ಪೊಲೀಸರಿಗೆ ಅತ್ಯಾಧುನಿಕ ವಯರ್ಲೆಸ್ ಸೆಟ್
ಕಾಸರಗೋಡು: ಕೇರಳ ಪೊಲೀಸರು ಓವರ್, ಓವರ್ ಎಂದು ಹೇಳುವ ಹಳೆಯ ವಯರ್ಲೆಸ್ ಸೆಟ್ಗಳಿಗೆ ಸಂಪೂರ್ಣ ಗುಡ್ಬೈ ಹೇಳಿ, ಹೊಸ ಅತ್ಯಾಧುನಿಕ ಮಾದರಿಯ ಹಾಗೂ ನೂತನ ಶೈಲಿಯಲ್ಲಿರುವ ವಯರ್ಲೆಸ್ ಸೆಟ್ಗಳನ್ನು ಒದಗಿಸಲು ಮಹತ್ವದ ನಿಧರ್ಾರ ಕೈಗೊಳ್ಳಲಾಗಿದೆ. ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಆಧುನಿಕ ವ್ಯವಸ್ಥೆಯೊಂದು ಕಾರ್ಯಗತಗೊಳ್ಳಲಿದೆ.
ಅದರಂತೆ ಕೇಂದ್ರ ಸರಕಾರದ ಅಧೀನದಲ್ಲಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪೆನಿ ಡಿಜಿಟಲ್ ಮೊಬೈಲ್ ರೇಡಿಯೋ ಕಮ್ಯೂನಿಕೇಶನ್ (ಡಿಎಂಆರ್ ಕಮ್ಯೂನಿಕೇಶನ್) ಈ ನೂತನ ಸೆಟ್ನ್ನು ಪರಿಚಯಿಸಲಿದೆ.
ಈ ಯೋಜನೆಯ ಪ್ರಕಾರ ಮೊದಲ ಬಾರಿಗೆ ರಾಜ್ಯದ ತೃಶ್ಶೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಡಿಎಂಆರ್ ಸೆಟ್ಗಳನ್ನು ಉಪಯೋಗಿಸಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ತೃಶ್ಶೂರು, ಪಾಲ್ಘಾಟ್, ಇಡುಕ್ಕಿ ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲು ತೀಮರ್ಾನಿಸಲಾಗಿದೆ. ಬಳಿಕ ಸದ್ಯದಲ್ಲೇ ಮುಂದಿನ ಹಂತಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಪೊಲೀಸರಲ್ಲಿ ಇರುವ ವಯರ್ಲೆಸ್ ಸೆಟ್ಗಳಿಗೆ ಹೋಲಿಸಿದರೆ ಹೊಸ ಡಿಎಂಆರ್ ಕಮ್ಯೂನಿಕೇಶನ್ ಸೆಟ್ಗಳು ತೀರಾ ಭಿನ್ನವಾಗಿವೆ. ಡಿಎಂಆರ್ ಮೂಲಕ ನೀಡುವ ಸಂದೇಶಗಳು, ಸಂಭಾಷಣೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ ಎಂಬುದನ್ನು ಖಾತರಿಪಡಿಸಲಾಗಿದೆ. ಅಲ್ಲದೆ ಸಂಭಾಷಣೆಯು ಉತ್ತಮ ಮೊಬೈಲ್ ಸೆಟ್ಗಳ ಮುಖಾಂತರ ಮಾತನಾಡುವ ರೀತಿಯಲ್ಲಿ ಸ್ಪಷ್ಟತೆಯನ್ನು ಹೊಂದಿದೆ. ಇದರಿಂದಾಗಿ ಒಂದು ಠಾಣೆಯ ಪೊಲೀಸರಿಗೆ ಯಾವುದೇ ವಿಚಾರವನ್ನು ಸ್ಪಷ್ಟವಾಗಿ ಇನ್ನೊಂದು ಠಾಣೆಯ ಪೊಲೀಸರಿಗೆ ತಲುಪಿಸಲು ಸಾಧ್ಯವಾಗಲಿದೆ.
ಜಿಪಿಎಸ್ ಮುಖೇನ ಎಲ್ಲಿಂದ ವಯರ್ಲೆಸ್ ಮೂಲಕ ಮಾತನಾಡಲಾಗುತ್ತಿದೆ ಎಂಬುದರ ಕುರಿತು ನಿಖರವಾಗಿ ತಿಳಿಯಲು ಕೂಡ ಸಾಧ್ಯವಾಗಲಿದೆ. ಪೊಲೀಸ್ ವಾಹನಗಳಲ್ಲಿ ನಡೆಯುವ ಸಂಭಾಷಣೆಗಳನ್ನು ಡಿಎಂಆರ್ ಸೆಟ್ಗಳ ಮೂಲಕ ರಹಸ್ಯವಾಗಿ ಗಮನಿಸುವಂತೆ ವಿಶೇಷ ವ್ಯವಸ್ಥೆ ಸಹ ಮಾಡಲಾಗಿದೆ.
ಇದೀಗ ಸಾರಿಗೆ ಹಾಗೂ ಇನ್ನಿತರ ವಿಭಾಗಗಳಲ್ಲಿ ಪ್ರತ್ಯೇಕ ಫ್ರಿಕ್ವೆನ್ಸಿ ಮೂಲಕ ವಯರ್ಲೆಸ್ ಸೆಟ್ಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಸುಮಾರು ಆರು ಕೋಟಿ ರೂಪಾಯಿ ಮೊತ್ತವನ್ನು ಪ್ರತೀ ವರ್ಷ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪಾವತಿಸುತ್ತಿದೆ.
ಇದೇ ವೇಳೆ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರುವುದರೊಂದಿಗೆ ಕಡಿಮೆ ವೆಚ್ಚದಲ್ಲಿ ಪರಸ್ಪರ ವಿನಿಮಯ ನಡೆಸಬಹುದು. ಪ್ರತ್ಯೇಕ ದಜರ್ೆಯಲ್ಲಿರುವ ಪೊಲೀಸ್ ಅಕಾರಿಗಳಿಗೆ ಪ್ರತ್ಯೇಕವಾಗಿ ಮಾತನಾಡುವ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗಿದೆ. ನೂತನ ಡಿಎಂಆರ್ಗಳ ಮುಖೇನ ಹೊರ ಜಿಲ್ಲೆಗಳಲ್ಲಿದ್ದರೂ ಪೊಲೀಸ್ ಠಾಣೆಗಳಲ್ಲಿರುವ ಪೊಲೀಸರನ್ನು ಸಂಪಕರ್ಿಸಲು ಸಾಧ್ಯವಾಗಲಿದೆ.
ಪ್ರಸ್ತುತ ಇರುವ ವಯರ್ಲೆಸ್ ಸೆಟ್ಗಳು ಕೇವಲ ಜಿಲ್ಲೆಯೊಳಗೆ ಮಾತ್ರ ಕಾಯರ್ಾಚರಿಸುತ್ತಿವೆ. ಡಿಎಂಆರ್ ಕಮ್ಯೂನಿಕೇಶನ್ನಲ್ಲಿ ಫೋಟೋ ತೆಗೆಯಲು, ಎಸ್ಎಂಎಸ್ ಕಳುಹಿಸಲು, ಗ್ರೂಪ್ ಕಾಲಿಂಗ್ ವ್ಯವಸ್ಥೆ ಕೂಡ ಅಳವಡಿಸಲಾಗಿದೆ. ಕೇರಳ ಪೊಲೀಸ್ ಕ್ರೈಂ ಮ್ಯಾಪಿಂಗ್ ವಿಧಾನವನ್ನು ಈ ನೂತನ ವ್ಯವಸ್ಥೆಯಲ್ಲಿ ಅಳವಡಿಲಾಗಿದೆ. ಈ ಹೊಸ ಸೆಟ್ಗಳ ಮೂಲಕ ಅತೀ ಕ್ಷಿಪ್ರವಾಗಿ ಕಾಯರ್ಾಚರಣೆ ನಡೆಸಲು ಸಾಧ್ಯವಾಗಲಿದೆ. ಡಿಎಂಆರ್ ಕಮ್ಯೂನಿಕೇಶನ್ ಅತೀ ನೂತನ ಶ್ರೇಣಿಯ ಉಪಕರಣಗಳನ್ನು ಬಳಸಿಕೊಂಡು ಈ ಸೆಟ್ಗಳನ್ನು ತಯಾರಿಸಿದೆ.
ಅನೇಕ ಸಮಸ್ಯೆಗಳಿಗೆ ಪರಿಹಾರ : ಮೊದಲ ಹಂತದಲ್ಲಿ ತೃಶ್ಶೂರು, ಪಾಲ್ಘಾಟ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲು ನಿಶ್ಚಯಿಸಲಾಗಿದೆ. ಪೊಲೀಸ್ ಕ್ರೈಂ ಮ್ಯಾಪಿಂಗ್ ವಿಧಾನವನ್ನು ಈ ಹೊಸ ವ್ಯವಸ್ಥೆಯು ಹೊಂದಿದೆ. ಡಿಎಂಆರ್ ಸೆಟ್ಗಳ ಮೂಲಕ ನೀಡುವ ಎಲ್ಲಾ ಸಂದೇಶಗಳು ಸುರಕ್ಷಿತವಾಗಿರಲಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಯೋಜನೆಯನ್ನು ಮುಂದಿನ ಹಂತದಲ್ಲಿ ಜಾರಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಹೊಸ ವಯರ್ಲೆಸ್ ಸೆಟ್ಗಳು ಕಾಸರಗೋಡಿನ ಪೊಲೀಸರ ಕೈಸೇರುವುದರೊಂದಿಗೆ ಇಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ಮತ್ತೊಂದೆಡೆ ಸಮಾಜಬಾಹಿರ ಕೃತ್ಯಗಳನ್ನು ಎಸಗುವವರನ್ನು ಕೂಡಲೇ ಸೆರೆಹಿಡಿಯಲು ನೂತನ ವಯರ್ಲೆಸ್ ಸೆಟ್ಗಳ ಮೂಲಕ ಸಾಧ್ಯವಾಗಲಿದೆ.