ಚೆರ್ಕಳ ಕಲ್ಲಡ್ಕ ರಸ್ತೆ ಶೋಚನೀಯಾವಸ್ಥೆ ವಿರುದ್ಧ ಬ್ಯಾನರ್ ಪ್ರತ್ಯಕ್ಷ
ಪೆರ್ಲ: ಕೇರಳ ಕನರ್ಾಟಕ ಅಂತಾರಾಜ್ಯ ಸಂಪರ್ಕದ ಚೆರ್ಕಳ-ಕಲ್ಲಡ್ಕ ರಸ್ತೆಯ ಚೆರ್ಕಳದಿಂದ ಕನರ್ಾಟಕ ಗಡಿಭಾಗದ ಅಡ್ಕಸ್ಥಳ ಸಾರಡ್ಕ ತನಕದ 29 ಕಿ.ಮೀ. ರಸ್ತೆಯು ಮತ್ತಷ್ಟು ಶೋಚನೀಯಾವಸ್ಥೆಗೆ ತಲಪಿದ್ದು ಇದನ್ನು ಮೌನರೀತಿಯಲ್ಲಿ ಪ್ರತಿಭಟಿಸಿ ಅಡ್ಕಸ್ಥಳದಲ್ಲಿ ಸೋಮವಾರ ಬೆಳಗ್ಗೆ ಬ್ಯಾನರ್ ಪ್ರತ್ಯಕ್ಷಗೊಂಡಿದೆ.
ಬ್ಯಾನರ್ ನ ಒಂದು ಬದಿ ಅಂದರೆ ಕನರ್ಾಟಕದಿಂದ ಕೇರಳ ಪ್ರವೇಶಿಸುವಾಗ 'ದುಃಖದೊಂದಿಗೆ ಕೇರಳಕ್ಕೆ ಸ್ವಾಗತಿಸುತ್ತಿದ್ದೇವೆ, ನಿಮ್ಮ ಚಾಲನೆಯ ಓಫ್ ರೋಡ್ ಟಾಸ್ಕ್ ಇಲ್ಲಿಂದ ಆರಂಭವಾಗುವುದು, ಕಲ್ಲಡ್ಕ ಚೆರ್ಕಳ ರಾಜ್ಯ ಹೆದ್ದಾರಿ, ಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಓಫ್ ರೋಡ್ ಸ್ಪಧರ್ೆಯ ಪ್ರಾಯೋಜಕರು ಎಲ್ ಡಿ ಎಫ್ ಸಂಸದರು, ಯು ಡಿ ಎಫ್ ಶಾಸಕರು, ಬಿಜೆಪಿ ಪಂಚಾಯಿತಿ' ಎಂದು ಬರೆದಿದೆ.
ಅದೇ ರೀತಿ ಕೇರಳದಿಂದ ಕನರ್ಾಟಕ ಪ್ರವೇಶಿಸುವ ಭಾಗದಲ್ಲಿ 'ನೀವು ಯಶಸ್ವಿಯಾಗಿ ಓಫ್ ರೋಡ್ ಮೋಟಾರ್ ಸ್ಪೋಟ್ಸರ್್ ಗುರಿ ಮುಟ್ಟಿರುತ್ತೀರಿ, ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ, ನೀವು ಯುನೈಟೆಡ್ ಕಿಂಗ್ಡಮ್ ಚಾಲನಾ ಪರವಾನಿಗೆಗೆ ಅಜರ್ಿ ಸಲ್ಲಿಸಬಹುದು, ಪ್ರಾಯೋಜಕತ್ವ ಎಲ್ ಡಿ ಎಫ್ ಸಂಸದ, ಯು ಡಿ ಎಫ್ ಶಾಸಕ, ಬಿಜೆಪಿ ಪಂಚಾಯತ್ ಎಂದು ಬರೆಯಲ್ಪಟ್ಟಿದೆ.
ಹಲವು ಪ್ರತಿಭಟನೆಗಳಿಗೆ ಕಾರಣವಾದ ಈ ರಸ್ತೆಯ ಶೋಚನೀಯಾವಸ್ಥೆ ಪರಿಹಾರ ಕಾಣದಿರುವುದಕ್ಕೆ ಮೌನ ಪ್ರತಿಭಟನೆಯೊಂದಿಗೆ ಸ್ಥಾಪಿಸಿದ ಈ ಬ್ಯಾನರ್ ದೂರದೂರಿನಿಂದ ಕೇರಳಕ್ಕೆ ಆಗಮಿಸುವ ಚಾಲಕರ ಗಮನ ಸೆಳೆಯುತ್ತಿದ್ದು ಒಂದು ಕ್ಷಣ ನಿಂತು, ಓದಿ, ನಕ್ಕು ಮುಂದುವರಿಯುತ್ತಿದ್ದಾರೆ.
14 ವರ್ಷಗಳ ಮೊದಲು ಮೆಕ್ಕಾಡಾಂ ರೀತಿಯ ಡಾಮರೀಕರಣ ನಡೆದ ಈ ರಸ್ತೆಯ ಟಾರಿಂಗ್ ಗುಣಮಟ್ಟದ ಅವಧಿ 5 ವರ್ಷಗಳಾಗಿದೆ.ಆದರೆ ಇದೀಗ ಮೂರು ಪಟ್ಟು ಅವಧಿ ಕಳೆದು ಹೋಗಿದ್ದರೂ ಸಂಪೂರ್ಣ ಟಾರಿಂಗ್ ಇದುವರೆಗೆ ನಡೆದಿಲ್ಲ.
