HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಬೆಂಗಳೂರಿನಲ್ಲಿ ಮೇಳೈಸಿದ 'ಅಥರ್ಾಂತರಂಗ-10'
       ಬೆಂಗಳೂರು : "ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು" ಸಂಸ್ಥೆ ನಡೆಸಿಕೊಂಡು ಬರುತ್ತಿರುವ ತಾಳಮದ್ದಳೆ ಅಧ್ಯಯನ ಶಿಬಿರ ಅಥರ್ಾಂತರಂಗ ಸರಣಿ ಕಾರ್ಯಕ್ರಮದ ಹತ್ತನೇ ಕಾರ್ಯಕ್ರಮ ಬಲಮುರಿ ಮಹಾಗಣಪತಿ ದೇವಸ್ಥಾನ ದಾಸರಹಳ್ಳಿಯಲ್ಲಿ ಇತ್ತೀಚೆಗೆ ತುಂಬಿದ ಸಭಾಂಗಣದಲ್ಲಿ ಜರಗಿತು.
   ವಿದ್ವಾಂಸ ಎದುರ್ಕಳ ಈಶ್ವರ ಭಟ್ ಉದ್ಘಾಟಿಸಿ "ಸಿರಿಬಾಗಿಲು ಪ್ರತಿಷ್ಠಾನದ ಕಾರ್ಯ ಸ್ತುತ್ಯರ್ಹ, ತಾಳಮದ್ದಳೆ ಕ್ಷೇತ್ರದಲ್ಲಿ ಇದೊಂದು ನಿಜಕ್ಕೂ ದಾಖಲಾರ್ಹ ಕಾರ್ಯಕ್ರಮ, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅರ್ಥಗಾರಿಕೆ ಬಗೆಗಿನ  ಜ್ಞಾನವನ್ನು ವೃಧ್ದಿಸಿಕೊಳ್ಳಬೇಕು" ಎಂದರು. ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ಸಮರ್ಥ ನಿದರ್ೇಶನದಲ್ಲಿ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು.
   ಶಿಬಿರದ ಸಮಗ್ರ ಅಧ್ಯಕ್ಷತೆಯನ್ನು ವಿದ್ವಾಂಸರಾದ ಯಸ್.ಯನ್.ಪಂಜಾಜೆ ವಹಿಸಿ ಮಾತನಾಡಿ "ಪ್ರತಿಷ್ಠಾನದ ಕಾರ್ಯ ಪ್ರಶಂಸನೀಯ, ಅರ್ಥಗಾರಿಕೆಯ ಅಂತರಂಗವನ್ನು ಅಭ್ಯಸಿಸುವಲ್ಲಿ ಶಿಬಿರ ದಾರಿದೀಪವಾಗಿದೆ, ನಿಜಾರ್ಥದಲ್ಲಿ ಅಥರ್ಾಂತರಂಗ ಇಲ್ಲಿ ಅನಾವರಣ ಗೊಂಡಿದೆ" ಎಂದರು. ವಿಶೇಷ ಆಹ್ವಾನಿತರಾಗಿ ಮಜೂರು ನಾರಾಯಣ ಭಟ್, ಬೇಗಾರು ಶಿವಕುಮಾರ್, ಎ.ಪಿ.ಪಾಠಕ್, ರಾಜಗೋಪಾಲ ಕನ್ಯಾನ, ವಿದ್ವಾನ್ ಯು. ವಿಘ್ನೇಶ ಶರ್ಮ, ವಿದ್ವಾನ್ ಪ್ರಸನ್ನ ಭಟ್ ಮಾಗೋಡು, ಪಾಲ್ಗೊಂಡಿದ್ದರು.
    ಶಿಬಿರದಲ್ಲಿ 'ಪೀಠಿಕೆ - ಸ್ವಗತ- ಸಂವಾದ', 'ಅರ್ಥಗಾರಿಕೆಯಲ್ಲಿ ಪಾತ್ರಕಲ್ಪನೆ ಹಾಗೂ ಸಾಧ್ಯತೆಗಳು'  ವಿಷಯದ ಬಗೆಗೆ ಪ್ರಾತ್ಯಕ್ಷಿಕೆ ಹಾಗೂ ಮುಕ್ತ ಸಂವಾದ ಅವಲೋಕನ ನಡೆಯಿತು.
   ಖ್ಯಾತ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ನಾವಡ ಮಧೂರು, ಜಗದಾಭಿರಾಮ ಪಡುಬಿದ್ರೆ, ಶಂಭಯ್ಯ ಭಟ್ ಕಂಜರ್ಪಣೆ, ಗುಂಡಿಮಜಲು ಗೋಪಾಲ ಭಟ್, ಮರಕಡ ಲಕ್ಷ್ಮಣ ಕುಮಾರ್, ಬರಹಗಾರರಾದ ಸುಧಾಕರ ಜೈನ್ ಹೊಸಬೆಟ್ಟು, ಕಟೀಲು ಸಿತ್ಲ ರಂಗನಾಥ ರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
   ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೆರುವಡಿ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಕಲಾವಿದರಾಗಿ ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಬಲಿಪ ಪ್ರಸಾದ ಭಟ್, ಲವಕುಮಾರ್ ಐಲ, ಶ್ರೀಧರ ವಿಟ್ಲ,  ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್,  ವಿಷ್ಣು ಶರ್ಮ ವಾಟೆಪಡ್ಪು, ಶಶಾಂಕ ಅನರ್ಾಡಿ ಭಾಗವಹಿಸಿದ್ದರು.
   ರಾಜಸೂಯಾಧ್ವರ ಪ್ರಸಂಗದ ಕೃಷ್ಣ ಧರ್ಮರಾಯ ಸಂವಾದ, ರಾಮನಿಯರ್ಾಣದ ಲಕ್ಷ್ಮಣ ದೂವರ್ಾಸ ಸಂವಾದ, ಭೀಷ್ಮ ಪ್ರತಿಜ್ಞೆಯ ಶಂತನು ಸತ್ಯವತಿ ಸಂವಾದವನ್ನು ಅಥರ್ಾಂತರಂಗದಲ್ಲಿ ಅಳವಡಿಸಿ ಕೊಳ್ಳಲಾಗಿತ್ತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries