HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             2019 ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆಯಾದ 'ಅವಿಶ್ವಾಸ ನಿರ್ಣಯ'
     ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸಕರ್ಾರದ ವಿರುದ್ಧ ಪ್ರತಿಪಕ್ಷಗಳ ಪಾಳೆಯ ಮಂಡಿಸಿದ್ದ ಅವಿಶ್ವಾಸ ನಿರ್ಣಯ 2019ರ ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆ ಎಂಬಂತೆ ಕಂಡು ಬಂದಿತ್ತು.
   ಮೋದಿ ಸಕರ್ಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ನಿರೀಕ್ಷೆಯಂತೆಯೇ ಸೋಲಾಗಿದ್ದು, ಈ ಮೂಲಕ 2019ನೇ ಲೋಕಸಭಾ ಚುನಾವಣೆಯಲ್ಲಿ ತನ್ನ ಬಲ ಏನೆಂಬುದನ್ನು ಎನ್'ಡಿಎ ಸಾಬೀತುಪಡಿಸಿದೆ.
    ಸಂಖ್ಯಾಬಲದ ಕೊರತೆ ಇದ್ದರೂ ತೆಲುಗು ದೇಶಂ ಹಾಗೂ ಕಾಂಗ್ರೆಸ್ ಆದಿಯಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು. ಸಕರ್ಾರವನ್ನು ಬೀಳುವುದಕ್ಕಿಂತಲೂ ಮುಖ್ಯವಾಗಿ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದೇ ಕೈಕೊಟ್ಟ ಕೇಂದ್ರ ಸಕರ್ಾರವನ್ನು ತರಾಟೆಗೆ ತೆಗೆದುಕೊಳ್ಳುವುದು ತೆಲುಗುದೇಶಂ ಪಕ್ಷದ ಉದ್ದೇಶವಾಗಿತ್ತು.
   ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸಕರ್ಾರವನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಕೆಲ ಪಕ್ಷಗಳು ಈ ನಿರ್ಣಯವನ್ನು ಬೆಂಬಲಿಸಿದ್ದವು.
    ಶುಕ್ರವಾರ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ಭಾರೀ ಚಚರ್ೆಗಳು ನಡೆದಿತ್ತು. ಬೆಳಿಗ್ಗೆ 11ರಿಂದಲೇ ಆರಂಭವಾದ ಅವಿಶ್ವಾಸ ಕಲಾಪ, ಲೋಕಸಭೆ ಈ ವರೆಗೂ ಕಂಡು ಕೇಳರಿಯದ ವಿಚಿತ್ರ ನಡವಳಿಕೆಗಳಿಗೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರು ರಾಜಕೀಯ ಎದುರಾಳಿ ಮೋದಿಯವರ ಕುಚರ್ಿ ಬಳಿಯೇ ತೆರಳಿ ಅಪ್ಪಿಕೊಂಡು ಆತ್ಮೀಯತೆ ತೋರಿದರು. ಮತ್ತೊಂದೆಡೆ ಸದನದಲ್ಲಿ ಕಣ್ಣು ಹೊಡೆಯುವ ಮೂಲಕ ಗಮನ ಸೆಳೆದರು. ಘಟಾನುಘಟಿ ನಾಯಕರ ಭಾಷಣದ ಬಳಿಕ ರಾತ್ರಿ ಪ್ರಧಾನಿ ಮೋದಿ ಮಾತನಾಡಿ, ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.
   ಚಚರ್ೆ ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, ಅದು ಬಿದ್ದು ಹೋಯಿತು ಎಂದು ಸ್ಪೀಕರ್ ಘೋಷಣೆ ಮಾಡಿದರು. ಆದರೆ, ನಂತರ ವಿರೋಧ ಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ 451 ಸದಸ್ಯರು ಹಾಜರಿದ್ದರು. ವಿಪಕ್ಷಗಳ ನಿರ್ಣಯದ ವಿರುದ್ಧ 325 ಮತಗಳು ಚಲಾವಣೆಯಾಗಿದೆ. ನಿರ್ಣಯದ ಪರ ಕೇವಲ 126 ಮತ ಚಲಾವಣೆಯಾಗಿದೆ. ಈ ಮೂಲಕ ಸಕರ್ಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.  ಬೆಂಬಲಿಸಿದ್ದ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿಯ ಕಟುಟೀಕಾಕಾರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಶಿವಸೇನೆ, ಟಿಆರ್ಎಸ್, ಒಡಿಶಾದ ಬಿಜೆಡಿ ಸದಸ್ಯರು ನಿರೀಕ್ಷೆಯಂತೆಯೇ ಗೈರು ಹಾಜರಾಗಿದ್ದರು. ಎಐಡಿಎಂಕೆ ಸದಸ್ಯರು ಸಕರ್ಾರದ ಪರವಾಗಿ ಮತ ಹಾಕಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries