HEALTH TIPS

No title

                   ಮಳೆಗಾಲ ರೋಗಗಳ ವಿರುದ್ಧ  ಕಾಯರ್ಾಚರಣೆ
    ಕುಂಬಳೆ/ಮಂಜೇಶ್ವರ: ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ  ಮಳೆಗಾಲದ ರೋಗಗಳ ವಿರುದ್ಧ  ಪ್ರತಿರೋಧಕ ಕಾಯರ್ಾಚರಣೆಗಳನ್ನು  ಚುರುಕುಗೊಳಿಸಲಾಗಿದೆ. ಸೊಳ್ಳೆ ಉತ್ಪತ್ತಿ  ಕೇಂದ್ರಗಳ ನಾಶ, ಸ್ವಚ್ಛತೆ, ತಿಳುವಳಿಕೆ ಕಾರ್ಯಕ್ರಮಗಳನ್ನು  ಜಿಲ್ಲೆಯ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತಿದೆ.
    ಕುಂಬಳೆ ಗ್ರಾಮ ಪಂಚಾಯತಿಯಲ್ಲಿ  ಸೊಳ್ಳೆ ಉತ್ಪತ್ತಿ  ಕೇಂದ್ರಗಳ ನಾಶ ಪ್ರಕ್ರಿಯೆಗಳಿಗೆ ಆರೋಗ್ಯ ಕಾರ್ಯಕರ್ತರು ನೇತೃತ್ವ ನೀಡಿದ್ದಾರೆ. ಇಲ್ಲಿ  ನಾಲ್ವರ ವಿರುದ್ಧ  ಸಾರ್ವಜನಿಕ ಆರೋಗ್ಯ ಕಾನೂನು ಪ್ರಕಾರ ನೋಟೀಸ್ ಜಾರಿ ಮಾಡಲಾಗಿದೆ. ಕೊಯಿಪ್ಪಾಡಿಯಲ್ಲಿ  1300ರಷ್ಟು  ವಿದ್ಯಾಥರ್ಿಗಳಿಗೆ ಸೊಳ್ಳೆ ಉತ್ಪತ್ತಿ  ಕೇಂದ್ರಗಳ ನಾಶದ ಪ್ರಾಧಾನ್ಯತೆ ಕುರಿತು ಹಾಗೂ ಮಳೆಗಾಲದ ಮಾರಕ ಸಾಂಕ್ರಾಮಿಕ ರೋಗಗಳ ಬಗ್ಗೆ  ಸಮಗ್ರ ತಿಳುವಳಿಕೆ ಮೂಡಿಸಲಾಯಿತು.
     ಮಂಗಲ್ಪಾಡಿ ಪಂಚಾಯತ್ನ 15, 21, 9, 11, 8ನೇ ವಾಡರ್್ಗಳಲ್ಲಿ  ಆಶಾ ಮತ್ತು  ಅಂಗನವಾಡಿ ಕಾರ್ಯಕತರ್ೆಯರನ್ನು  ಒಳಪಡಿಸಿ ತಯಾರಿಸಿದ ಸ್ಕ್ವಾಡ್ಗಳು ಮನೆಗಳನ್ನು  ಸಂದಶರ್ಿಸಿ ತಿಳುವಳಿಕೆ ಮೂಡಿಸುತ್ತಿವೆ. ಅಲ್ಲದೆ ಸೊಳ್ಳೆ ಉತ್ಪತ್ತಿ  ಕೇಂದ್ರಗಳಲ್ಲಿ  ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
    ಸೊಳ್ಳೆ ಉತ್ಪತ್ತಿ  ಕೇಂದ್ರಗಳ ನಾಶ ಕ್ರಮ : ಜಿಲ್ಲೆಯ ಮಂಜೇಶ್ವರ, ಕಾಸರಗೋಡು, ಹೊಸದುರ್ಗ ಮತ್ತು  ವೆಳ್ಳರಿಕುಂಡು ತಾಲೂಕುಗಳ ಗುರುತಿಸಲಾದ ಸ್ಥಳಗಳಲ್ಲಿ  ಮಳೆಗಾಲದ ರೋಗಗಳ ವಿರುದ್ಧ  ಕಾಯರ್ಾಚರಣೆಯನ್ನು  ನಿರಂತರವಾಗಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ  ಆರೋಗ್ಯ ಇಲಾಖೆಯು ಸಮರ್ಪಕ ಮಾರ್ಗದರ್ಶನ ನೀಡುತ್ತಿದೆ. ಜಿಲ್ಲಾ  ವೈದ್ಯಾಧಿಕಾರಿಗಳು ನಿದರ್ೇಶನಗಳನ್ನು  ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಮತ್ತು  ನಗರ ಪ್ರದೇಶಗಳ ಮಾಲಿನ್ಯ ಕೇಂದ್ರಗಳನ್ನು  ಗುರುತಿಸಿ ಸೊಳ್ಳೆ ನಾಶ, ಫಾಗಿಂಗ್ ಸಹಿತ ಹಲವಾರು ಕಾರ್ಯ ಚಟುವಟಿಕೆಗಳನ್ನು  ಹಮ್ಮಿಕೊಳ್ಳಲಾಗುತ್ತಿದೆ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries