ಜಿಎಸ್ ಟಿ ಸಭೆ: 17 ಐಷಾರಾಮಿ ಉತ್ಪನ್ನಗಳ ತೆರಿಗೆ ಇಳಿಕೆ
ನವದೆಹಲಿ: ಜಿಎಸ್ ಟಿಯ 28 ನೇ ಸಭೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನ್ನು ಜಿ ಎಸ್ ಟಿ ವ್ಯಾಪ್ತಿಯಿಂದ ಹೊರಗಿಡುವುದೂ ಸೇರಿದಂತೆ ಹಲವು ಮಹತ್ವದ ನಿಧರ್ಾರಗಳನ್ನು ಕೈಗೊಳ್ಳಲಾಗಿದ್ದು, ಮಧ್ಯಮ ವರ್ಗದವರು ಹೆಚ್ಚು ಬಳಕೆ ಮಾಡುವ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ.
ಜಿಎಸ್ ಟಿ ಸಭೆಯ ಬಳಿಕ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯಲ್, ಪಾದರಕ್ಷೆಗಳು, ಸಣ್ಣ ಟಿವಿಗಳು ಸೇರಿದಂತೆ ದಿನ ನಿತ್ಯ ಬಳಕೆಯಾಗುವ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಜಿಎಸ್ ಟಿ ಸಭೆಯಲ್ಲಿ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶೇ.12 ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡುತ್ತಿದ್ದ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಜಿಎಸ್ ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದ್ದರೆ, ಪಾದರಕ್ಷೆಗಳು, ವಾಟರ್ ಹೀಟರ್, ಎಲೆಕ್ಟ್ರಿಕ್ ಇಸ್ತ್ರಿ ಯಂತ್ರಗಳು, ಲಿಥಿಯಂ-ಐಯಾನ್ ಬ್ಯಾಟರಿಗಳು, ಹೇರ್ ಡೈ, ವ್ಯಾಕ್ಯೂಮ್ ಕ್ಲೀನರ್, ಆಹಾರ ವಸ್ತುಗಳು, ಎಥೆನಾಲ್, ಫ್ರಿಡ್ಜ್ , ವಾಷಿಂಗ್ ಮಷೀನ್, 68 ಸೆಂಟೀ ಮೀಟರ್ ವರೆಗಿನ ಟಿ.ವಿಗಳ ತೆರಿಗೆ ಸ್ಲ್ಯಾಬ್ ನ್ನು ಇಳಿಕೆ ಮಾಡಲಾಗಿದೆ.
ಶೇ.28 ರಿಂದ 18ಕ್ಕೆ ಇಳಿಕೆಯಾಗಿರುವ 17 ವಸ್ತುಗಳು
ವಾಟರ್ ಹೀಟರ್
ವ್ಯಾಕ್ಯೂಮ್ ಕ್ಲೀನರ್
ಫ್ರಿಡ್ಜ್
ವಾಷಿಂಗ್ ಮಷೀನ್
68 ಸೆಂಟೀ ಮೀಟರ್ ವರೆಗಿನ ಟಿ.ವಿ
ಶೇ.5 ಕ್ಕೆ ಇಳಿಕೆಯಾಗಿರುವ ವಸ್ತುಗಳು
ಕೋಟಾ ಕಲ್ಲು
ಸ್ಯಾಂಡ್ ಸ್ಟೋನ್ (ಮರಳುಗಲ್ಲು)
ಎಥೆನಾಲ್
ಶೇ.5 ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡುತ್ತಿದ್ದ ಪಾದರಕ್ಷೆಗಳ ಮೌಲ್ಯವನ್ನು ರೂ,500 ರಿಂದ 1,000 ಕ್ಕೆ ಹೆಚ್ಚಿಸಲಾಗಿದ್ದು, ಒಟ್ಟಾರೆ 100 ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಮುಂದಿನ ಜಿಎಸ್ ಟಿ ಸಭೆಯನ್ನು ಆಗಸ್ಟ್ 4 ಕ್ಕೆ ನಿಗದಿಪಡಿಸಲಾಗಿದೆ.