HEALTH TIPS

No title

                 ಕರುಳ ಸಂಬಂಧಗಳಿಗಿಂತ ಮಿಗಿಲು ನೆರಳ ಸಂಬಂಧ
                   ಕುಳೂರಿನಲ್ಲಿ ಕನ್ನಡ ಕಂದನ ಸಿರಿಚಂದನ ಗಿಡ
      ಮಂಜೇಶ್ವರ: ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದು ಅನಗತ್ಯ ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತ ತಮ್ಮ ಭವಿಷ್ಯವನ್ನು ಆಧುನಿಕ ತಂತ್ರಜ್ಞಾನಗಳಿಗೆ ಬಲಿಯಾಗಿಸುವ ಇಂದಿನ ಯುವ ತಲೆಮಾರಿಗಿಂತ ತೀರಾ ವ್ಯತಿರಿಕ್ತವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಮತ್ತು ನೈಸಗರ್ಿಕವಾಗಿ ಯೋಚಿಸುವ ಮತ್ತು ಆ ದಿಶೆಯಲ್ಲಿ ಕಾರ್ಯಪೃತ್ತರಾದ ಸಿರಿಚಂದನ ಕನ್ನಡ ಯುವ ಬಳಗವು ಇಂದಿನ ತಲೆಮಾರಿಗೆ ಆದರ್ಶಪ್ರಾಯವಾಗಿದೆ ಎಂದು ಮೀಂಜ ಗ್ರಾಮ ಪಂಚಾಯತು ಸದಸ್ಯೆ ಚಂದ್ರಾವತಿ  ಅಭಿಪ್ರಾಯ ವ್ಯಕ್ತಪಡಿಸಿದರು.
    ಸಿರಿಚಂದನ ಕನ್ನಡ ಯುವಬಳಗದ ವತಿಯಿಂದ ನಡೆದುಕೊಂಡು ಬರುತ್ತಿರುವ ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆಯ ಮೂರನೆಯ ಹಂತವನ್ನು ಅವರು ಮೀಯಪದವು ಸಮೀಪದ ಕುಳೂರು ಪ್ರಮೋದ್ ಶೆಟ್ಟಿ  ಅವರ ನಿವಾಸದಲ್ಲಿ ಶನಿವಾರ ನೆರವೇರಿಸಿ ಮಾತನಾಡಿದರು.
    ಸಾಮಾನ್ಯವಾಗಿ ಸರಕಾರಿ ಸ್ಥಳಗಳಲ್ಲಿ ಗಿಡನೆಡುವ ಪ್ರಕ್ರಿಯೆ ವರ್ಷಂಪ್ರತಿ ನಡೆಯುತ್ತಿದೆ. ಆದರೆ ಮುಂದೊಂದು ದಿನ ಗಿಡ ನೆಟ್ಟ ಸ್ಥಳವನ್ನು ರಸ್ತೆ ಅಗಲೀಕರಣಕ್ಕೋ ಅಥವಾ ಇನ್ನಿತ್ತರ ಯಾವುದೋ ಯೋಜನೆಯ ಅಗತ್ಯಕ್ಕೋ ಉಪಯೋಗಿಸುವ ಸಂದರ್ಭದಲ್ಲಿ ನೆಟ್ಟ ಗಿಡಗಳನ್ನು ಕಿತ್ತು ತೆಗೆಯುವ ಕೆಲಸ ಕೆಲವೊಮ್ಮೆ ನಡೆಯುತ್ತದೆ. ಆದರೆ ಬಳಗದ ಯುವಕರು ವಿದ್ಯಾಥರ್ಿಯೊಬ್ಬಳ ಮನೆ ಹಿತ್ತಲಲ್ಲಿ ಸುರಕ್ಷಿತ ಸ್ಥಳದಲ್ಲಿ ಗಿಡ ನೆಡುವುದರಿಂದ ಆ ಗಿಡ ಮುಂದಕ್ಕೆ ಬೆಳೆಯಲು ಯಾವುದೇ ಅಡೆತಡೆ ಇರುವುದಿಲ್ಲ. ಮಾತ್ರವಲ್ಲ ನಾಳೆಯ ದಿನಗಳಲ್ಲಿ ಬೇರೆ ಬೇರೆ ವಲಯಗಳಲ್ಲಿ ಅಧಿಕಾರಿಯಾಗಲಿರುವ ಅಥವಾ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲಿರುವ ಈ ಯುವಮನಸ್ಸುಗಳಿಗೆ ಈ ಯೋಜನೆಯ ಮೂಲಕ ಹಳ್ಳಿಗಳ ಪರಿಚಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವ ತನ್ನಿಂದ ತಾನೇ ತಿಳಿಯಲು ಪ್ರೇರಣೆಯಾಗುತ್ತದೆ ಎಂದು ಚಂದ್ರಾವತಿ ತಿಳಿಸಿದರು.
     ಕುಮಾರಿ ಸಾನ್ವಿಕ ಕುಳೂರು ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾಥರ್ಿನಿಯಾಗಿದ್ದು, ಅವರ ಮನೆ ಹಿತ್ತಲಲ್ಲಿ ಬಳಗದ ಸದಸ್ಯರು ತುಷಾರ ಅವರ ಹೆಸರಲ್ಲಿ ಗಿಡ ನೆಟ್ಟು, ಸಂರಕ್ಷಣೆಯ ಹೊಣೆಯನ್ನು ವಿದ್ಯಾಥರ್ಿನಿಗೆ ಪ್ರಮಾಣ ಪತ್ರ ನೀಡುವ ಮೂಲಕ ಹಸ್ತಾಂತರಿಸಿದರು.
  ಕಾರ್ಯಕ್ರಮದಲ್ಲಿ ಬಳಗದ ಲೆಕ್ಕಪರಿಶೋಧಕ ರಂಗನಾಥ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಕುಳೂರು ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಿಕೆ ಸೌಮ್ಯಾ ಪಿ,  ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಗೂ ಸಾನ್ವಿಕಾಳ ತೀರ್ಥರೂಪರಾದ ಪ್ರಮೋದ್ ಶೆಟ್ಟಿ ಮಾತನಾಡಿ, ಕಾಲೇಜು ಕಲಿತ ಯುವಕರಿಗೆ ಸಾಮಾಜಿಕ ಪರಿಜ್ಞಾನವಿಲ್ಲ ಎಂಬ ಹೇಳಿಕೆಗಳನ್ನು ಅಲ್ಲಗಳೆದು ಬಳಗದ ಸದಸ್ಯರು ಜಿಲ್ಲೆಯ ಮನೆ ಮನೆ ತೆರಳಿ ಕನ್ನಡ ಮಗುವಿನ ಮನೆ ಹಿತ್ತಲಲ್ಲಿ ಗಿಡ ನೆಡುವುದರ ಮೂಲಕ ಕರುಳ ಸಂಬಂಧಗಿಂತ ಮಿಗಿಲು ನೆರಳ ಸಂಬಂಧ ಎಂಬ ಪವಿತ್ರ ವಾಕ್ಯಕ್ಕೆ ನ್ಯಾಯವೊದಗಿಸಿದ್ದಾರೆ ಎಂದರು. ನೆರಳ ಸಂಬಂಧವೂ ಕರುಳ ಸಂಬಂಧದಂತೆ ಪವಿತ್ರವಾದುದು ಎಂಬುದು ಈ ಯೋಜನೆಯ ಸಂದೇಶವಾಗಿದೆ ಎಂದು ತಿಳಿಸಿದರು. 
   ಕುಳೂರು ಶಾಲೆಯ ಅಧ್ಯಾಪಕ ಜಯಪ್ರಶಾಂತ್, ಅಧ್ಯಾಪಿಕೆ ನಯನ, ಪರಿಸರ ನಿವಾಸಿ ಜಯರಾಜ್ ಶೆಟ್ಟಿ, ಬಳಗದ ಅಧ್ಯಕ್ಷ ರಕ್ಷಿತ್ ಪಿ ಎಸ್, ಬಳಗದ ಪರಿಸರ ಸಂರಕ್ಷಣೆ ಸಮಿತಿಯ ಸಂಯೋಜಕ ಕೀರ್ತನ್ ಕುಮಾರ್ ಸಿ ಎಚ್, ಸಹ ಸಂಯೋಜಕ ಸುಜಿತ್ ಉಪ್ಪಳ, ಕಾರ್ಯದಶರ್ಿ ರಾಜೇಶ್ ಎಸ್ ಪಿ, ಸದಸ್ಯ ಧನೇಶ್ ಕೋಟೆಕಣಿ, ಜನಾರ್ಧನ ಹಾಗೂ ಕುಮಾರಿ ಸಾನ್ವಿಕ ಈ ಸಂದರ್ಭದಲ್ಲಿ ಮಾತನಾಡಿದರು.
   ಸಿರಿಚಂದನ ಕನ್ನಡ ಯುವಬಳಗದ ಮಾರ್ಗದರ್ಶಕ ಹಾಗೂ ಯೋಜನೆಯ ರೂವಾರಿ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪ್ರಮೋದ್ ಶೆಟ್ಟಿ ಸ್ವಾಗತಿಸಿ, ಬಳಗದ ಕೋಶಾಧಿಕಾರಿ ವಿನೋದ್ ಕುಮಾರ್ ಸಿ ಎಚ್ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸಿರಿಚಂದನದ ಕಾರ್ಯಕರ್ತರು ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಅಧ್ಯಾಪಿಕೆ ಸೌಮ್ಯಾ ಕುಳೂರು, ನಯನ, ಗ್ರಾಮ ಪಂಚಾಯತು ಸದಸ್ಯೆ ಚಂದ್ರಾವತಿ ಮೊದಲಾದವರು ಜೊತೆಗಿದ್ದರು.

   







Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries