ಸ್ವರ್ಗ ಶಾಲಾವಿದ್ಯಾಥರ್ಿಯಿಂದ ನೀರು ಶುದ್ಧೀಕರಣ ಉಪಕರಣ
ಪೆರ್ಲ: ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್, ಕಂಪ್ಯೂಟರು, ವಿಡಿಯೋ ಗೇಮ್ ಬೇಕೆಂದು ಹಠ ಹಿಡಿಯುವ ಮಕ್ಕಳೇ ಹೆಚ್ಚು. ಸ್ವರ್ಗದಂತಹ ಗ್ರಾಮೀಣ ಪ್ರದೇಶದ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಕಲಿಯುತ್ತಿರುವ ಯಜ್ಞೇಶ್ ರೈ ತುಸು ಭಿನ್ನ ಚಿಂತನೆಯ ಹುಡುಗನಾಗಿದ್ದು ತನ್ನ ತರಗತಿಯ ಕುಡಿ ನೀರಿನ ವ್ಯವಸ್ಥೆಗಾಗಿ ಸ್ವತಃ ಜಲ ಶುದ್ಧೀಕರಣ ಉಪಕರಣವನ್ನು ತಯಾರಿಸಿದ್ದಾನೆ.
ಕಸದಿಂದ ರಸ ಎಂಬಂತೆ ಉಪಯೋಗ ಶೂನ್ಯವಾದ ಎರಡು ಚಾಕಲೇಟ್ ಡಬ್ಬ, ಒಂದು ಪೈಪ್ ಮತ್ತು ಒಂದು ಸೋಸುವ ಸಾಧನವನ್ನು ಬಳಸಿ ಇದನ್ನು ತಯಾರಿಸಲಾಗಿದೆ.
ಈತನ ಈ ಸಾಧನೆಯನ್ನು ಅಧ್ಯಾಪಕರು ಮತ್ತು ಸಹಪಾಠಿಗಳು ಶ್ಲಾಘಿಸಿದ್ದಾರೆ. ಕಲಿಕೆಯಲ್ಲೂ ಸದಾ ಮುಂದಿರುವ ಯಜ್ಞೇಶನಿಗೆ ಸದಾ ಹೊಸತೇನಾದರು ಸಾಧನೆ ಮಾಡ ಬೇಕೆಂಬ ಹಂಬಲದ ತುಡಿತ ಇರುವುದು ಭರವಸೆ ಮೂಡಿಸಿದೆ.