ಮೂಟೆಗಟ್ಟಲೆ ಕೋಳಿ ತ್ಯಾಜ್ಯ ಎಸೆದು ಪೌರುಷ ಮೆರೆದ ದುಷ್ಕಮರ್ಿಗಳು
ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ 1ನೇ ವಾಡರ್್ ಈಂದುಮೂಲೆಯ ಚಿಪ್ಲುಕೋಟೆಯಲ್ಲಿ ರಾತ್ರಿ ಮರೆಯಲ್ಲಿ ದುಷ್ಕಮರ್ಿಗಳು
ಮೂಟೆಗಟ್ಟಲೆ ಕೋಳಿ ತ್ಯಾಜ್ಯ ಎಸೆದು ಅಟ್ಟಹಾಸ ಮೆರೆದಿದ್ದಾರೆ.
ಚಿಪ್ಲುಕೋಟೆ ಬಳಿಯಿರುವ ರಾಜೀವ ಗಾಂಧಿ ಕುಡಿ ನೀರು ಯೋಜನೆ ಟ್ಯಾಂಕ್ ಹಾಗೂ ಪಂಪ್ ಹೌಸ್ ಸಮೀಪ ಶನಿವಾರ ಬೆಳಗ್ಗೆ ಮೂಟೆಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಕಂಡು ಬಂದಿದ್ದು, ಸ್ಥಳೀಯರು ಆದೂರು ಪೋಲೀಸ್ ಠಾಣೆಗೆ ದೂರು ನೀಡಿದ್ದು ಠಾಣಾಧಿಕಾರಿ ರಾಜೀವ್ ಕುಮಾರ್ ಹಾಗೂ ಪೊಲೀಸ್ ಸಿಬಂದಿಗಳು ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ತ್ಯಾಜ್ಯವು ಹಲವು ದಿನಗಳ ಮೊದಲಿನದ್ದಾಗಿದ್ದು ಆ ಕುರಿತು,ರಸ್ತೆ ಮೂಲಕ ಸಂಚರಿಸಿದ ವಾಹನಗಳ ವಿವರ ಸಂಗ್ರಹಿಸಿ, ಸಮೀಪ ಪ್ರದೇಶಗಳ ಸಿ ಸಿ ಟಿವಿ ಪರಿಶೋಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಂಜೆ ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್, ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ., ಅಭಿವೃದ್ಧಿ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ ರೈ, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ , ವಾಡರ್್ ಸದಸ್ಯೆ ವಿಶಾಲಾಕ್ಷಿ ಬಿ. ನೇತೃತ್ವದಲ್ಲಿ ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ನಡೆಸಲಾಯಿತು.
ಈ ಮೊದಲು ಮಾಹಿತಿ ಲಭಿಸಿದ ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಜೂ.ಆರೋಗ್ಯಾಧಿಕಾರಿ ಹೈದರ್ ಶರೀಫ್, ತಿರುಮಲೇಶ್ವರ ನಾಯ್ಕ್ ಸ್ಥಳ ಸಂದಶರ್ಿಸಿದ್ದಾರೆ.
ಅಲ್ಲಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬರುತ್ತಿದ್ದು ಇದರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತೀಮರ್ಾನಿಸಿದೆ.
ಸಮಾಜ ಘಾತುಕರ ಕೋಳಿ ತ್ಯಾಜ್ಯವನ್ನಿ ಎಲ್ಲೆಂದರಲ್ಲಿ ಎಸೆಯುವ ಕೃತ್ಯ ಇದೇ ಮೊದಲಾಗಿರದೆ ಕಳೆದ ಮೇ ತಿಂಗಳಲ್ಲಿ ಪೆರ್ಲ ಗಾಳಿಗೋಪುರ ಏತಡ್ಕ ರಸ್ತೆಯ ಪೆರಿಯಾಲ್ ಎಂಬಲ್ಲಿ ಮುಂಜಾವಿನ ವೇಳೆ ಕತ್ತಲೆ ಮರೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯವನ್ನು ರಸ್ತೆಗೆ ಎಸೆದು ಪೌರುಷ ಮೆರೆದಿದ್ದರು. ವಾಹನಗಳು ಅವುಗಳ ಮೇಲೆ ಸಾಗಿದ್ದು ಚೆಲ್ಲಾಪಿಲ್ಲಿಯಾಗಿ ಹರಡಿತ್ತು.ಘಟನೆ ಬಗ್ಗೆ ನಾಗರಿಕರು ದೂರು ನೀಡಿದುದರ ಅನ್ವಯ ಬದಿಯಡ್ಕ ಠಾಣಾ ಫ್ಲಯಿಂಗ್ ಸ್ಕ್ವಾಡ್ ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿದ್ದರು.ಬಳಿಕ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ನಡೆಸಲಾಗಿತ್ತು.
ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರು ಅದನ್ನು ಪಾಲಿಸುತ್ತಾ ಬರುವಾಗ ಅದೇ ರೀತಿ ಜಿಲ್ಲೆ, ಬ್ಲಾಕ್ , ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಜಾಗೃತಿ ಸೆಮಿನಾರ್ ಸಾಕ್ಷ್ಯ ಚಿತ್ರ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದು ಹಾಗೂ ಮಳೆಗಾಲ ಪೂರ್ವ ಶುಚಿತ್ವ ಕಾರ್ಯಕ್ರಮಗಳು ನಡೆಯುತ್ತಿರುವ ಈ ವೇಳೆ ಸಮಾಜ ಘಾತುಕರು ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತಿರುವುದು ನಾಗರಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿದೆ.
ಬೀಜಂತಡ್ಕ, ನಾರಂಪಾಡಿ, ಉಕ್ಕಿನಡ್ಕ, ಸ್ವರ್ಗ ಸಮೀಪದ ಗೋಳಿಕಟ್ಟೆ, ವಾಣೀನಗರ, ಪಾಣಾಜೆ-ಕಾಟುಕುಕ್ಕೆ ರಸ್ತೆ, ಧರ್ಮತ್ತಡ್ಕ, ನೀಚರ್ಾಲು, ಕಲ್ಲಕಟ್ಟ, ಮಾಯಿಪ್ಪಾಡಿ, ಉಪ್ಪಳ, ಹೊಸಂಗಡಿ ಮೊದಲಾಗಿ ಹಲವೆಡೆ ಎಸೆಯುತ್ತಿದ್ದು ದುನರ್ಾತ ಬೀರುತ್ತಿರುವುದಲ್ಲದೆ ಸಾಂಕ್ರಾಮಿಕ ರೋಗಗಳು ಹರಡುವುದಕ್ಕೂ ಕಾರಣ ವಾಗುತ್ತಿದೆ.
ಸಮೀಪ ಪ್ರದೇಶಗಳ ನಾನಾ ಭಾಗಗಳಿಂದ ಕೋಳಿ ಮಾಂಸ ಮಾರಾಟ ಕೇಂದ್ರಗಳಿಂದ ಕೋಳಿ ತ್ಯಾಜ್ಯ ಸಂಗ್ರಹಿಸಿ ಎಲ್ಲೆಂದರಲ್ಲಿ ಎಸೆಯುವ ಬೃಹತ್ ಜಾಲವೇ ಇದರ ಹಿಂದಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ.