HEALTH TIPS

No title

               ಎಸ್ಪಿ ಡಾ.ಶ್ರೀನಿವಾಸರಿಂದ ಪ್ರಧಾನಿಯ ಫಿಟ್ನೆಸ್ಚಾಲೆಂಜ್ ಸ್ವೀಕಾರ
    ಕುಂಬಳೆ: ಜಿಲ್ಲಾ ಪೋಲಿಸ್ ಮುಖ್ಯಸ್ಥ ಡಾ. ಎ.ಶ್ರೀನಿವಾಸ್ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ನೆಸ್ಚಾಲೆಂಜ್ ಸ್ವೀಕರಿಸಿದ್ದಾರೆ. ಜಿಲ್ಲಾ ಪೋಲಿಸ್ ಮುಖ್ಯಸ್ಥರ ಫೇಸ್ಬುಕ್ ಪೋಸ್ಟ್ನಲ್ಲಿ ಚಾಲೆಂಜ್ ಸ್ವೀಕರಿಸಿ ಯೋಗಾಸನ ಮಾಡುತ್ತಿರುವ 1.42 ನಿಮಿಷದ ವಿಡಿಯೋಅಪ್ ಲೋಡ್ ಮಾಡಲಾಗಿದೆ.   ಡಾ.ಎ.ಶ್ರೀನಿವಾಸ ತನ್ನ ದೇಹವನ್ನು ಬಳುಕಿಸಿ ಏಳು ಯೋಗಾಸನಗಳನ್ನು ಮಾಡುತ್ತಿರುವ ದೃಷ್ಯ ಕಾಣಬಹುದಾಗಿದೆ. ವಿಡಿಯೋವನ್ನು ಮಹಡಿಯಲ್ಲಿಚಿತ್ರೀಕರಿಸಲಾಗಿದ್ದು ಹೊರಗೆ ಮಳೆ ಹನಿಗಳು ಬೀಳುತ್ತಿರುವ ಶಬ್ದ ಆಲಿಸಬಹುದಾಗಿದೆ. ಪೋಲಿಸ್ ಮುಖ್ಯಸ್ಥ ನಾನು ಪ್ರಧಾನಿಯವರ ಚಾಲೆಂಜ್ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿ ಶೀಷರ್ಾಸನ ಮಾಡುವ ದೃಶ್ಯ ಇದಾಗಿದೆ. ಅನಾಯಾಸವಾಗಿ ಶೀಷರ್ಾಸನ ಮಾಡಿ ತನ್ನ ಕಾಲುಗಳನ್ನು ಪದ್ಮಾಸನ ಭಂಗಿಯಲ್ಲಿ ಮಡಚಿ ನಂತರ ಅರ್ಧ ಹಾಲಾಸನ, ಹಾಲಾಸನ ಮಾಡಿದ್ದಾರೆ.
   ಗುರುವಾರ ಬೆಳಗ್ಗೆ ಚಿತ್ರೀಕರಿಸಿದ ವಿಡಿಯೋವನ್ನು ಐಪಿಎಸ್ ಗ್ರೂಪಿನಲ್ಲಿ ಹಾಕಲಾಗಿತ್ತು, ನಂತರ ಫೇಸ್ಬುಕ್ ನಲ್ಲೂ ಅಪ್ ಲೋಡ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ತಾನು ಐಪಿಎಸ್ ಅಧಿಕಾರಿಯಾದ ನಂತರ ನಿರಂತರವಾಗಿ ಯೋಗವನ್ನು ಅಭ್ಯಸುತ್ತಿದ್ದು ಕಳೆದ 9 ವರ್ಷಗಳಿಂದ ಯೋಗಾಭ್ಯಾಸವನ್ನು ಮಾಡುತ್ತಿದ್ದೇನೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಫೇಸ್ಬುಕ್ ಪೋಸ್ಟ್ ಮೂಲಕ ಯುವ ಸಮೂಹಕ್ಕೆ ಜೂ.21 ವಿಶ್ವಯೋಗದಿನವೆಂಬ ನೆನಪಿಸಿ ಯೋಗ ದಿನದ ಮಹತ್ವ ಸಾರುವ ಕೆಲಸವನ್ನು ಎಸ್ಪಿ ಮಾಡಿದ್ದಾರೆ. ದೃಢ ಶರೀರ ಮತ್ತು ಮನಸ್ಸಿನ ಮೂಲಕ ಸದೃಢ ಕೇರಳ ಮತ್ತು ಸದೃಢ ಭಾರತ ನಿಮರ್ಾಣವಾಗಬೇಕು ಎಂದು ಅವರು ಹೇಳಿದ್ದಾರೆ. ಫೆಸ್ಬುಕ್ ಪೋಸ್ಟಿಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು, ನಾಲ್ಕು ಗಂಟೆಗಳಲ್ಲಿ 200 ಮಂದಿ ಶೇರ್ ಮಾಡಿದ್ದಾರೆ. ನಾಲ್ಕು ದಿನಗಳಲ್ಲಿ 816 ಬಾರಿ ಪೋಸ್ಟ್ ಶೇರ್ ಆಗಿದ್ದು, 32 ಸಾವಿರ ಮಂದಿ ವೀಕ್ಷಿಸಿದ್ದಾರೆ.
  ಮೂಲತಃ ಕನರ್ಾಟಕ ನಿವಾಸಿಯಾಗಿರುವ ಡಾ.ಎ.ಶ್ರೀನಿವಾಸ್ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries