ಸೀತಾಂಗೋಳಿಯಲ್ಲಿ ಕಥಾ ಸಲ್ಲಾಪ ಗೋಷ್ಠಿ ಭಾನುವಾರ
ಕುಂಬಳೆ: ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯ ಸರಣಿ ಸಾಹಿತ್ತಿಕ ಕಾರ್ಯಕ್ರಮದ ಭಾಗವಾಗಿ 5ನೇ ಸಾಹಿತ್ತಿಕ ಸರಣಿ ಕಾರ್ಯಕ್ರಮ "ಕಥಾ ಸಲ್ಲಾಪ" ಮಿನಿ ಕಥಾಗೋಷ್ಠಿ ಜು. 22 ರಂದು ಭಾನುವಾರ ಅಪರಾಹ್ನ 2 ರಿಂದ ಸೀತಾಂಗೋಳಿಯ ಕಲಾ ಗ್ರಾಮದಲ್ಲಿ ನಡೆಯಲಿದೆ.
ಹಿರಿಯ ಲೇಖಕಿ, ಕತೆಗಾತರ್ಿ ಕೃಷ್ಣವೇಣಿ ಕಿದೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಥಾ ಸಲ್ಲಾಪವನ್ನು ಲೇಖಕರೂ, ಪುತ್ತಿಗೆ ಗ್ರಾ.ಪಂ. ಮಾಜೀ ಆದ್ಯಕ್ಷರಾದ ನ್ಯಾಯವಾದಿ ಥೋಮಸ್ ಡಿಸೋಜಾ ಉದ್ಘಾಟಿಸುವರು. ಕಾಸರಗೋಡು ಸಿಪಿಸಿಆರ್ಐಯ ಮುಖ್ಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಹಳೆಮನೆ, ಸೀತಾಂಗೋಳಿ ಕಲಾಗ್ರಾಮದ ನಿದರ್ೇಶಕ ಪ್ರಸಾದ್ ಮಣಿಯಂಪಾರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕವಿಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಉಪಸ್ಥಿತರಿರುವರು. ಕಥಾ ಸಲ್ಲಾಪದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಉದಯೋನ್ಮುಖ ಕವಿಗಳು ಭಾಗವಹಿಸುವರು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.