ಕಾಸರಗೋಡು ನಗರಸಭೆ : 2.68 ಕೋಟಿ ರೂ.ಗಳ ಘನ ತ್ಯಾಜ್ಯ ಸಂಸ್ಕರಣಾ ಘಟಕ ಯೋಜನೆ
ಕಾಸರಗೋಡು: ಕೇಂದ್ರ ಮತ್ತು ಕೇರಳ ಸರಕಾರಗಳ ಸಹಕಾರದೊಂದಿಗೆ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಎರಡೂವರೆ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದಲ್ಲಿ ಘನ ಮಾಲಿನ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ನಗರಸಭಾ ಸಭೆಯಲ್ಲಿ ಅನುಮತಿ ನೀಡಲಾಗಿದೆ.
ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸುವ ಘನ ತ್ಯಾಜ್ಯ ಸಂಸ್ಕರಣಾ ಯೋಜನೆಗಳ ನಿರ್ವಹಣೆಗೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲು ನಗರಸಭಾ ಸಭೆಯಲ್ಲಿ ಆರೋಗ್ಯ ವಿಭಾಗಕ್ಕೆ ಅನಮತಿ ನೀಡಲಾಗಿದೆ. ಮಲಿನ ಜಲ ಸಂಸ್ಕರಣಾ ಯೋಜನೆಯನ್ನು ಜಾರಿಗೊಳಿಸುವುದರ ಅಂಗವಾಗಿ ಯೋಜನೆಯ ರೂಪುರೇಷೆಯನ್ನು ತಯಾರಿಸಲು ಆದೇಶ ನೀಡಲಾಗಿದೆ.
ಸ್ವಚ್ಛ ಭಾರತ್ ಮಿಷನ್ ನಗರ ಯೋಜನೆಯನ್ನು ಅನುಸರಿಸಿ 2018ನೇ ವರ್ಷದ ಘನ ತ್ಯಾಜ್ಯ ಸಂಸ್ಕರಣಾ ಯೋಜನೆಯನ್ನು ರೂಪಿಸಲಾಗುವುದು. ಕೇಂದ್ರ ಸರಕಾರವು ಘೋಷಿಸಿದ ಯೋಜನೆಯಾಗಿದ್ದರೂ ರಾಜ್ಯ ಸರಕಾರದ ಪಾಲು ಯೋಜನೆಯ ಲಭ್ಯವಾಗಬೇಕಿದೆ. ಸುಮಾರು 2.68 ಕೋಟಿ ರೂಪಾಯಿ ವಿನಿಯೋಗಿಸಿ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.
ಕೊಚ್ಚಿ ಕೇಂದ್ರವಾಗಿ ಕಾಯರ್ಾಚರಿಸುತ್ತಿರುವ ಕಂಪೆನಿಯು ಯೋಜನೆಯ ಪ್ರಾಥಮಿಕ ಮಾಹಿತಿಗಳನ್ನು ನಗರಸಭಾ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಕಾಸರಗೋಡು ನಗರಸಭೆಯ ವ್ಯಾಪ್ತಿಯಲ್ಲಿ ನಾನಾ ಪ್ರದೇಶಗಳಲ್ಲಿ ಶುದ್ಧಜಲ ಸಂಪನ್ಮೂಲಗಳಲ್ಲಿ ಮಲಿನ ನೀರು ತುಂಬುವ ಘಟನೆಗೆ ಸಂಬಂಧಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕೌನ್ಸಿಲರ್ಗಳು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿ ಸಂದೇಹಗಳನ್ನು ದೂರ ಮಾಡಿದರು.