ಈ ರಸ್ತೆಯು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ದಜರ್ೆಗೆ ಭಡ್ತಿ ಪಡೆಯುವ ಸೂಚನೆ ಲಭಿಸಿದ್ದರೂ ಇದುವರೆಗೆ ಈ ನಿಟ್ಟಿನ ಯಾವುದೇ ಕಾಮಗಾರಿಯ ಸೂಚನೆ ಕಂಡುಬಂದಿಲ್ಲ. ರಸ್ತೆಯು ಮಳೆಯಿಂದಾಗಿ ಮತ್ತಷ್ಟು ಶಿಥಿಲಗೊಂಡಿದ್ದು ವಾಹನಗಳು ಪರದಾಡಿಕೊಂಡು ಸಾಗಬೇಕಾಗಿದೆ. ಅಂತಾರಾಜ್ಯ ಸಂಪರ್ಕ ರಸ್ತೆ ಆಗಿರುವುದರಿಂದ ಈ ರಸ್ತೆಯಲ್ಲಿ ಎರಡೂ ರಾಜ್ಯಗಳ ಖಾಸಗೀ ಹಾಗೂ ಸರಕಾರಿ ಬಸ್ ಗಳು, ಲಾರಿ, ಇನ್ನಿತರ ವಾಹನಗಳು ದಿನದ 24 ಗಂಟೆಯೂ ಎಡೆ ಬಿಡದೆ ಸಂಚರಿಸುತ್ತಿವೆ.ದುರಸ್ತಿಗಾಗಿ ಹಲವಾರು ಹೋರಾಟಗಳು ನಡೆದಿವೆ.ವ್ಯಾಪಾರಿ ಏಕೋಪನಾ ಸಮಿತಿ, ವಿವಿಧ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಅನಿದರ್ಿಷ್ಟಾವಧಿ ಹೋರಾಟ,ರಸ್ತೆ ತಡೆ, ಅಳು ಸಮರ,ಲೋಕೋಪಯೋಗಿ ಇಲಾಖೆ ಮುತ್ತಿಗೆ, ಸೆಗಣಿ ಸಮರ ಅಲ್ಲದೆ ಬಿಜೆಪಿ ಕಾಸರಗೋಡು ಸಹಿತ ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಅಲ್ಲಲ್ಲಿ ರಸ್ತೆ ತಡೆದು ಚಕ್ರಸ್ಥಂಭನ ಚಳವಳಿ, ಅಟೋ ಟ್ಯಾಕ್ಸೀ ಚಾಲಕರಿಂದ ಬಾಳೆ ಗಿಡ ನೆಟ್ಟು ಪ್ರತಿಭಟನೆಗಳು ನಡೆದಿದ್ದವು.
ಚೆರ್ಕಳದಿಂದ ಉಕ್ಕಿನಡ್ಕದವರೆಗೆ ಮೆಕ್ಡಾಂ ಕಾಮಗಾರಿಗೆ ರೂ 39ಕೋಟಿ 76 ಲಕ್ಷ ರೂ ಅನುದಾನ ಮಂಜೂರು!?
ಇದೇ ವೇಳೆ ಚೆರ್ಕಳ ಕಲ್ಲಡ್ಕ ರಸ್ತೆಗೆ ಸಂಭಂಧಿಸಿದಂತೆ 47.9 ಕೋಟಿ ರೂಗಳ ಸಮಗ್ರ ಯೋಜನಾ ವರದಿಯ ಅನ್ವಯ ಆಥರ್ಿಕ ಸಹಾಯ ನೀಡುವ ಕಿಫ್ಬಿ (ಕೇರಳ ಇನ್ಫ್ರಾ ಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಫಿನಾನ್ಸ್ ಬೋಡರ್್) ಪಿಡಬ್ಲ್ಯೂಡಿ 006-17 ಪರಿಗಣನೆಯಲ್ಲಿದ್ದರೂ ಇದೀಗ ಕಿಫ್ಬಿ ನಿದರ್ೇಶಕ ಮಂಡಳಿ ಸಭೆಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆಯ ಸಂಪೂರ್ಣ ಡಾಮರೀಕರಣಕ್ಕೆ ರೂ 39 ಕೋಟಿ 76 ಲಕ್ಷ ರೂ ಅನುಮತಿ ನೀಡಿದ್ದು ಗುತ್ತಿಗೆ ಪ್ರಕ್ರಿಯೆ ಜಾರಿಯಲ್ಲಿದ್ದು ಮುಂದಿನ ತಿಂಗಳು ಆ. 9ಕ್ಕೆ ಗುತ್ತಿಗೆ ತೆರೆಯಲಾಗುವುದು ಎಂದು ಲೋಕೋಪಯೋಗಿ ಅಧಿಕಾರಿಗಳು ಹೇಳಿದ್ದಾರೆ.
ಗುತ್ತಿಗೆ ಪ್ರಕ್ರಿಯೆ ಬಳಿಕ ಈ ಕಾಮಗಾರಿ ಆರಂಭವಾದರೂ ಉಕ್ಕಿನಡ್ಕದಿಂದ ಅಡ್ಕಸ್ಥಳ, ಸಾರಡ್ಕ ಗಡಿ ತನಕದ 10 ಕಿ.ಮೀ ರಸ್ತೆಗೆ ಯಾವುದೇ ಅನುದಾನ ಮಂಜೂರಾಗದ ಕಾರಣ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ.