HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನ ಮಹೋತ್ಸವ
    ಮಂಜೇಶ್ವರ: ಹೊಸಂಗಡಿಯ ರಿಫಾ ಸೆಂಟರ್ನಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದ 22ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಉಚಿತ ಸಸಿ ವಿತರಣಾ ಕಾರ್ಯಕ್ರಮ ಜರುಗಿತು.
   1997ನೇ ಜುಲೈ ತಿಂಗಳ 3ರಂದು ಬಿ.ರಮಾನಾಥ ರೈ ಅವರಿಂದ ಹೊಸಂಗಡಿಯ ಹಿಲ್ಸೈಡ್  ಕಾಂಪ್ಲೆಕ್ಸ್ನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಉದ್ಘಾಟಿಸಲ್ಪಟ್ಟಿತ್ತು. ಡಾ.ಮುರಲೀ ಮೋಹನ್ ಚೂಂತಾರು ಮತ್ತು ಡಾ.ರಾಜಶ್ರೀ ಮೋಹನ್ ಇದರ ಸಾರಥ್ಯದಲ್ಲಿ ಆರಂಭಗೊಂಡ ಸುರಕ್ಷಾ ದಂತ ಚಿಕಿತ್ಸಾಲಯವಾಗಿ ಅಭಿವೃದ್ಧಿಗೊಂಡು ಇದೀಗ ಯಶಸ್ವಿ 21 ಸಂವತ್ಸರಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದೆ. 22ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇದರ ವತಿಯಿಂದ ಉಚಿತ ಸಸಿ ವಿತರಣೆ ಕಾರ್ಯಕ್ರಮ ಜರುಗಿತು.
    ದಂತ ಚಿಕಿತ್ಸಾಲಯಕ್ಕೆ ಬಂದ ಎಲ್ಲಾ ರೋಗಿಗಳಿಗೆ ಒಂದೊಂದು ಗಿಡಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ವನ ಮಹೋತ್ಸವ ಆಚರಿಸಿ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಳೆದ ವರ್ಷವೂ ಮಾವು, ಹಲಸು, ನೇರಳೆ, ಪೇರಳೆ, ಬಾದಾಮಿ ಮುಂತಾದ ಗಿಡಗಳನ್ನು ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಅವರು ಮಾತನಾಡಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಮತ್ತು ರೋಗದ ಬಗೆಗಿನ ಜಾಗೃತಿ ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಡಾ.ಮುರಲೀ ಮತ್ತು ಡಾ.ರಾಜಶ್ರೀ ಇವರ ಪರಿಸರ ಪ್ರಜ್ಞೆ, ಪರಿಸರ ಕಾಳಜಿ ಮತ್ತು ಸೇವಾ ಮನೋಭಾವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಹೊಸಂಗಡಿಯ ಪರಿಸರದ ಜನರ ಹಲ್ಲಿನ ಆರೋಗ್ಯವನ್ನೂ ಕಾಪಾಡುವಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಇದರ ಪಾತ್ರ ಮಹತ್ವರವಾಗಿದ್ದು ಮುಂದೆಯು ಅವರ ಸೇವೆ ನಿರಂತರವಾಗಿ ಸಿಗಲಿ ಎಂದು ಹಾರೈಸಿದರು.
    ಜಿಲ್ಲಾ ಪಂಚಾಯತು ಸದಸ್ಯೆ ಮುಮ್ತಾಜ್ ಸಮೀರಾ ಅವರು ಸುಕುಮಾರ ಶಾಂತಿ ನಗರ ಅವರಿಗೆ ಸಸಿ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವಿಲ್ಮಾ ಡಿ ಆಲೈಡಾ ಅವರು ಅನಿತಾ ಅವರಿಗೆ ಗಿಡ ನೀಡಿ ಶುಭ ಹಾರೈಸಿದರು. ಹೆಲ್ತ್ ಮಲಬಾರ್ ಇದರ ನಿದರ್ೇಶಕ ಹಮೀದ್ ಬೋರ್ಕಳ ಅವರು ಉಪಸ್ಥಿತರಿದ್ದರು. ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯೆ ಡಾ.ನೇಹಾ ಶರ್ಮ, ಸಿಬ್ಬಂದಿಗಳಾದ ರಮ್ಯ, ಪ್ರಿಯಾ, ಕಾವ್ಯ, ಯಶಸ್ವಿನಿ ಮುಂತಾದವರು ಉಪಸ್ಥಿತರಿದ್ದರು. ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಸಸಿ ವಿತರಿಸಲಾಯಿತು. ಸುಮಾರು ನೂರು ಗಿಡಗಳನ್ನು ವಿತರಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸುರಾಕ್ಷಾ ದಂತ ಚಿಕಿತ್ಸಾಲಯ ಈ ರೀತಿ ನಿರಂತರವಾಗಿ ವನ ಮಹೋತ್ಸವ ಮತ್ತು ಸಸಿ ವಿತರಣೆ ಮಾಡುತ್ತಿದ್ದು ಜನರಲ್ಲಿ ಉತ್ತಮ ಗಾಳಿ, ಬೆಳಕು ಮತ್ತು ಪರಿಸರ ಆರೋಗ್ಯಕ್ಕೆ ಅಗತ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries