರಾಮ ಪಂಚಾಯತ್ಗಳಲ್ಲಿ  ಮತ್ತು  ನಗರಸಭೆಗಳ ವ್ಯಾಪ್ತಿಯಲ್ಲಿ  ಡೆಂಗ್ಯೂ ಜ್ವರ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. 
   ಡೆಂಗ್ಯೂ ಜ್ವರ ಮೊದಲು ಪತ್ತೆಯಾದ ಕೋಡೋಂ ಬೇಳೂರು, ಬಳಾಲ್ ಗ್ರಾಮ ಪಂಚಾಯತ್ಗಳಲ್ಲಿ  ಈಗಲೂ ಡೆಂಗ್ಯೂ ತೀವ್ರವಾಗಿ ಹರಡಿ ಮುಂದುವರಿಯುತ್ತಿದೆ. ಚೆಂಗಳ, ದೇಲಂಪಾಡಿ ಮೊದಲಾದ ಗ್ರಾಮ ಪಂಚಾಯತ್ಗಳಲ್ಲಿ  ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ಎರಡೂ ಪಂಚಾಯತ್ಗಳಲ್ಲಿ  ಡೆಂಗ್ಯೂ ವೈರಸ್ ಭಾರೀ ಸಮಸ್ಯೆಯಾಗಿ ಕಾಡುತ್ತಿದೆ.
   ಬೆಳ್ಳೂರು ಗ್ರಾಮ ಪಂಚಾಯತ್ನ ಒಂದು ವಾಡರ್್ನಲ್ಲಿ  ಆರೋಗ್ಯ ಕಾರ್ಯಕರ್ತರು ತಿಳುವಳಿಕಾ ತರಗತಿ ನಡೆಸುವಾಗ ಅಡಿಕೆ ತೋಟದ ಹಾಳೆ ಮತ್ತು  ರಬ್ಬರ್ ತೋಟದ ಗೆರಟೆಗಳನ್ನು  ತೆರವುಗೊಳಿಸಬೇಕಾದ ಪ್ರಾಧಾನ್ಯತೆಯ ಕುರಿತು ಮಾಹಿತಿ ನೀಡಲಾಗಿತ್ತು. ಇಷ್ಟು  ದೊಡ್ಡ  ತೋಟದ ಹಾಳೆ ಮತ್ತು  ಗೆರಟೆಗಳನ್ನು  ಹೇಗೆ ತೆರವುಗೊಳಿಸುವುದು ಎಂಬುದು ತೋಟದ ಮಾಲಕರ ಪ್ರಶ್ನೆಯಾಗಿದೆ. ತೋಟದಲ್ಲಿ  ಬೀಳುವ ಅಡಿಕೆಗಳನ್ನು  ಕೂಡ ಹೀಗೆಯೇ ತೋಟದಲ್ಲೇ ಬಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ ತೋಟದ ಮಾಲಕರಿಂದ ಉತ್ತರವಿಲ್ಲ  ಎಂಬುದು ಗಮನಾರ್ಹ ಸಂಗತಿಯಾಗಿದೆ.
   ಇಂತಹ ಅಡಿಕೆ, ರಬ್ಬರ್ ತೋಟಗಳಲ್ಲಿ  ಹಾಳೆ ಮತ್ತು  ಗೆರಟೆಗಳಲ್ಲಿ  ನೀರು ಕಟ್ಟಿ  ನಿಲ್ಲುವುದು ಜ್ವರ ಹರಡಲು ಪ್ರಧಾನ ಕಾರಣವಾಗಿದೆ. ಕೆಲವು ಪಂಚಾಯತ್ಗಳಲ್ಲಿ  ಆರೋಗ್ಯ ಇಲಾಖೆಯು ನಿರಂತರವಾಗಿ ನೋಟೀಸ್ ನೀಡಿದರೂ ತೋಟಗಳನ್ನು  ಶುಚಿಗೊಳಿಸಲು ಮುಂದಾಗದವರೂ ಇದ್ದಾರೆ. ಅಂತಹವರ ಮೇಲೆ ಕಠಿಣ ಕ್ರಮಗಳನ್ನು  ಕೈಗೊಳ್ಳಲು ಅಧಿಕಾರವಿಲ್ಲದಿರುವುದು ಆರೋಗ್ಯ ಕಾರ್ಯಕರ್ತರನ್ನು  ಕಂಗೆಡಿಸಿದೆ. ಅಲ್ಲದೆ ಆರೋಗ್ಯ ಇಲಾಖೆಯ ಕಾರ್ಯಚಟುವಟಿಕೆಗಳ ಮೇಲೆ ವ್ಯತಿರಿಕ್ತ  ಪರಿಣಾಮಕ್ಕೂ ಕಾರಣವಾಗುತ್ತಿದೆ. 
   ಈಡಿಸ್ ಸೊಳ್ಳೆಗಳೇ ಜ್ವರಕ್ಕೆ ಕಾರಣ : ಕಾಸರಗೋಡು ಜಿಲ್ಲೆಯಲ್ಲಿ  ದಿನದಿಂದ ದಿನಕ್ಕೆ ಬೇರೆ ಬೇರೆ ಪ್ರದೇಶಗಳಿಗೆ ಜ್ವರ ವಿಸ್ತರಿಸುತ್ತಿರುವುದು ಆರೋಗ್ಯ ಇಲಾಖೆಯನ್ನು  ಆತಂಕಕ್ಕೀಡು ಮಾಡಿದೆ. ಮಳೆ ಹಾಗೂ ಬಿಸಿಲನ್ನು ಒಳಗೊಂಡ ಹವಾಮಾನವು ಡೆಂಗ್ಯೂ ಜ್ವರ ಹರಡಲು ಪ್ರಮುಖ ಕಾರಣ. ಕಟ್ಟಿ ನಿಲ್ಲುವ ಮಳೆನೀರಿನಲ್ಲಿ  ಡೆಂಗ್ಯೂ ಜ್ವರ ಹರಡುವ ಈಡಿಸ್ ಸೊಳ್ಳೆಗಳು ಮೊಟ್ಟೆ  ಇಡುತ್ತವೆ. ಮಳೆ ನಿಂತ ಬಳಿಕದ ದಿನಗಳು ಸೊಳ್ಳೆಗಳಿಗೆ ಬೆಳೆಯಲು ಅನುಕೂಲವಾಗುತ್ತಿದೆ. ಅಂತಹ ಸೊಳ್ಳೆಗಳ ಮೊಟ್ಟೆಗಳನ್ನು  ಹುಡುಕಿ ನಾಶಗೊಳಿಸಬೇಕಾದ ಚಟುವಟಿಕೆ ಸರಿಯಾದ ರೀತಿಯಲ್ಲಿ  ನಡೆಯುತ್ತಿಲ್ಲ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries