HEALTH TIPS

No title

        ಆರ್ಬಿಐ ನಿಂದ 100 ರೂ. ಹೊಸ ನೋಟು ಶೀಘ್ರ; ವಿಶೇಷತೆಗಳೇನು ಗೊತ್ತೆ?
   ಮುಂಬೈ: ಮಹಾತ್ಮಾ ಗಾಂಧಿ ಸರಣಿಯ 100 ರೂ. ಹೊಸ ನೋಟನ್ನು ಬಿಡುಗಡೆ ಮಾಡಲು ಆರ್ಬಿಐ ಸಿದ್ದವಾಗಿದ್ದು, ಹೊಸ ವಿನ್ಯಾಸದೊಡನೆ ನೇರಳೆ ಬಣ್ಣದ ಹೊಸ ನೋಟು ಶೀಘ್ರವೇ ಚಲಾವಣೆಗೆ ಬರಲಿದೆ.
   ರಿಸವರ್್ ಬ್ಯಾಂಕ್ ಇದಾಗಲೇ ಹೊಸ ನೋಟಿನ ಮುದ್ರಣ ಪ್ರಾರಂಭಿಸಿದೆ.ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಇದು ಜನರ ಬಳಕೆಗೆ ದೊರೆಯಲಿದೆ.
ಮಧ್ಯ ಪ್ರದೇಶದ ದೇವಸ್ ಮುದ್ರಣಾಲಯದಲ್ಲಿ ಈ ನೋಟು ಮುದ್ರಣ ಕಾರ್ಯ ನಡೆದಿದ್ದು ಇದನ್ನು ಮುದ್ರಿಸಲು ಸ್ವದೇಶೀ ಇಂಕನ್ನೇ ಬಳಸಲಾಗುತ್ತಿದೆ ಎಂದು ಆರ್ಬಿಐ ಹೇಳಿದೆ.
ಹೊಸ 100 ರೂ. ನೋಟು ಚಲಾವಣೆಗೆ ಬಂದ ನಂತರವೂ ಹಳೆಯ ನೋಟನ್ನು ಹಿಂಪಡೆಯುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
   ಹೊಸ ನೋಟು ಈಗ ಬಳಕೆಯಲ್ಲಿರುವ ನೋಟಿಗಿಂತ ಗಾತ್ರದಲ್ಲಿ ಚಿಕ್ಕದಾಗಿರಲಿದೆ. ಇದು 10 ರು. ಹೊಸ ನೋಟಿಗಿಂತ ತುಸು ದೊಡ್ಡ ಗಾತ್ರ ಹೊಂದಿರಲಿದೆ.  ನೋಟಿನ ಹಿಂಭಾಗದಲ್ಲಿ  ಗುಜರಾತ್ನ ಪಠಾಣ್ ನಗರದಲ್ಲಿನ ಇತಿಹಾಸ ಪ್ರಸಿದ್ಧ 'ರಾಣಿ ಕಿ ವಾವ್'ನ ಚಿತ್ರವಿದೆ. ಇದೇ ವೇಳೆ ಹೊಸ ನೋಟಿನ ಗಾತ್ರಕ್ಕೆ ಸಮನಾಗಿ ದೇಶದ ಎಟಿಎಂಗಳನ್ನು ಬದಲಾವಣೆ ಮಾಡಬೇಕಾಗಿದೆ ಎಂದು ಮಾದ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries