ಮುಟ್ಟು ಅಸ್ಪೃಶ್ಯವಲ್ಲ- ಶಬರಿಮಲೆ ಯಾತ್ರೆಗೂ ಮುನ್ನ ಇಂದ್ರಿಯ ನಿಗ್ರಹ ಷರತ್ತು ಒಪ್ಪಲು ಅಸಾಧ್ಯ: ಸುಪ್ರೀಂ
ನವದೆಹಲಿ: ರಾಷ್ಟ್ರದ ಪ್ರಸಿದ್ದ ಯಾತ್ರಾಸ್ಥಳ ಶಬರಿಮಲೆ ದೇವಸ್ಥಾನಕ್ಕೆ ಯಾತ್ರೆ ಕೈಗೊಳ್ಳುವ ಮುನ್ನ 41 ದಿನಗಳ ಕಾಲ ಇಂದ್ರಿಯಗಳನ್ನು ನಿಗ್ರಹಿಸಬೇಕು ಎಂಬ ಷರತ್ತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋಟರ್್ ಗುರುವಾರ ಸ್ಪಷ್ಟಪಡಿಸಿದೆ.
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಿಕ ಪೀಠ. ದೇವರ ಮೇಲಿನ ಭಕ್ತಿಯಿಂದ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಿದೆ.
ದೇವಸ್ಥಾನ ಮಂಡಳಿಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಎಂ ಸಿಂಘ್ವಿ ಅವರು, ಮುಟ್ಟಿನ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸಬಾರದು ಎಂಬ ನಂಬಿಕೆಯನ್ನು ಆಚರಿಸುವ ವಿಶ್ವದ ಏಕೈಕ ದೇವಾಲಯ ಇದಾಗಿದೆ ಎಂದರು.
ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರು ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಆದರೆ ಕೇವಲ 10ರಿಂದ 50 ವರ್ಷದ ಮಹಿಳೆಯರಿಗೆ ಮಾತ್ರ ಪ್ರವೇಶ ನಿಷೇಧಿಸಲಾಗಿದೆ. ಇದಕ್ಕೆ ಕಾರಣ ಯಾತ್ರೆಗೂ ಮುನ್ನ 41 ದಿನಗಳ ಕಾಲ ಇಂದ್ರಿಯ ನಿಗ್ರಹ ಅಸಾಧ್ಯ ಎಂದು ಸಿಂಘ್ವಿ ಹೇಳಿದರು.
41 ದಿನಗಳ ಇಂದ್ರಿಯ ನಿಗ್ರಹ ಅಸಾಧ್ಯ ಎಂಬ ಕಾರಣಕ್ಕೆ ನೀವು ಈ ಅಸಾಧ್ಯವಾದ ಷರತ್ತು ವಿಧಿಸುತ್ತಿದ್ದೀರಿ. ಈ ಮೂಲಕ ಕಾನೂನಿನಲ್ಲಿ ಏನು ಮಾಡಬಾರದು ಅದನ್ನೇ ನೀವು ಮಾಡುತ್ತಿದ್ದೀರಿ ಎಂದು ದೇವಸ್ಥಾನ ಮಂಡಳಿಯನ್ನು ಕೋಟರ್್ ತರಾಟೆಗೆ ತೆಗೆದುಕೊಂಡಿದೆ.
ಮುಟ್ಟಾಗುವ ಮಹಿಳೆಯರು ಅಶುದ್ಧರಾಗಿದ್ದಾರೆ ಎಂಬ ಆಧಾರದ ಮೇಲೆ ಅವರನ್ನು ಹೊರಗಿಡುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಈ ಪ್ರಕರಣದಲ್ಲಿ ಸಂವಿಧಾನದ 17ನೇ(ಅಸ್ಪೃಶ್ಯತೆ ನಿಷೇಧ) ವಿಧಿಯ ವಿಸ್ತರಣೆಯನ್ನು ನಾನು ಬಯಸುತ್ತೇನೆ' ಎಂದು ಅಮಿಕಸ್ ಕ್ಯುರಿಯಾಗಿ ಕೋಟರ್್ ಗೆ ಸಹಾಯ ಮಾಡುತ್ತಿರುವ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ವಾದಿಸಿದರು.
ವಾದ - ಪ್ರತಿವಾದ ಆಲಿಸಿದ ಕೋಟರ್್, ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.
ಬುಧವಾರವಷ್ಟೇ ಈ ಬಗ್ಗೆ ಒಮ್ಮೆ ದೇಗುಲವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದರೆ, ಎಲ್ಲರೂ ಪ್ರವೇಶಿಸಬಹುದಾಗಿದೆ. ಹೀಗಾಗಿ ಯಾವ ಆಧಾರದ ಮೇಲೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋಟರ್್ ಪ್ರಶ್ನಿಸಿತ್ತು.