HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            2018ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಅಕ್ಷತಾ ರಾಜ್ ಮುಡಿಗೆ
  ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗದಲ್ಲಿ  ಪ್ರತಿವರ್ಷ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ ನಡೆದು ಬರುವ ಸಣ್ಣ ಕಥಾ ಸ್ಪಧರ್ೆ ಈ ಬಾರಿಯ ಫಲಿತಾಂಶ ಬಂದಿದ್ದು ಪ್ರಥಮ ಬಹುಮಾನ ಅಕ್ಷತಾ ರಾಜ್ ಪೆರ್ಲ ಅವರ `ಕಾಸಿನ ಸರ' ಕತೆಗೆ ದೊರಕಿದೆ. ಪೆರ್ಲ ಕಯ್ಯಂಕೂಡೆಲು ಗಣರಾಜ ಭಟ್ ಅವರ ಪತ್ನಿಯಾದ ಅವರು `ಅಕ್ಷರ' ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡು ಬರೆಯುವುದಲ್ಲದೆ ವಿವಿಧೆಡೆ ಸಾಹಿತ್ಯಗೋಷ್ಠಿಯ ಅತಿಥಿಯಾಗಿಯೂ ಭಾಗವಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಸ್ಪಧರ್ಾವೇದಿಕೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುವ ಈಕೆ ತುಳು ಸಾಹಿತ್ಯ ಪ್ರಶಸ್ತಿಯನ್ನೂ ಗಳಿಸಿರುತ್ತಾರೆ. ಪ್ರಸ್ತುತ ಮಂಗಳೂರು ಆಕಾಶವಾಣಿಯ ನಿಮರ್ಾಣ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಸಣ್ಣ ನ್ಯಾನೋಕತೆಗಳ ಸಂಕಲನ `ಕಂದೀಲು' ಬಿಡುಗಡೆಗೊಂಡಿದೆ.
    ಅನ್ನಪೂರ್ಣ ಬೆಜಪ್ಪೆ ಅವರ `ಒಲವಿನ ಬಂಧ' ಕತೆ ದ್ವಿತೀಯ ಬಹುಮಾನ ಗೆದ್ದುಕೊಂಡಿದೆ. ಅವರು  ಪ್ರಸಿದ್ಧ ಜ್ಯೋತಿಷಿ ಚಂದ್ರಶೇಖರ ಬೆಜಪ್ಪೆ ಅವರ ಪತ್ನಿ. ಎರಡು ವರ್ಷಗಳ ಹಿಂದೆ ಸಾಹಿತ್ಯ ಕ್ಷೇತ್ರಕ್ಕೆ ಕಾಲೂರಿದ ಅವರ ಹಲವಾರು ಕವನಗಳು, ಲೇಖನಗಳು, ಪತ್ರಿಕೆಗಳಲ್ಲೂ ವೆಬ್ಸೈಟುಗಳಲ್ಲೂ ಬೆಳಕು ಕಂಡಿವೆ.
   ಮನೋರಮಾ ಬಿ.ಎನ್. ಅವರ `ಶಾರದೆ ಶಾಪ' ಕತೆಗೆ ತೃತೀಯ ಬಹುಮಾನ ಲಭಿಸಿದೆ. ಲೇಖಕಿಯೂ  ವೃತ್ತಿಯಲ್ಲಿ ಕಲಾಸಂಶೋಧಕಿಯೂ ಆಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ  ಪುಸ್ತಕವನ್ನೂ ಬರೆದಿರುತ್ತಾರೆ.
   ಪ್ರಸಿದ್ಧ ಸಾಹಿತಿಯೂ ನಿವೃತ್ತ ಅಧ್ಯಾಪಕರೂ ಆದ ಬಾಲ ಮಧುರಕಾನನ ಹಾಗೂ  ಕಲ್ಲಕಟ್ಟ ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮಪ್ರಸಾದ ಕುಳಮರ್ವ ಹಾಗೂ ಎಸ್.ವಿ.ಭಟ್ ಕಾಸರಗೋಡು  ಇವರುಗಳು ತೀಪರ್ುಗಾರರಾಗಿ ಸಹಕರಿಸಿರುತ್ತಾರೆ.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries