ಬದಿಯಡ್ಕದಲ್ಲಿ ಕೃಷಿ ಅನುಕೂಲತೆಗಳ ವಿತರಣೆಗೆ ಚಾಲನೆ
ಬದಿಯಡ್ಕ : ಬದಿಯಡ್ಕ ಗ್ರಾಮಪಂಚಾಯತ್ 2018-19ನೇ ಸಾಲಿನ ವಾಷರ್ಿಕ ಯೋಜನೆಯಲ್ಲಿ ಕೃಷಿ ಭವನದ ಫಲಾನುಭವಿಗಳಿಗಿರುವ ಅನುಕೂಲತೆಗಳನ್ನು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಕೃಷಿಕರಿಗೆ ವಿತರಿಸುವ ಮೂಲಕ ಗುರುವಾರ ಬದಿಯಡ್ಕ ಕೃಭವನದಲ್ಲಿ ಉದ್ಘಾಟಿಸಿದರು.
ಅವರು ಮಾತನಾಡಿ, ಗ್ರಾಮಪಂಚಾಯತಿಯು ಕೃಷಿಯ ಅಭಿವೃದ್ಧಿಗೋಸ್ಕರ ಹೆಚ್ಚಿನ ಯೋಜನಾ ಮೊತ್ತವನ್ನು ಮೀಸಲಿರಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಬೇಕಿದೆ. ಸಂಪೂರ್ಣ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುವ ಮೂಲಕ ಆರೋಗ್ಯವಂತ ಜೀವನವನ್ನು ಸಾಗಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಮುತುವಜರ್ಿವಹಿಸಲಾಗಿದೆ. ಅರ್ಹತೆಯುಳ್ಳ ಕೃಷಿಕರು ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್ ಕುಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಮಾತನಾಡಿ, ಉತ್ತಮಗುಣಮಟ್ಟದ ಜೈವಿಕ ಗೊಬ್ಬರವನ್ನು ಕೃಷಿ ಬಳಕೆಗೆ ನೀಡಲಾಗುತ್ತಿದೆ. ಸಕಾಲದಲ್ಲಿ ಕೃಷಿಗೆ ಗೊಬ್ಬರವನ್ನು ಬಳಸಲು ಅನುಕೂಲವಾಗುವಂತೆ ವಿತರಣಾ ಕಾರ್ಯವನ್ನು ಅತಿಶೀಘ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಲಕ್ಷ್ಮೀನಾರಾಯಣ ಪೈ ಬಳ್ಳಂಬೆಟ್ಟು, ವಿಶ್ವನಾಥ ಪ್ರಭು ಕರಿಂಬಿಲ, ಶಾಂತಾ ಬಾರಡ್ಕ ಶುಭಾಶಂಸನೆಗೈದರು. ಕೃಷಿ ಅಧಿಕಾರಿ ಮೀರಾ ಸ್ವಾಗತಿಸಿ, ಕೃಷಿ ಸಹಾಯಕ ಅಧಿಕಾರಿ ಜಯರಾಮ್ ವಂದಿಸಿದರು.