HEALTH TIPS

No title

                      ಪೆರ್ಲ ಮಳೆ-ಬೆಳೆ ಮಹೋತ್ಸವ 2018
    ಪೆರ್ಲ: ಪರಂಪರೆಯ ಅರಿವಿನೊಂದಿಗೆ ಆಧುನಿಕ ಜೀವನ ಕ್ರಮಗಳು ಮುಂದುವರಿಸುವುದರಿಂದ ನೆಮ್ಮದಿ ಸಾಧ್ಯವಿದೆ. ಪ್ರಕೃತಿಯೊಂದಿಗೆ ಅನುಸಂಧಾನಗೊಂಡು ಜೀವಿಸುವ ಬಗ್ಗೆ ನಾವು ಪುನರವಲೋಕನ ನಡೆಸಬೇಕಿದ್ದು, ಆಧುನಿಕ ವ್ಯವಸ್ಥೆಗೆ ಮಾರು ಹೋಗಿರುವುದರಿಂದ ಮನುಷ್ಯನ ಮಾನಸಿಕ ಶಾರೀರಿಕ ಆರೋಗ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಚಿಂತಿಸಬೇಕಾಗಿದೆ ಎಂದು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ರೂಪವಾಣಿ ಆರ್. ಭಟ್ ಹೇಳಿದರು.
    ಜಿಲ್ಲಾ ಕುಟುಂಬಶ್ರೀ ಮಿಶನ್ ನಿದರ್ೇಶನದಂತೆ ಎಣ್ಮಕಜೆ ಗ್ರಾ.ಪಂ. ಕುಟುಂಬಶ್ರೀ ಆಶ್ರಯದಲ್ಲಿ ಪೆರ್ಲ ಸೇವಾ ಸಹಕಾರಿ ಸಂಘದ ಸಹಯೋಗದೊಂದಿಗೆ ಪೆರ್ಲ ಬಯಲುಗದ್ದೆಯಲ್ಲಿ ಮಂಗಳವಾರ ನಡೆದ 'ಮಳೆ-ಬೆಳೆ 2018' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
      ಎಲ್ಲಾ ಮಹಿಳೆಯರಲ್ಲೂ ಸುಪ್ತವಾದ ಚೈತನ್ಯವಿದೆ. ಅಳಿಸಿ ಹೋಗುವ ಪರಂಪರೆ, ವಿಚಾರಗಳನ್ನು ಇತರರಿಗೆ ತಿಳಿಸಲು, ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ರೀತಿಯ ಕಾರ್ಯಕ್ರಮಗಳಿಂದ ಸಾಧ್ಯ.ಹಿಂದಿನ ಕಾಲದ ಆಚಾರ ವಿಚಾರಗಳು ನಶಿಸುತ್ತಿದೆ. ಪರಂಪರಾಗತ ಜೀವನ ಶೈಲಿ, ಬೇಸಾಯ ಪದ್ಧತಿಯನ್ನು ಅನುಸರಿಸ ಬೇಕಾಗಿದೆ. ಮುಂದಿನ ಪೀಳಿಗೆಯನ್ನು ಚಟುವಟಿಕೆಗಳ ಮೂಲಕ ಮಾನಸಿಕವಾಗಿ ಸಜ್ಜುಗೊಳಿಸುವುದು  ಅನಿವಾರ್ಯ, ಗ್ರಾ.ಪಂ.ವ್ಯಾಪ್ತಿಯ ಬಂಜರು ಭೂಮಿಗಳನ್ನು ಬೆಳೆ, ತರಕಾರಿಗಳನ್ನು ಬೆಳೆದು ನಳ ನಳಿಸುವಂತೆ ಮಾಡಬೇಕಾಗಿದೆ. ಮಾರುಕಟ್ಟೆಯಿಂದ ವಿಷ ಆಹಾರ ಪದಾರ್ಥಗಳನ್ನು ಹಣ ಕೊಟ್ಟು ಖರೀದಿಸಿ ರೋಗ ರುಜಿನಗಳ ದಾಸರಾಗುವ ಬದಲು ಸ್ವಯಂ ಕೃಷಿ ನಡೆಸಿ ಸ್ವಾವಲಂಬಿಗಳಾಗಿ ಜೀವಿಸಬೇಕು ಎಂದರು.
    ಕುಟುಂಬ ಶ್ರೀ ಸಿಡಿಎಸ್ ಅಧ್ಯಕ್ಷೆ ಶಾರದಾ ಡಿ. ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ  ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜಾರಾಂ ಬಾಳಿಗ, ಪೆರ್ಲ ಸೇವಾ ಸಹಕಾರಿ ಸಂಘವು ಗ್ರಾಮೀಣ ಕೃಷಿಕರಿಗಾಗಿ ಬಡ್ಡಿರಹಿತ ಸಾಲ, ಟಿಲ್ಲರ್, ಟ್ರೇಕ್ಟರ್, ಡ್ರಿಲ್ಲರ್, ಮರ ಕಡಿಯುವ, ಹುಲ್ಲು,ಕಳೆ ಕೀಳುವ ಯಂತ್ರೋಪಕರಣ ಸೇರಿದಂತೆ ಹಲವು ರೀತಿಯ ಸವಲತ್ತುಗಳನ್ನು ಒದಗಿಸುತ್ತಿವೆ. ಈ ರೀತಿಯ ಸವಲತ್ತುಗಳ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಜಿಲ್ಲಾ ಪಂ.ಸದಸ್ಯೆ ಪುಷ್ಪ ಅಮೆಕ್ಕಳ, ಬ್ಲಾಕ್ ಪಂ.ಸದಸ್ಯೆ ಸವಿತಾ ಬಾಳಿಕೆ, ಪಂ.ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ,ಕುಟುಂಬಶ್ರೀ ಜಿಲ್ಲಾ ಮಿಶನ್  ಕಾರ್ಯಕ್ರಮ ವ್ಯವಸ್ಥಾಪಕ ಜೆಸೀಮ್, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
   ಗ್ರಾಮ ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಬಜಕೂಡ್ಲು, ವಾಡರ್್ ಪ್ರತಿನಿಧಿಗಳಾದ ಮಲ್ಲಿಕಾ ರೈ, ಸತೀಶ್ ಕುಲಾಲ್,  ಶಶಿಕಲಾ ವೈ, ಸಿದ್ದಿಕ್ ಒಳಮೊಗೇರು, ಪ್ರೇಮಾ, ಪೆರ್ಲ ಬಯಲು ಗದ್ದೆಯ ಮಾಲಕ,ನಿವೃತ್ತ ಉಪ ನೊಂದಾವಣಾಧಿಕಾರಿ ಮೊಹಮ್ಮದಾಲಿ ಪೆರ್ಲ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದಶರ್ಿ ಪ್ರಭಾಕರ್ ಕೆ.ಪಿ, ಕುಟುಂಬಶ್ರೀ ಜಿಲ್ಲಾ ತರಬೇತುದಾರ ಸುಕುಮಾರನ್ ಬೆಳ್ಳೂರು, ಬಾಲ ಸಭಾ, ಆಶ್ರಯ ಯೋಜನೆ ಸಂಚಾಲಕಿ ದೈನಬಿ, ಸಂಘ ಕೃಷಿ ಗುಂಪಿನ ಸದಸ್ಯರು, ಕುಟುಂಬಶ್ರೀ ಎಡಿಎಸ್, ಸಿಡಿಎಸ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
     ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಕೆದಂಬಾಯಿಮೂಲೆ ಸ್ವಾಗತಿಸಿ, ಸಾಮಾಜಿಕ ಅಭಿವೃದ್ಧಿ ಸಂಚಾಲಕಿ ಯಾಸ್ಮಿನ್ ವಂದಿಸಿದರು.
     ಮಳೆ-ಬೆಳೆ ಮಹೋತ್ಸವ ಪಂಚಾಯಿತಿ ಕಚೇರಿ ಬಳಿಯಿಂದ ಬಯಲುಗದ್ದೆಗೆ ಮೆರವಣಿಗೆಯೊಂದಿಗೆ ಆರಂಭವಾಯಿತು.
ಉದ್ಘಾಟನೆ ಕಲಶಕ್ಕೆ ಭತ್ತ ತುಂಬುವುದರ ಮೂಲಕ ನಡೆಸಲಾಯಿತು. ತಾಂಬೂಲ ನೀಡುವುದರ ಮೂಲಕ ಅತಿಥಿ ಅಭ್ಯಾಗತರನ್ನು ಸ್ವಾಗತಿಸಲಾಯಿತು.
    ಪರಂಪರಾಗತ ನಾಟಿವೈದ್ಯ ಸ್ವರ್ಗ ಮಲೆತ್ತಡ್ಕ ಐತಪ್ಪ ನಾಯ್ಕ್, ನಾಟಿ,ಬೇಸಾಯ ಕಾಮರ್ಿಕೆ ಕಮಲ, ಪೆರ್ಲ ಬಯಲು ಗದ್ದೆ ಒಡತಿ, ಪಂ.ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ಅವರನ್ನು ಅಭಿನಂದಿಸಲಾಯಿತು.
    ಕೆಸರುಗದ್ದೆ ಓಟ, ರಿಲೇ, ಲಿಂಬೆ ಚಮಚ ಓಟ, ಬಲೂನು ಒಡೆಯುವ, ಪಾರ್ಧನ ಹಾಡುವ ಸ್ಪಧರ್ೆ ಏರ್ಪಡಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.





 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries