HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಜುಲೈ 15ರಿಂದ ಯಕ್ಷಬಳಗ ಹೊಸಂಗಡಿ ಆಷಾಢ ಮಾಸ ಕೂಟ
    ಮಂಜೇಶ್ವರ: ಯಕ್ಷಗಾನ ಹಿರಿಯ ಸಂಘಟಕ ಸತೀಶ ಅಡಪ ಸಂಕಬೈಲು ಸಂಚಾಲಕತ್ವದ `ಯಕ್ಷಬಳಗ ಹೊಸಂಗಡಿ' ಸಂಸ್ಥೆಯು ಕಳೆದ ಇಪ್ಪತ್ತಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಆಷಾಢ ಮಾಸ ಸಾಪ್ತಾಹಿಕ ಯಕ್ಷಗಾನ ಕೂಟವು ಈ ವರ್ಷ ಇಪ್ಪತ್ತೇಳನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದ್ದು ಈ ವರ್ಷದ ಕೂಟವನ್ನು ಜುಲೈ 15 ಭಾನುವಾರ ಅಪರಾಹ್ನ ಗಂಟೆ 2.30ಕ್ಕೆ ಕಡಂಬಾರು ಶ್ರೀ ವಿಷ್ಣುಮೂತರ್ಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್.ಎನ್.ಕಡಂಬಾರು ದೀಪ ಬೆಳಗಿಸಿ ಉದ್ಘಾಟಿಸುವರು.
ಬಳಿಕ `ಶ್ರೀ ರಾಮ ಪಟ್ಟಾಭಿಷೇಕ' ಯಕ್ಷಗಾನ ತಾಳಮದ್ದಳೆ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಜರಗಲಿದೆ. ಪ್ರತೀ ಭಾನುವಾರಗಳಲ್ಲಿ ಮಾಸ ಪರ್ಯಂತ ವಿವಿಧ ಕ್ಷೇತ್ರಗಳಲ್ಲಿ ಕೂಟ ಜರಗಲಿದೆ ಎಂದು ಯಕ್ಷಬಳಗ ಸಂಚಾಲಕ ಸತೀಶ ಅಡಪ ಸಂಕಬೈಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries