ಬ್ಯಾಂಕ್ ಸಾಲದ ಬಡ್ಡಿದರ ಏರಿಕೆ
ನವದೆಹಲಿ: ಭಾರತೀಯ ರಿಸವರ್್ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು ಶೇ. 6ರಿಂದ 6.25ಕ್ಕೆ ಏರಿಸಿದ ಬೆನ್ನಿಗೆ ಬ್ಯಾಂಕ್ಗಳು ನಿಧಿ ಆಧಾರಿತ ಸಾಲದ ಬಡ್ಡಿದರದ ಅಂಚಿನ ವೆಚ್ಚ(ಎಂಸಿಎಲ್ಆರ್)ವನ್ನು ಗರಿಷ್ಠ 10 ಮೂಲಾಂಶಗಳಷ್ಟು ಏರಿಕೆ ಮಾಡಿವೆ. ಪರಿಣಾಮ, ವಾಹನ, ಗೃಹ ಮತ್ತು ವ್ಯಾಪಾರದ ಉದ್ದೇಶದ ಸಾಲ ಮರುಪಾವತಿಯ ಮಾಸಿಕ ಕಂತು(ಇಎಂಐ)ಗಳ ಮೊತ್ತ ಹೆಚ್ಚಳವಾಗಲಿದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ, ಐಸಿಐಸಿಐ, ಹೆಚ್ಡಿಎಫ್ಸಿ, ಇಂಡಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಮಹಾರಾಷ್ಟ್ರ ಬ್ಯಾಂಕ್ ಸೇರಿದಂತೆ ಇನ್ನಿತರ ಬ್ಯಾಂಕ್ಗಳು ಎಂಸಿಎಲ್ಆರ್ನಲ್ಲಿ ಗರಿಷ್ಠ 10 ಮೂಲಾಂಶ ಏರಿಕೆ ಮಾಡಿವೆ. ಈ ಏರಿಕೆಯನ್ನು ಬ್ಯಾಂಕ್?ಗಳು ಸಾಲ ಮರುಪಾವತಿಯ ಕಾಲಾವಧಿಗೆ ಅನುಗುಣವಾಗಿ ವಿವಿಧ ಹಂತದಲ್ಲಿ ಹೆಚ್ಚಳ ಮಾಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರು ತಿಂಗಳಿಂದ 5 ವರ್ಷದ ಅವಧಿಯ ಸಾಲದ ಎಂಸಿಎಲ್ಆರ್ ದರವನ್ನು 10 ಮೂಲಾಂಶ ಹೆಚ್ಚಿಸಿದೆ. ಕರೂರ್ ವೈಶ್ಯ ಬ್ಯಾಂಕ್ ಕೂಡ ಆರು ತಿಂಗಳಿಂದ ಒಂದು ವರ್ಷದ ಅವಧಿಯ ಸಾಲಕ್ಕೆ ಇದೇ ಮೊತ್ತದ ಏರಿಕೆಯನ್ನು ಮಾಡಿದೆ.
ಆರ್ಬಿಐ ಗವರ್ನರ್ ಉಜರ್ಿತ್ ಪಟೇಲ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಹೆಚ್ಚಿಸುವ ನಿಧರ್ಾರವನ್ನು ಕೈಗೊಳ್ಳಲಾಗಿತ್ತು.