ನಿವೃತ್ತರಿಗೆ ಬೀಳ್ಕೊಡುಗೆ- ತಾಳ ಮದ್ದಳೆ
ಮುಳ್ಳೇರಿಯ: ಆದೂರು ಗೇರು ಕೃಷಿ ಇಲಾಖೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣ.ಕೆ ಅವರ ನಿವೃತ್ತಿ ಸಮಾರಂಭದ ಅಂಗವಾಗಿ ಅವರ ಮಾಯಿಲಂಕೋಟೆ ಮನೆಯಲ್ಲಿ ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಕೂಟ ಇತ್ತೀಚೆಗೆ ನಡೆಯಿತು.
ಭರತಾಗಮನ- ನಾಸಿಕಚ್ಛೇಧನ-ಅಂಭಾ ಶಪಥ ಪ್ರಸಂಗದಲ್ಲಿ ಭಾಗವತರಾಗಿ ಜಯರಾಮ ಅಡೂರು, ಕೃಷ್ಣ ಕುಂಟಾರು, ಶಂಕರ ಕೋರಿಕ್ಕಾರು, ಚೆಂಡೆ ವಾದನದಲ್ಲಿ ವೆಂಕಟ್ರಮಣ ಕುಂಟಾರು, ಮದ್ದಳೆ ವಾದನದಲ್ಲಿ ಶಿವದಾಸ ಮಾಯಿಲಂಕೋಟೆ, ಗಿರೀಶ ಚಳ್ಳಂಗೋಡು ಸಹಕರಿಸಿದರು. ಪಾತ್ರ ವರ್ಗದಲ್ಲಿ ಕೃಷ್ಣೋಜಿ ರಾವ್ ಮಾಟೆ(ಶ್ರೀರಾಮ), ದಿವಾಕರ, ದಿಲೀಪ ಕುಮಾರ(ಲಕ್ಷ್ಮಣ), ರಾಜೇಶ್ ಕುಂಟಾರು(ಸೀತೆ), ಸುನಿಲ್ ಕುಮಾರ್(ಋಷಿ), ಚಂದ್ರಶೇಖರ ಕುಂಟಾರು(ಶೂರ್ಪನಖಿ), ರವೀಂದ್ರ.ಎಚ್(ಮಾಯಾಶೂರ್ಪನಖಿ), ಜಗನ್ನಾಥ.ಎಚ್(ಭರತ ಮತ್ತು ಪರಶುರಾಮ), ಮಾಧವ ಕುಂಟಾರು(ವಸಿಷ್ಠ ಮತ್ತು ಸಾಲ್ವ), ನಾರಾಯಣ ಮಣಿಯಾಣಿ ಮೂಲಡ್ಕ(ಭೀಷ್ಮ), ಪದ್ಮನಾಭ ಕುಂಡಂಗುಳಿ(ಅಂಬೆ), ಜಯರಾಮ ಪಾಟಾಳಿ ಪಡುಮಲೆ(ಬ್ರಾಹ್ಮಣ) ಪಾತ್ರಗಳಿಂದ ಗಮನ ಸೆಳೆದರು.