ಸಾರ್ವಜನಿಕರು ತ್ಯಾಜ್ಯ ಎಸೆಯುವ ಪ್ರದೇಶಗಳಲ್ಲಿ ಸ್ಥಾಪಿಸಿದ ಕ್ಯಾಮೆರಾಗಳು ಈಗ ಕಾರ್ಯವೆಸಗುತ್ತಿಲ್ಲ. ಇದರಿಂದಾಗಿ ನಗರಸಭೆಯ ವಿವಿಧ ಭಾಗಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಕ್ಯಾಮೆರಾ ಇಲ್ಲದಿರುವುದು ಈ ಕೃತ್ಯ ನಡೆಸುವವರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಕೆಲವು ಕೌನ್ಸಿಲರ್ಗಳು ದೂರಿದರು. ಈ ವಿಷಯದಲ್ಲಿ ಶೀಘ್ರ ಸ್ಪಂದಿಸಿ ಸಮರ್ಥ ಯೋಜನೆ ಜಾರಿಗೆ ತರಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಭರವಸೆ ನೀಡಿದರು.
ಕೇಂದ್ರ ಸರಕಾರವು ಕೇರಳಕ್ಕೆ ಮಂಜೂರುಗೊಳಿಸಿದ ಏಮ್ಸ್ ಆಸ್ಪತ್ರೆ (ಆಲ್ ಇಂಡಿಯಾ ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ )ಯನ್ನು ಕಾಸರಗೋಡಿಗೆ ಮಂಜೂರುಗೊಳಿಸಬೇಕು ಎಂಬ ಠರಾವನ್ನು ಕಾಸರಗೋಡು ನಗರಸಭಾದ ಸಭೆಯಲ್ಲಿ ಸವರ್ಾನುಮತದಿಂದ ಅಂಗೀಕರಿಸಿತು.
ಕಾಸರಗೋಡು ಜಿಲ್ಲೆಯ ಹಿಂದುಳಿದ ಅವಸ್ಥೆ, ಎಂಡೋಸಲ್ಫಾನ್ ಸಂತ್ರಸ್ತ ವಲಯವನ್ನು ಪರಿಗಣಿಸಿ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಠರಾವು ಮಂಡಿಸಿದ ಕೌನ್ಸಿಲರ್ ಸೀತಾ ಆಗ್ರಹಿಸಿದರು. ನಗರಸಭಾ ಉಪಾಧ್ಯಕ್ಷ ಎಂ.ಅಬ್ದುಲ್ ರಹಮಾನ್ ಠರಾವಿಗೆ ಬೆಂಬಲ ಸೂಚಿಸಿದರು. ಚಚರ್ೆಗಳ ಬಳಿಕ ಏಕಕಂಠದಿಂದ ಅಂಗೀಕರಿಸಿರುವುದಾಗಿ ನಗರಸಭಾ ಅಧ್ಯಕ್ಷೆ ಪ್ರಕಟಿಸಿದರು.
ಸ್ವಚ್ಛ ಭಾರತ್ ವ್ಯವಸ್ಥೆಗೆ ಆದ್ಯತೆ : ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಯೋಜನೆಗೆ ರೂಪು ನೀಡಲಾಗಿದೆ. ನಗರಸಭೆಯ ಪ್ರತಿ ವಾಡರ್್ಗಳಲ್ಲೂ ಸ್ವಚ್ಛ ಭಾರತ್ ಅಭಿಯಾನ ಕೈಗೊಂಡು ಕ್ಲೀನ್ ನಗರಸಭೆ ಮಾಡುವ ಗುರಿ ಇರಿಸಲಾಗಿದೆ. ಎಲ್ಲ ವಾಡರ್್ಗಳ ಮಾಲಿನ್ಯವನ್ನು ಒಟ್ಟು ಸೇರಿಸಿ ಅತ್ಯಾಧುನಿಕ ಮಾದರಿಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ತೀಮರ್ಾನಿಸಲಾಗಿದೆ. ಈ ನಿಟ್ಟಿನಲ್ಲಿ ನಗರಸಭೆಯ ಎಲ್ಲ ಕೌನ್ಸಿಲರ್ಗಳು ಕೂಡ ಸವರ್ಾನುಮತದ ಬೆಂಬಲ ವ್ಯಕ್ತಪಡಿಸಿದ್ದಾರೆ.