HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಜುಲೈ 24ರಂದು ನೀಚರ್ಾಲಿನಲ್ಲಿ ಜೈವಿಕ ಕೃಷಿ ಮಾಹಿತಿ ಶಿಬಿರ
    ಬದಿಯಡ್ಕ: ಸಹಜ ಕೃಷಿ, ಸಾವಯವ ಕೃಷಿ, ಹೋಮ ಕೃಷಿ, ಸಂಗೀತ ಕೃಷಿ, ಜೀವಾಮೃತ ಕೃಷಿ, ಯೋಗ ಕೃಷಿ ಮತ್ತು ನಕ್ಷತ್ರ ಕೃಷಿ ಮುಂತಾದ ಜೈವಿಕ ಕೃಷಿಯ ಬಗ್ಗೆ ಮಾಹಿತಿ ಕಾಯರ್ಾಗಾರವು ನೀಚರ್ಾಲು ಕುಮಾರ ಸ್ವಾಮಿ ಭಜನಾ ಮಂದಿರದಲ್ಲಿ ಜುಲೈ 24ರಂದು ಮಂಗಳವಾರ ಬೆಳಗ್ಗೆ 10.30ರಿಂದ ನಡೆಯಲಿರುವುದು.
ಸಂಪನ್ಮೂಲ ವ್ಯಕ್ತಿಗಳಾಗಿ ರಾಣೆಬೆನ್ನೂರು ಸಾವಯವ ಕೃಷಿ ತಜ್ಞರಾಗಿರುವ ಸಚಿನ್ ಸದಾಶಿವಪ್ಪ ಕಬ್ಬೂರ ಆಗಮಿಸಿ ಮಾಹಿತಿಯನ್ನು ನೀಡಲಿದ್ದಾರೆ. ಇವರು ಕನರ್ಾಟಕ ಹಾಗೂ ಕೇರಳ ರಾಜ್ಯದ ವಿವಿದೆಡೆಗಳ ಕೃಷಿಯ ಹಾಗೂ ಮಣ್ಣಿನ ಗುಣಮಟ್ಟದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿರುತ್ತಾರೆ. ಕೃಷಿಯನ್ನು ಹಾಳುಗೆಡಹುವ, ಇಳುವರಿಯನ್ನು ಕುಂಠಿತಗೊಳಿಸುವ ಕಾರಣಗಳಿಗೆ ಸೂಕ್ತ ಪರಿಹಾರವನ್ನು ತಿಳಿಸುವುದಲ್ಲದೆ ಮಣ್ಣಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾವಯವ ಪದ್ಧತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವುದಲ್ಲದೆ, ಪ್ರಶ್ನೋತ್ತರದ ಸಂದರ್ಭದಲ್ಲಿ ಕೃಷಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ತಿಳಿಸಲಿದ್ದಾರೆ.
ಕೃಷಿಕರು ಈ ಮಾಹಿತಿ ಕಾಯರ್ಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಬಂಧಪಟ್ಟವರು ತಿಳಿಸಿರುತ್ತಾರೆ. ಸಂಪೂರ್ಣ ಉಚಿತವಾಗಿ ನಡೆಯುವ ಶಿಬಿರದ ಹೆಚ್ಚಿನ ಮಾಹಿತಿಗಾಗಿ 9480530842 ಸಂಚಾರವಾಣಿಯನ್ನು ಸಂಪಕರ್ಿಸಬಹುದಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries