ಆಷಾಢ ಮಾಸದ 2ನೇ ತಾಳಮದ್ದಳೆ
ಮಂಜೇಶ್ವರ: ಯಕ್ಷ ಬಳಗ ಹೊಸಂಗಡಿ ಆಶ್ರಯದಲ್ಲಿ ನಡೆಯುವ ಆಷಾಢ ಮಾಸದ 27 ನೇ ವರ್ಷದ ಯಕ್ಷಗಾನ ಕೂಟದ 2 ನೇ ಕಾರ್ಯಕ್ರಮ ಭಾನುವಾರ ಸಂಜೆ ಬಂಗ್ರಮಂಜೇಶ್ವರ ಶ್ರೀಕಾಳಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಕ್ಷೇತ್ರಾಡಳಿತ ಸಮಿತಿಯ ಸಹಕಾರದೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶ್ರೌತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಉಮೇಶ್ ಆಚಾರ್ಯ ಪೋಳ್ಯ, ಕ್ಷೇತ್ರಾಡಳಿತ ಮೊಕ್ಥೇಸರ ಬತ್ತೇರಿ ಪದ್ಮನಾಭ ಆಚಾರ್ಯ, ಕಲಾವಿದ ಶಂಕರ ಆಚಾರ್ಯ ಕೋಳ್ಯೂರು ಉಪಸ್ಥಿತರಿದ್ದರು.
ಬಳಿಕ ಪಂಚವಟಿ ಎಂಬ ಕಥಾ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬರೆ ರಾಜ ಭಟ್, ಶುಭಾನಂದ ಶೆಟ್ಟಿ ಕೂಳೂರು, ಮದ್ದಳೆ ಹಾಗೂ ಚೆಂಡೆಯಲ್ಲಿ ರಾಜಾರಾಮ ಬಲ್ಲಾಳ್ ಚಿಪ್ಪಾರ್, ಮಯೂರ ನಾಯ್ಗ ಮಾಡೂರು, ಭಾರ್ಗವ ಕೃಷ್ಣ ಬಲಿಪಗುಳಿ, ಮುಮ್ಮೆಳದಲ್ಲಿ ವಿಠಲ ಭಟ್ ಮೊಗಸಾಲೆ(ಶ್ರೀರಾಮ), ಜಯರಾಮ ಭಟ್(ಸೀತೆ), ನಾಗರಾಜ ಪದಕಣ್ಣಯ(ಲಕ್ಷ್ಮಣ), ಶಂಕರ ಆಚಾರ್ಯ ಕೋಳ್ಯೂರು(ಮಾಯಾ ಶೂರ್ಪನಖಿ), ರಾಮಕೃಷ್ಣ ಭಟ್(ಶೂರ್ಪನಖಿ), ಸತೀಶ್ ಅಡಪ ಸಂಕಬೈಲ್, ಶ್ರೀವತ್ಸ ಸುಂಕದಕಟ್ಟೆ (ಋಷಿಗಳು)ಸಹಕರಿಸಿದರು. ಯಕ್ಷ ಬಳಗ ಹೊಸಂಗಡಿಯ ಸಂಸ್ಥಾಪಕ ಸಂಕಬೈಲ್ ಸತೀಶ್ ಅಡಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತನ್ ಕುಮಾರ್ ಹೊಸಂಗಡಿ ವಂದಿಸಿದರು.