ವಿವಿಗಳಲ್ಲಿ ಪ್ರತಿವರ್ಷ ಘಟಿಕೋತ್ಸವ ಕಡ್ಡಾಯ , ಹೆಚ್ ಆರ್ ಡಿ ಸಚಿವಾಲಯ ಆದೇಶ
ನವದೆಹಲಿ: ಕೆಲ ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವ ಕಾರ್ಯಕ್ರಮ ಸ್ಥಗಿತಗೊಂಡಿರುವುದನ್ನು ಮನಗಂಡ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ , ಎಲ್ಲಾ ವಿಶ್ವವಿದ್ಯಾಲಯಗಳು ಪ್ರತಿವರ್ಷ ಕಡ್ಡಾಯವಾಗಿ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸುವಂತೆ ಪತ್ರ ಬರೆದಿದೆ.
ವಾಷರ್ಿಕ ಪದವಿ ಪುರಸ್ಕಾರ ಕಾರ್ಯಕ್ರಮ ಪದವಿ ವಿದ್ಯಾಥರ್ಿಗಳಿಗೆ ಮಹತ್ವದಾಗಿರುವಂತೆ ತಮ್ಮ ಮಕ್ಕಳ ಬಗ್ಗೆ ಪೋಷಕರು ಹೆಮ್ಮೆಪಡುವಂತಹ ಸಂದರ್ಭವಾಗಿದೆ. ಆದ್ದರಿಂದ ಪ್ರತಿವರ್ಷವೂ ಘಟಿಕೋತ್ಸವ ಸಮಾರಂಭವನ್ನು ಕಡ್ಡಾಯವಾಗಿ ಏರ್ಪಡಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹಣಕಾಸು ಅಥವಾ ಸಮಯದ ಅಭಾವದಿಂದಾಗಿ ಕೆಲ ವಿಶ್ವವಿದ್ಯಾಲಯಗಳನ್ನು ಪ್ರತಿವರ್ಷ ಘಟಿಕೋತ್ಸವ ಆಯೋಜಿಸದಿರುವುದು ಕಂಡುಬಂದಿದೆ. ಆದಾಗ್ಯೂ, ಅವರು ಕೂಡಾ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷದ ಘಟಿಕೋತ್ಸವ ಕಾರ್ಯಕ್ರಮದ ಮಾಹಿತಿಯನ್ನು ರವಾನಿಸುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸಚಿವಾಲಯ ತಿಳಿಸಿದೆ. ಇದೇ ಉದ್ದೇಶದೊಂದಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿವಿಯ ಘಟಿಕೋತ್ಸವನ್ನು ಐದು ವರ್ಷಗಳ ನಂತರ ಆಯೋಜಿಸಲಾಗಿತ್ತು.
ತ್ರಿಪುರಾದ ಕೇಂದ್ರೀಯ ವಿವಿ ಘಟಿಕೋತ್ಸವವನ್ನು ನಾಲ್ಕು ವರ್ಷಗಳ ನಂತರ ಈ ಬಾರಿ ಆಯೋಜಿಸಲಾಗಿತ್ತು. 46 ವರ್ಷದ ಬಳಿಕ ಜವಹರ್ ಲಾಲ್ ನೆಹರೂ ವಿವಿಯ ಎರಡನೇ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು.