HEALTH TIPS

No title

          ಓದಿನ ಅನುಭವಗಳನ್ನೇ ಮನೆ ಮಾಡಿದ ವಿದ್ಯಾಥರ್ಿಗಳಿಂದ ವಾಚನಾ ವಾರಕ್ಕೆ ಚಾಲನೆ 
     ಮುಳ್ಳೇರಿಯ : ಹೆಣೆದ ಮಡಲಿನ ಓಲೆಗಳನ್ನು ಜೋಡಿಸಿ ನಿಮರ್ಿಸಿದ ಮನೆ, ಅದರೊಳಗೆ ವಿವಿಧ ಬಣ್ಣಗಳಲ್ಲಿ ಮಕ್ಕಳು ತಯಾರಿಸಿದ ಓದಿನ ಟಿಪ್ಪಣಿಗಳನ್ನು ಓರಣಗೊಳಿಸಿರುವುದು ಗಮನ ಸೆಳೆಯಿತು.
  ಕುಂಡಂಗುಳಿ ಸರಕಾರಿ ಹಿರಿಯ ಪ್ರೌಢ ಶಾಲೆಯ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ವಾಚನಾವಾರಾಚರಣೆಯ ಅಂಗವಾಗಿ ಮಂಗಳವಾರ ನಡೆದ ವಿಭಿನ್ನ ರೀತಿಯ ಕಾರ್ಯಕ್ರಮ ಗಮನ ಸೆಳೆಯಿತು. ವಿಶೇಷವಾಗಿ ನಿಮರ್ಿಸಲಾದ ಓದಿನ ಮನೆ ವಿಶಿಷ್ಟವಾಗಿ ಮೂಡಿಬಂತು.
    ಹಳೆಯ ಸಾಹಿತಿಗಳಾದ ತಕಳಿ, ಬಷೀರ್, ಕಾರೂರ್, ಕಯ್ಯಾರ ಕಿಞ್ಞಣ್ಣ ರೈ,  ಮಂಜೇಶ್ವರ ಗೋವಿಂದ ಪೈ ಅವರ ಕೃತಿಗಳಲ್ಲದೆ ಹೊಸತಲೆಮಾರಿನ ಹಿರಿಯ ಸಾಹಿತಿಗಳಾದ ಎಂ. ಟಿ,  ಸಿ ರಾಧಾಕೃಷ್ಣನ್, ಸಂದೇಶ್ ಐಚ್ಚಿಕಾನ, ಬೆನ್ಯಾಮಿನ್, ಅಂಬಿಕಾಸುತನ್ ಮಾಂಗಾಡ್, ಚೆನ್ನವೀರ ಕಣವಿ ಅವರ ವಿವಿಧ ಕೃತಿಗಳನ್ನು 5ರಿಂದ 10ನೇ ತರಗತಿಯ ವರೆಗಿನ ವಿದ್ಯಾಥರ್ಿಗಳು ಓದಿ, ಟಿಪ್ಪಣಿಗಳನ್ನು  ತಯಾರಿಸಿದ್ದರು.ಕನ್ನಡ, ಮಲಯಾಳ ಭಾಷೆಗಳಲ್ಲಿ ಒಟ್ಟು ಅಂದಾಜು ಸಾವಿರದಷ್ಟು ಓದಿನ ಟಿಪ್ಪಣಿಗಳನ್ನು  ವಿದ್ಯಾಥರ್ಿಗಳು ಸಿದ್ಧಗೊಳಿಸಿದ್ದರು. ಸುಮಾರು ಎರಡು ಸಾವಿರ ಪುಸ್ತಕಗಳನ್ನು ಪ್ರದಶರ್ಿಸಲಾಯಿತು. ಓದಿದ ಪುಸ್ತಕಗಳ ಕುರಿತು ಚಚರ್ೆ, ರಸಪ್ರಶ್ನೆ ನಡೆಯಿತು. ಓದಿಗೆ ಸಂಬಂಧಿಸಿದ ವಿವಿಧ ಸ್ಪಧರ್ೆಗಳನ್ನು ನಡೆಸಲಾಯಿತು. ಪಾಲಕರು ಕೂಡ ಭಾಗವಹಿಸಿದ್ದರು. ಸಾಂಸ್ಕೃತಿಕ ಸಂಘಟಕ ಎ ದಾಮೋದರ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ರಘುನಾಥನ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಟಿ.ಭರತರಾಜ್,  ಶಾಲಾ ಮುಖ್ಯೋಪಾಧ್ಯಾಯಕೆ.ಅಶೋಕ್,ಹಿರಿಯ ಶಿಕ್ಷಕ ವಿ.ಹಾಶಿಂ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಕೆ.ಅಶೋಕನ್, ವಿ.ಕೆ.ಜಯರಾಜನ್, ಸತ್ಯನಾರಾಯಣ, ಕೆ.ಶಾಂತಕುಮಾರಿ, ಎಸ್.ಎಲ್.ಪ್ರಕಾಶ್, ಸಿ.ಪ್ರಶಾಂತ್, ಎಂ.ಕೆ.ಪ್ರದೀಪನ್, ಎ.ಗೋಪಾಲಕೃಷ್ಣ ನಾಯರ್, ಶ್ರೀಶಕುಮಾರ ಪಂಜಿತ್ತಡ್ಕ, ಅನೂಫ್ ಪೆರಿಯಾಲ್, ಕೆ.ಜ್ಯೋತಿಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries