HEALTH TIPS

No title

                     ನಿತ್ಯ ಯೋಗದ ಬಳಕೆ ಪರಿಣಾಮಕಾರಿ-ಜಯಪ್ರಕಾಶ ಪಜಿಲ
      ಬದಿಯಡ್ಕ: ಬದುಕಿನ ಏರುಪೇರಿನಲ್ಲಿ ಉಂಟಾಗುವ ಭಾವೋದ್ವೇಗಗಳನ್ನು ನಿಯಂತ್ರಿಸಲು ಯೋಗಾಭ್ಯಾಸವು ಹೆಚ್ಚು ಪರಿಣಾಮಕಾರಿ ಎಂದು ಶ್ರೀಭಾರತೀ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ ಪಜಿಲ ಅಭಿಪ್ರಾಯಪಟ್ಟರು.
ಅವರು ಯೋಗದಿನಾಚರಣೆಯಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
   ಜೀವನದ ನಿದರ್ಿಷ್ಟವಾದ ಗುರಿಯನ್ನು ಸಾಧಿಸಲು ನಿರಂತರವಾದ ಯೋಗ ವ್ಯಾಯಾಮದಿಂದ ಮನಸ್ಸು ಉಲ್ಲಸಿತಗೊಂಡು ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ತರಲು ಆತ್ಮಧೈರ್ಯವು ಉಂಟಾಗುತ್ತದೆ. ಕೇವಲ ಇವತ್ತು ಒಂದೇ ದಿವಸಕ್ಕೆ ಸೀಮಿತಗೊಳಿಸದೆ ದಿನನಿತ್ಯ 10 ನಿಮಿಷಗಳನ್ನು ಇದಕ್ಕಾಗಿ ಮೀಸಲಿಡಿ ಎಂದರು.
   ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಮಾತನಾಡಿ, 5 ನಿಮಿಷಗಳ ಕಾಲ ನಿತ್ಯ ಪ್ರಾರ್ಥನೆಯಲ್ಲಿ ಧ್ಯಾನ ಓಂಕಾರಗಳನ್ನು ತೊಡಗಿಸಿಕೊಂಡಿರುವುದರಿಂದ ಇಲ್ಲಿಯ ಮಕ್ಕಳು ಹೆಚ್ಚು ಕ್ರೀಯಾಶೀಲರಾಗಿದ್ದಾರೆ. ಸಾಯಂಕಾಲ 4 ಗಂಟೆ ಕಳೆದರೂ ಮಕ್ಕಳ ಮುಖದಲ್ಲಿ ಉಲ್ಲಾಸವಿರುವುದನ್ನು ಕಂಡಿರುತ್ತೇನೆ. ಇದಕ್ಕೆಲ್ಲ ಕಾರಣ ಪತಂಜಲಿ ಮಹಾಮುನಿಗಳು ಭಾರತೀಯರಾದ ನಮಗೆ ನೀಡಿದ ಕೊಡುಗೆಯಾಗಿದೆ. ಭಾರತೀಯರಾದ ನಾವು ಯೋಗವನ್ನು ವಿಶ್ವಕ್ಕೆ ಪರಿಚಯಿಸಿ ವಿಶ್ವಯೋಗದಿನವನ್ನಾಗಿ ಅಂಗೀಕರಿಸಿದ ದಿನವಾಗಿದೆ ಈದಿನ ಎಂದರು.
ವಿದ್ಯಾಥರ್ಿಗಳು ಅಷ್ಟಾಂಗ ಯೋಗಗಳ ಬಗ್ಗೆ ಲೇಖನವನ್ನು ಮಂಡಿಸಿದರು. ಸಾಮೂಹಿಕವಾಗಿ ವಿವಿಧ ಆಸನಗಳನ್ನು ಪ್ರದಶರ್ಿಸಲಾಯಿತು.
ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸಂಯೋಜಿಸಿದರು. ಅಧ್ಯಾಪಿಕೆ ಮಮತ ಸಾವಿತ್ರಿ, ಸುಶ್ಮ ನೂಜಿ ಹಾಗೂ ಅಧ್ಯಾಪಕ ವೃಂದವು ನೇತೃತ್ವವನ್ನು ನೀಡಿತು. 10ನೇ ತರಗತಿಯ ನಿತೀಶ್ ಹಾಗೂ ಶಮಾತ್ಮಿಕ ಕಾರ್ಯಕ್ರಮ ನಿರೂಪಿಸಿದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries