HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಯಾದವ ಸೇವಾ ಸಂಘದಿಂದ ವಿದ್ಯಾಥರ್ಿವೇತನ
    ಬದಿಯಡ್ಕ : ಕಳೆದ 50 ವರ್ಷಗಳಿಂದ ಶಾಲಾ ವಿದ್ಯಾಥರ್ಿಗಳಿಗೆ ಕಲಿಕೆಗೆ ಬೇಕಾಗಿ ಆಥರ್ಿಕ ಸಹಾಯ ನೀಡುತ್ತಾ ಬಂದಿರುವುದು ಅಗಲ್ಪಾಡಿ ಯಾದವ ಸೇವಾ ಸಂಘದ ಹಿರಿಮೆಗಳಲ್ಲಿ ಒಂದಾಗಿದೆ. ನಿರಂತರವಾಗಿ ಸಮಾಜಮುಖೀ ಚಟುವಟಿಕೆಗಳಲ್ಲಿ ಸದಾ ಅಗ್ರಪಂಕ್ತಿಯಲ್ಲಿರುವ ಯಾದವ ಸೇವಾ ಸಂಘದ ವತಿಯಿಂದ ಇತ್ತೀಚೆಗೆ ಸಮುದಾಯದ ಸದಸ್ಯರ ಮಕ್ಕಳಿಗೆ ವಿದ್ಯಾಥರ್ಿವೇತನವನ್ನು ವಿತರಿಸಲಾಯಿತು.
ಒಂದನೇ ತರಗತಿಯಿಂದ ಮೊದಲ್ಗೊಂಡು ಪ್ಲಸ್ ಟು ತನಕ ಪ್ರಥಮ ಹಂತದಲ್ಲೂ, ಪ್ಲಸ್ಟುವಿನಿಂದ ಮೇಲ್ಪಟ್ಟು ಪದವಿ, ಸ್ನಾತಕೋತ್ತರ ಪದವಿಯವರೆಗೆ ದ್ವಿತೀಯ ಹಂತದಲ್ಲಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆದ ವಿತರಣಾ ಸಮಾರಂಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ಟರ್ ಅಗಲ್ಪಾಡಿ ಅವರು ಮಾತನಾಡಿ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಆಥರ್ಿಕ ವ್ಯವಸ್ಥೆಯ ಸೂಕ್ಷ್ಮಗಳು ಮತ್ತು ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನಗಳು ಸಾಮಾನ್ಯ ಜನರಿಗೆ ಸಿಗುವಲ್ಲಿ ತೊಂದರೆ ಆಗುತ್ತಿರುವುದನ್ನು ಮನದಟ್ಟು ಮಾಡಿದರು.
ಯಾದವ ಸೇವಾಸಂಘದ ಅಧ್ಯಕ್ಷ ಕುಂಞಿರಾಮ (ನಾರಾಯಣ) ಮಣಿಯಾಣಿ ಮಾರ್ಪನಡ್ಕ ಅಧ್ಯಕ್ಷತೆ ವಹಿಸಿದ್ದರು. ರಕ್ಷಾಧಿಕಾರಿಗಳಾದ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಅಶೋಕ್ ಮಾಸ್ತರ್ ಅಗಲ್ಪಾಡಿ, ಸಂಘದ ಉಪಾಧ್ಯಕ್ಷ ರತ್ನಾಕರ ಕಲ್ಲಕಟ್ಟ, ಮಂದಿರದ ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ, ಜಯಪ್ರಕಾಶ ಬೆದ್ರುಕೂಡ್ಲು, ಶಿವರಾಮ ಪದ್ಮಾರು ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪ್ರ.ಕಾರ್ಯದಶರ್ಿ ರಮೇಶಕೃಷ್ಣ ಪದ್ಮಾರು ಸ್ವಾಗತಿಸಿ, ಯಾದವ ಸೇವಾ ಸಂಘದ ಪ್ರಧಾನ ಕಾರ್ಯದಶರ್ಿ ನಾರಾಯಣ ಪದ್ಮಾರು ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries