ಕನ್ನಡ ಗಝಲ್
ಕವಯಿತ್ರಿ-ಚೇತನಾ ಕುಂಬಳೆ
ಅಮ್ಮನ ಮಮತೆಯ ಕೈತುತ್ತಲ್ಲಿ ಬಾಲ್ಯದ ನೆನಪಿದೆ
ಅಪ್ಪನ ಪ್ರೀತಿಯ ಅಪ್ಪುಗೆಯಲ್ಲಿ ಬಾಲ್ಯದ ನೆನಪಿದೆ
ತೇಲಿಬಿಟ್ಟ ಕಾಗದದ ದೋಣಿಗಳು ನಿನ್ನ ಸೇರದೆ ಮುಳುಗಿವೆ
ಅಂಗೈಯೊಡ್ಡಿ ಹಿಡಿದ ಮಳೆಹನಿಗಳಲ್ಲಿ ಬಾಲ್ಯದ ನೆನಪಿದೆ
ಹೊತ್ತಗೆಯಲ್ಲಿ ಬರೆದದ್ದೆಷ್ಟು ಚಿತ್ರ ಬಿಡಿಸಿ ಹರಿದದ್ದೆಷ್ಟು
ಹಾಳೆಗಳ ನಡುವೆ ಬಚ್ಚಿಟ್ಟ ನವಿಲುಗರಿಯಲ್ಲಿ ಬಾಲ್ಯದ ನೆನಪಿದೆ
ಬಣ್ಣ ವರ್ಗ ಮರೆತು ಬೆಳೆದ ಸ್ನೇಹಬಂಧವಿನ್ನೂ ದೃಢವಾಗಿದೆ
ಜೊತೆಯಲ್ಲಿ ಹಂಚಿತಿಂದ ಬುತ್ತಿಯಲ್ಲಿ ಬಾಲ್ಯದ ನೆನಪಿದೆ
ಎಲೆಯ ಮೇಲೆ ಮುತ್ತಾಗಿ ಹೊಳೆವ ಇಬ್ಬನಿ ಎಂಥ ಅಚ್ಚರಿ
ಗುಡುಗು ಮಳೆಯಬ್ಬರಕೆ ನಡುಗಿದೆದೆಯಲ್ಲಿ ಬಾಲ್ಯದ ನೆನಪಿದೆ
ಪ್ರತಿಕ್ಷಣವೂ ಉಕ್ಕುವ ನೆನಪುಗಳೆಷ್ಟು ಸುಂದರ `ತನು'
ಮರೆಯಲಾಗದ ಉಜ್ವಲ ಚಿತ್ರಗಳಲ್ಲಿ ಬಾಲ್ಯದ ನೆನಪಿದೆ
ಚೇತನಾ ಕುಂಬಳೆ