HEALTH TIPS

No title

              ಯಕ್ಷಗಾನ ಪೋಷಣೆಯಲ್ಲಿ ಎಡನೀರು ಮಠದ ಪಾತ್ರ ಮಹತ್ತರ-ವಿದ್ವಾನ್.ಉಮಾಕಾಂತ್ ಭಟ್     
    ಬದಿಯಡ್ಕ: ಗಂಡು ಕಲೆಯಾದ ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಉಚ್ಚ್ರಾಯತೆ ಇಂದು ವ್ಯಾಪಕವಾಗಿ ವಿಸ್ತರಿಸಲ್ಪಡುತ್ತಿದೆ. ಪರಂಪರೆಗೆ ಅಪಚಾರವಾಗದಂತೆ ಕಾಲಧರ್ಮಕ್ಕನುಸರಿಸಿ ಪ್ರದರ್ಶನ ಕಾಣುತ್ತಿರುವ ಯಕ್ಷಗಾನ ಕಲೆಯ ಪೋಷಣೆ, ಬೆಳವಣಿಗೆಗಳಿಗೆ ಎಡನೀರು ಮಠ ಮತ್ತು ಟಿ.ಶಾಮ ಭಟ್ ರಂತಹ ಮಹನೀಯರ ಕೊಡುಗೆ ಸ್ತುತ್ಯರ್ಹವಾದುದು ಎಂದು ಮೇಲುಕೋಟೆ ಸಂಸ್ಕೃತ ವಿದ್ಯಾಲಯದ ಪ್ರಾಂಶುಪಾಲ, ಹಿರಿಯ ಅರ್ಥಧಾರಿ ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ ಅಭಿಪ್ರಾಯ ವ್ಯಕ್ತಪಡಿಸಿದರು.
   ಶ್ರೀಮದ್ ಎಡನೀರು ಮಠದ ಶ್ರೀಕೃಷ್ಣ ಸೌಧದಲ್ಲಿ ಇತ್ತೀಚೆಗೆ ನಡೆದ ಎಡನೀರು ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಪ್ರಸ್ತುತ ವರ್ಷದ ತಿರುಗಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
     ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು, ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಸಹೃದಯ ಪ್ರೇಕ್ಷಕರು ಎಲ್ಲೆಡೆ ಇದ್ದಾರೆ. ಆದರೆ ಪರಂಪರೆಯ, ಉತ್ತಮ ಪ್ರದರ್ಶನಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ತೃಪ್ತಿ ನೀಡುವಲ್ಲಿ ಕಲಾಮಂಡಳಿಗಳು, ಕಲಾವಿದರು ಇನ್ನಷ್ಟು ಮುತುವಜರ್ಿಯಿಂದ ರಂಗ ಪ್ರದರ್ಶನ ನೀಡಬೇಕು ಎಂದು ತಿಳಿಸಿದರು. ಹಿರಿಯ ಅನುಭವಿ ಕಲಾವಿದರನ್ನು ಗೌರವಿಸುವುದು ಯುವ ಕಲಾವಿದರಿಗೆ ಸ್ಪೂತರ್ಿಯೊದಗಿಸುವುದರೊಂದಿಗೆ ಕಲಾಸೇವೆಗೆ ನೀಡಿದ ಕೊಡುಗೆಗಳನ್ನು ಪುರಸ್ಕರಿಸಿ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಲಿ ಎಂದು ಶ್ರೀಗಳು ತಿಳಿಸಿದರು.
     ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶಂಭಯ್ಯ ಕಂಜರ್ಪಣೆ, ಗುಂಡಿಮಜಲು ಗೋಪಾಲಕೃಷ್ಣ ಭಟ್, ದಿವಾಣ ಶಿವಶಂಕರ ಭಟ್, ಮಾಧವ ಪಾಟಾಳಿ ನೀಚರ್ಾಲು ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೈರಂಗಳ ನಾರಾಯಣ ಭಟ್ ಸ್ವಾಗತಿಸಿ, ಪಿ.ರಾಜೇಂದ್ರ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಎಡನೀರು ಮೇಳದವರಿಂದ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಸೇವಾ ಪ್ರದರ್ಶನ ನಡೆಯುವುದರೊಂದಿಗೆ ಮೇಳದ ಹಾಲಿ ವರ್ಷದ ಪ್ರದರ್ಶನ ಸಮಾರೋಪಗೊಂಡಿತು.

     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries