HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಆನೆಗುಂದಿಶ್ರೀಗಳವರ ವಿಲಂಬೀ ಚಾತುಮರ್ಾಸ್ಯ
        ಕರಾವಳಿಯ ಕಾಳಿಕಾಂಬಾ ದೇಗುಲಗಳ ಸಂದರ್ಶನ ಜುಲೈ 15ರಿಂದ ಆರಂಭ
     ಕುಂಬಳೆ: ಕಟಪಾಡಿಯ ಶ್ರೀಮತ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುಮರ್ಾಸ್ಯ ವ್ರತಾಚರಣೆಯ ಪೂರ್ವಭಾವಿಯಾಗಿ ಕಾಳಿಕಾಂಬಾ  ವಿಶ್ವಕರ್ಮ ದೇಗುಲಗಳ ಸಂದರ್ಶನವು ಜುಲೈ 15ರಿಂದ 26ರ ವರೆಗೆ ನಡೆಯಲಿದೆ.  ಶ್ರೀಗಳವರು ಕರಾವಳಿಯ ಕಾಸರಗೋಡು, ದಕ್ಷಿಣಕನ್ನಡ,ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಪ್ರಮುಖ 15  ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನಗಳಿಗೆ  ಚಾತುಮರ್ಾಸ್ಯಕ್ಕೆ ದೀಕ್ಷಾ ಮುಂಚಿತವಾಗಿ ಈ ಬಾರಿ  ಸಂದರ್ಶನವೀಯಲಿದ್ದಾರೆ.
    ಕಾರ್ಯಕ್ರಮದ ಅಂಗವಾಗಿ ಜುಲೈ 15 ರಂದು ಕೋಟೆಕ್ಕಾರು (ಬೆಳಿಗ್ಗೆ 8.30), ಆರಿಕ್ಕಾಡಿ (11.30) ,ಮಧೂರು (12.30 ಬಿಕ್ಷೆ), ಕಾಞಂಗಾಡು( ಸಂಜೆ 3.00), ಬಂಗ್ರಮಂಜೇಶ್ವರ (5.30), ಜುಲೈ7ರಂದು ಕಾಪು (ಬೆಳಿಗ್ಗೆ 9.30), ಕೊಲಕಾಡಿ(10.30), ಮಂಗಳೂರು (12.00 ಬಿಕ್ಷೆ), ಜುಲೈ 19ರಂದು ಶಿಕಾರಿಪುರ ಹೋತನಕಟ್ಟೆ ( ಬೆಳಿಗ್ಗೆ 11.00) , ಜುಲೈ 20ರಂದು ಮೂಡಬಿದ್ರೆ (ಬೆಳಿಗ್ಗೆ 10.00), ಕಾರ್ಕಳ (12.00), ಜುಲೈ 24ರಂದು  ಗೋಕರ್ಣ (ಬೆಳಿಗ್ಗೆ 7.30) , ಭಟ್ಕಳ (9.30), ಉಪ್ರಳ್ಳಿ (11.00), ಬಾಕರ್ೂರು (12.30 ಬಿಕ್ಷೆ ) ಮತ್ತು  ಜುಲೈ 26ರಂದು ಕಟಪಾಡಿ (ಬೆಳಿಗ್ಗೆ 11.00)  ಆನೆಗುಂದಿಶ್ರಿಗಳವರ ಕ್ಷೇತ್ರ ಸಂದರ್ಶನ ಸವಾರಿಯು ನಡೆಯಲಿದೆ. ಶ್ರೀಗಳವರ ಜೊತೆಯಲ್ಲಿ ಚಾತುಮರ್ಾಸ್ಯ ವ್ರತ ನಿರ್ವಹಣಾ ಸಮಿತಿ, ಪ್ರತಿಷ್ಠಾನ, ವಲಯ ಸಮಿತಿ ಮತ್ತು ಗುರುಸೇವಾ ಪರಿಷತ್ನ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಠದಲ್ಲಿ 2018 ಜು.27ರಿಂದ ಸೆ.25ರ ತನಕ ಆನೆಗುಂದಿ ಶ್ರೀಗಳ 14ನೇ ಚಾತುಮರ್ಾಸ್ಯ ವ್ರತಾಚರಣೆಯು ನಡೆಯಲಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries