ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಬದಿಯಡ್ಕ: ಬೇಳ ಸೈಂಟ್ ಮೇರೀಸ್ ಹೈಸ್ಕೂಲಿನ 2018-19 ನೇ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಶಾಲಾ ಪರಿಸರದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರೂ, ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳಾದ ಅತೀ ವಂ. ಸ್ವಾಮಿ ಜೋನ್ ವಾಸ್ ವಹಿಸಿದರು. ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ರವಿಶಂಕರ್ ವಿದ್ಯಾಭ್ಯಾಸದಲ್ಲಿ ರಕ್ಷಕರ ಪಾತ್ರ ಕುರಿತು ಮಾತನಾಡಿದರು.
2018-19ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಉದಯ ಕುಮಾರ್ ಸಿ.ಕೆ. ಪುನರಾಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಜೀನಾ ಕಲ್ಲರಕ್ಕಲ್ ಸ್ವಾಗತಿಸಿ, ಅಧ್ಯಾಪಕ ಜೋನ್ ಡಿ'ಸೋಜಾ ವಂದಿಸಿದರು. ಅಧ್ಯಾಪಿಕೆ ಸುಚಿತಾ ಡಿ'ಸೋಜಾ ಮತ್ತು ಅನುಪಮ ಕಾರ್ಯಕ್ರಮ ನಿರೂಪಿಸಿದರು.