HEALTH TIPS

No title

                     ಜನಾಂದೋಲನ ಯಾತ್ರೆ ಸಮಾರೋಪ
    ಬದಿಯಡ್ಕ : ರಾಜ್ಯದಲ್ಲೇ ಅತೀ ಹಿಂದುಳಿದ ಗ್ರಾಮಪಂಚಾಯತ್ಗಳಲ್ಲೊಂದಾದ ಕುಂಬ್ಡಾಜೆ ಗ್ರಾಮಪಂಚಾಯತ್ಗೆ ಸರಕಾರದಿಂದ ಲಭಿಸಿದ ಲಕ್ಷಗಟ್ಟಲೆ ರೂಪಾಯಿಗಳನ್ನು ಖಚರ್ುಮಾಡದೆ ನಷ್ಟಗೊಳಿಸಿದ ಯುಡಿಎಫ್ ಆಡಳಿತಕ್ಕೆ ಜನಸಾಮಾನ್ಯರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ರವರು ಲೇವಡಿ ಮಾಡಿದರು.
ಏತಡ್ಕದಲ್ಲಿ ಭಾನುವಾರ ಸಂಜೆ, ಕುಂಬ್ಡಾಜೆ ಗ್ರಾಮ ಪಂಚಾಯತ್ನ ಯುಡಿಎಫ್ ಆಡಳಿತಕ್ಕೆದುರಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಬಿ.ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ಹಮ್ಮಿಕೊಂಡ ಜನಾಂದೋಲನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
   ಸಾರ್ವಜನಿಕ ಸಮಾರಂಭಗಳಲ್ಲಿ ಗಂಟೆಗಟ್ಟಲೆ ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ, ಬಡಜನರ ಬಗ್ಗೆ ಮಾತನಾಡುವ ಮುಸ್ಲಿಂಲೀಗ್ ಹಾಗೂ ಕಾಂಗ್ರೆಸ್ ಪಕ್ಷದ ನೇತಾರರು ಕುಂಬ್ಡಾಜೆಯಲ್ಲಿ ಲಕ್ಷಗಟ್ಟಲೆ ಬಂದಂತಹ ಹಣ ನಷ್ಟಹೊಂದಿದರೂ ಮೌನವಹಿಸಿದ್ದಾರೆ. ಹಿಂದುಳಿದ ಗ್ರಾಮಪಂಚಾಯತ್ನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಈ ಆಡಳಿತ ಸಮಿತಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಶಿವಕೃಷ್ಣ ಭಟ್, ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಯುವಮೋಚರ್ಾ ರಾಜ್ಯ ಸಮಿತಿ ಸದಸ್ಯ ಸುನಿಲ್ ಪಿ.ಆರ್., ಬಿಜೆಪಿ ಮಂಡಲ ಪ್ರಧಾನ ಕಾರ್ಯದಶರ್ಿ ಹರೀಶ್ ನಾರಂಪಾಡಿ, ಎಸ್.ಸಿ.ಎಸ್.ಟಿ. ಮೋಚರ್ಾ ಜಿಲ್ಲಾ ಉಪಾಧ್ಯಕ್ಷ ಸುಂದರ ಮವ್ವಾರು, ಯುವಮೋಚರ್ಾ ಜಿಲ್ಲಾ ಕಾರ್ಯದಶರ್ಿಗಳಾದ ಮಹೇಶ್ ಕೆ.ವಿ., ಸುಮಿತ್ರಾಜ್ ಪೆರ್ಲ, ಮಂಡಲ ಪ್ರಧಾನ ಕಾರ್ಯದಶರ್ಿ ಹರೀಶ್ ಗೋಸಾಡ, ಬಿಜೆಪಿ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದಶರ್ಿ ರವೀಂದ್ರ ರೈ ಗೋಸಾಡ, ನೇತಾರರಾದ ಯಶೋಧ ಎನ್., ಶಶಿಧರ ತೆಕ್ಕೆಮೂಲೆ, ಕೊರಗಪ್ಪ ಬೆಳ್ಳಿಗೆ, ಸಂತೋಷ್ ರೈ ಪುತ್ರಕಳ, ರಾಜೇಂದ್ರ ಮವ್ವಾರು, ಹರಿಪ್ರಸಾದ್ ರೈ, ಶೈಲಜಾ ಭಟ್, ಶಾಂತಾ ಎಸ್. ಭಟ್, ಹರೀಶ್ ಕೊರತ್ತಿಂಗಲ್ಲು, ಸದಾಶಿವ ರೈ ಗೋಸಾಡ, ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ರೈ ಸ್ವಾಗತಿಸಿ, ಹರಿಪ್ರಸಾದ್ ರೈ ವಂದಿಸಿದರು.
ಯಾತ್ರೆಯು ಬೆಳಗ್ಗೆ ಗಾಡಿಗುಡ್ಡೆಯಿಂದ ಆರಂಭಗೊಂಡು, ಬೆಳ್ಳಿಗೆ, ಮುಕ್ಕೂರು, ಬೆಳಿಂಜ, ಕುಂಬ್ಡಾಜೆ, ಸಿ.ಎಚ್.ನಗರ, ಕುರುಮುಜ್ಜಿಕಟ್ಟೆ, ಮಾರ್ಪನಡ್ಕ, ಅಗಲ್ಪಾಡಿ, ಉಬ್ರಂಗಳ, ಕರುವಲ್ತಡ್ಕ, ಮುನಿಯೂರು ಮೊದಲಾದೆಡೆಗಳಲ್ಲಿ ಸಭೆಯನ್ನು ನಡೆಸಿ ಏತಡ್ಕದಲ್ಲಿ ಸಮಾರೋಪಗೊಂಡಿತು.
 


                  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries