ರಾಮಾಯಣ ಪಾರಾಯಣ
ಬದಿಯಡ್ಕ: ಶ್ರೀ ವಿಷ್ಣುಪ್ರಿಯ ಭಜನಾ ಸಂಘ ಹಾಗೂ ಕುಂಬಳೆ ಸೀಮೆಯ ರಾಮಾಯಣ ಮಾಸಾಚರಣೆ ಸಮಿತಿಯ ಆಶ್ರಯದಲ್ಲಿ ಕಳೆದ 23 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ರಾಮಾಯಣ ಪಾರಾಯಣವು ಕರ್ಕಟಕ (ಆಟಿ ತಿಂಗಳು) ಮಾಸ ಪ್ರಾರಂಭದ ದಿನದಿಂದ ಕೆಡೆಂಜಿ ಕ್ಷೇತ್ರದಲ್ಲಿ ಸಂಜೆ ಪ್ರಾರಂಭಗೊಂಡಿತು.
ರಾಮ ಮಾಸ್ಟರ್ ಇಕ್ಕೇರಿ ಪಾರಾಯಣವನ್ನು ನಡೆಸಿಕೊಟ್ಟರು. ಈಶ್ವರ ಮಾಸ್ಟರ್ ಪೆರಡಾಲ, ನಾರಾಯಣ ಕರಿಂಬಿಲ ಉಪಸ್ಥಿತರಿದ್ದರು. ಸಮಿತಿಯ ವತಿಯಿಂದ ಈ ಕರ್ಕಟಕ ಮಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ, ಭಜನಾ ಮಂದಿರಗಳಲ್ಲಿ, ತರವಾಡು ಮನೆಗಳಲ್ಲಿ, ಒಟ್ಟು 60 ಕೇಂದ್ರಗಳಲ್ಲಿ ರಾಮಾಯಣ ಪಾರಾಯಣ ನಡೆಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.