ಜೈಶ್ರೀರಾಮ ಸಮಾಜ ಸೇವಾ ಸಂಸ್ಥೆಯಿಂದ ಧನ ಸಹಾಯ
ಮಂಜೇಶ್ವರ: ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ಜುಲೈ ತಿಂಗಳ 14 ನೇ ಯೋಜನೆಯ ಮೊತ್ತವನ್ನು ಕೂಡ್ಲು ರಾಮದಾಸ ನಗರ ನಿವಾಸಿ ಬಾಡಿಗೆ ಮನೆಯಲ್ಲಿ ವಾಸಿಸುವ ಉಪೇಂದ್ರ ಆಚಾರ್ಯರ ಪತ್ನಿ 54 ವರ್ಷದ ಸಾವಿತ್ರಿ ಇವರ ಸ್ಮರಣಾರ್ಥ ಅವರ ಮನೆಯವರಿಗೆ ಗುರುವಾರ ನೀಡಲಾಯಿತು.
ಸಾವಿತ್ರಿಯವರು ಕಳೆದ ಒಂದೂವರೆ ವರ್ಷಗಳಿಂದ ತಲಶ್ಶೇರಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಬಳಿಕ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಇತ್ತೀಚೆಗೆ ನಿಧನರಾಗಿದ್ದರು.ಇವರ ಮನೆಯ ಸಂಕಷ್ಟಮಯ ಬದುಕಿನ ಬವಣೆಯನ್ನು ಅರಿತ ಜೈಶ್ರೀರಾಮ ತಮ್ಮ ತಿಂಗಳ ಯೋಜನೆಯಿಂದ ಸಹಾಯ ಹಸ್ತವನ್ನು ನೀಡಿದ್ದಾರೆ.
ಸಹಾಯ ಹಸ್ತವನ್ನು ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ಹಿರಿಯ ಸದಸ್ಯ ದಾಮೋದರ ಆಚಾರ್ಯ ಮಜಿಬೈಲು ವಿತರಿಸಿದರು. ಈ ವೇಳೆ ಸಂಸ್ಥೆಯ ಪದಾಧಿಕಾರಿಗಳಾದ ನಳಿನಾಕ್ಷ ಆಚಾರ್ಯ ಉದ್ಯಾವರ,ಆಶಾ ಲೋಕೇಶ್ ಮಾಡ, ಗಿರಿ ವೀರನಗರ, ಲೋಕೇಶ್ ಮಾಡ, ಪ್ರದೀಪ್ ಮೊರತ್ತಣೆ, ರತನ್ ಕುಮಾರ್ ಹೊಸಂಗಡಿ, ಪ್ರಶಾಂತ್ ಆಚಾರ್ಯ ಅಂಗಡಿಪದವು, ಸುಕೇಶ್ ಬೆಜ್ಜ, ಸದಸ್ಯರಾದ ನಿತೇಶ್ ಪಜಿಂಗಾರ್, ಗಗನ್ ದುಗರ್ಿಪಳ್ಳ ಉಪಸ್ಥಿತರಿದ್ದರು. ದಿವಂಗತ ಸಾವಿತ್ರಿಯವರ ಪತಿ ಉಪೇಂದ್ರ ಆಚಾರ್ಯರು ಮಂಜೇಶ್ವರ ಕುಂಬಳೆ ಕಾಸರಗೋಡಿನಾದ್ಯಂತ ಮನೆ ಮನೆ ಅಂಗಡಿಗಳಿಗೆ ತೆರಳಿ ಪುಸ್ತಕ ಮಾರಾಟ ಮಾಡುತ್ತಾರೆ.ಇದರಿಂದ ಸಿಕ್ಕಿದ ಅಲ್ಪ ಮೊತ್ತದಿಂದ ಇವರ ಜೀವನ ನಿರ್ವಹಣೆ ನಡೆಯುತ್ತದೆ.