HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಪಾಕಿಸ್ತಾನ ಚುನಾವಣೆ ಅಧಿಕೃತ ಫಲಿತಾಂಶ: ಇಮ್ರಾನ್ ಖಾನ್ ಸಾರಥ್ಯದ ಪಿಟಿಐ ಅತಿದೊಡ್ಡ ಪಕ್ಷ, 116 ಸೀಟು
    ಇಸ್ಲಾಮಾಬಾದ್ : ಪಾಕಿಸ್ತಾನದ ಸಾವ್ರತರ್ಿಕ ಚುನಾವಣೆಯ ಅಧಿಕೃತ ಫಲಿತಾಂಶವನ್ನು  ಚುನಾವಣಾ ಆಯೋಗ ಪ್ರಕಟಿಸಿದ್ದು,  ಸ್ಪಧರ್ಿಸಿದ್ದ 270 ಕ್ಷೇತ್ರಗಳ ಪೈಕಿ 116 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಸಾರಥ್ಯದ  ತೆಹ್ರಿಕ್  ಇ- ಇನ್ಸಾಪ್ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ .
   ಜುಲೈ 25 ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ  ಎಂದು ಸೋತ ಪಕ್ಷಗಳ ಮುಖಂಡರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಅಧಿಕೃತ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗಿತ್ತು.
   ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಜ್ ಷರೀಪ್ ಅವರ ಪಾಕಿಸ್ತಾನ್ ಮುಸ್ಲಿ ಲೀಗ್ ನವಾಜ್ ( ಪಿಎಂಎಲ್ -ಎನ್ ಪಕ್ಷ 64, ಮತ್ತು ಮಾಜಿ ಅಧ್ಯಕ್ಷ ಅಸಿಪ್ ಆಲಿ ಜದರ್ಾರಿ ಅವರ ಪಿಪಿಪಿ 43 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ.
ಎಂಎಂಎಪಿ  13 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
   13 ಸ್ವತಂತ್ರ ಅಭ್ಯಥರ್ಿಗಳು ಕೂಡಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.  ಸಕರ್ಾರ ರಚನೆಯಲ್ಲಿ ಇವರು ಪಿಐಟಿ ಪಕ್ಷದೊಂದಿಗೆ ಪ್ರಮುಖವಾದ ಪಾತ್ರ ವಹಿಸಲಿದ್ದಾರೆ.
ಕರಾಚಿ ಮೂಲಕದ ಎಂಕ್ಯೂಎಂಪಿ  ಆರು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಪ್ರತಿಯೊಂದು ಪಕ್ಷವು ಗಳಿಸಿದ ಒಟ್ಟಾರೇ ಮತಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ .
   ಪಿಟಿಐ ಪಕ್ಷ 16, 857, 035 ಮತಗಳನ್ನು ಪಡೆಯುವ ಮೂಲಕ  ಅಗ್ರ ಸ್ಥಾನದಲ್ಲಿದೆ. ಪಿಎಂಎಲ್ -ಎನ್ 12, 894,  ಹಾಗೂ ಪಿಪಿಪಿ 6,894,296 ಮತಗಳನ್ನು ಪಡೆದುಕೊಂಡಿದೆ. ಸ್ವತಂತ್ರ ಅಭ್ಯಥರ್ಿಗಲು 6,011,297 ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಧಾಮರ್ಿಕ ಪಕ್ಷಗಳಾದ ಎಂಎಂಎಪಿ 2,503, 542 ಮತಗಳು, ತೆಹ್ರಿಕ್  -ಐ- ಲಬೈಕ್ ಪಾಕಿಸ್ತಾನ್ 2.191, 679 ಮತ್ತು ಅಲ್ಲಾಹು- ಹೊ- ಅಕ್ಬರ್ ತೆಹ್ರರಿಕ್, 171,441 ಮತಗಳನ್ನು ಪಡೆದುಕೊಂಡಿವೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ.
   ರಾಷ್ಟ್ರೀಯ ಆಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ  ಪಂಜಾಬ್ ಪ್ರಾಂತ್ಯದಲ್ಲಿ ಶೇ. 55, ಸಿಂಧೂ ಪ್ರಾಂತ್ಯದಲ್ಲಿ ಶೇ. 47.6 , ಖೈಬರ್ -ಪಾಕ್ತುವ್  ಪ್ರಾಂತ್ಯದಲ್ಲಿ ಶೇ. 45. 5  ಹಾಗೂ ಬಲೊಚಿಸ್ತಾನ್ ಪ್ರಾಂತ್ಯದಲ್ಲಿ ಶೇ, 45.2 ರಷ್ಟು ಪ್ರಮಾಣದಲ್ಲಿ ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries