HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        "ನಮೋ ಮೋಹನ-2018" ಸಿಡಿ ಬಿಡುಗಡೆ
     ಮಂಜೇಶ್ವರ: ನಾಟ್ಯನಿಲಯಂ ಮಂಜೇಶ್ವರದ ಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರಿಂದ ಅವರ ನೃತ್ಯ ಗುರು, ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಶಕುಂತಲಾ ಪ್ರಶಸ್ತಿ ಪುರಸ್ಕೃತರಾಗಿರುವ ಮೋಹನ್ ಕುಮಾರ್ ಉಳ್ಳಾಲ್ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭ ನಮೋ ಮೋಹನ-2018 ಇದರ ಸಿಡಿಯನ್ನು ಕನರ್ಾಟಕ ಸರಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆಯ ಸಚಿವರಾದ ವೆಂಕಟರಾವ್ ನಾಡಗೌಡ ಬುಧವಾರ ಬೆಳಿಗ್ಗೆ ಮಂಗಳೂರು ಸಕ್ಯರ್ೂಟ್ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
    ಸಾವಿರಾರು ವಿದ್ಯಾಥರ್ಿ ಬಳಗವನ್ನು ಹೊಂದಿರುವ ಗುರು ಬಾಲಕೃಷ್ಣ ಮಾಸ್ಟರ್ ಅವರು ಆಯೋಜಿಸಿದ ಅತ್ಯಂತ ಅಪೂರ್ವ ಹಾಗೂ ವ್ಯತ್ಯಸ್ತವಾದ ಕಾರ್ಯಕ್ರಮದ ಸುಂದರ ನಿಮಿಷಗಳನ್ನು ಮನಮೋಹಕವಾಗಿ ಚಿತ್ರೀಕರಿಸಿ ನೈಜತೆಯ ಸ್ಪರ್ಶದೊಂದಿಗೆ ಆಕರ್ಷಕವಾದ ರೀತಿಯಲ್ಲಿ ಸಿಡಿಯಲ್ಲಿ ನಿರೂಪಿಸಲಾಗಿದೆ.
    ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ವಿಟ್ಲ ಮೊಹಮ್ಮದ್ ಕುಂಞಿ, ಹೈದರ್ ಪತರ್ಿಪ್ಪಾಡಿ, ಸೈಫುಲ್ಲಾ ತಂಙಳ್ ಉದ್ಯಾವರ, ಡಾ.ಕೆ.ಎ. ಖಾದರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದಶರ್ಿ ಅಖಿಲೇಶ್ ನಗುಮುಗಂ, ನ್ಯಾಯವಾದಿ ಗಂಗಾಧರ ಉಳ್ಳಾಲ್, ಕಿರಣ್ ಮಾಸ್ಟರ್ ಮಂಜೇಶ್ವರ,  ಶ್ರೀಕಾಂತ್ ನೆಟ್ಟಣಿಗೆ,  ಪ್ರೊ ಎ.ಶ್ರೀನಾಥ್, ಭಾರತಿ ಪುಷ್ಪರಾಜ್, ವಸಂತ ಪೂಜಾರಿ, ಎನ್ ಪಿ ಪುಷ್ಪರಾಜ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries